ಅಶೋಕ ವೃಕ್ಷ  ನಿತ್ಯ ಹರಿದ್ವರ್ಣದ ಸಸ್ಯವಾಗಿದ್ದು, ಕಡು ವರ್ಣದ ಕಾಂಡದಿಂದ, ಅನೇಕ ರೆಂಬೆ ಕೊಂಬೆಗಳನ್ನು ಹೊಂದಿ, ಆಕರ್ಷಕ ಕಿತ್ತಳೆ ವರ್ಣದ ಹೂಗೊಂಚಲುಗಳನ್ನು ಸೆಪ್ಟೆಂಬರ್ ಆರಂಭವಾಗುತ್ತಿದ್ದಂತೆ ಬಿಡಲು ಆರಂಭಿಸುತ್ತದೆ.

ಹೂಗಳು ಧಾರ್ಮಿಕ ಕಾರ್ಯಗಳಲ್ಲಿ ಉಪಯೋಗವಾಗುತ್ತವೆ. ಆದರೂ ಔಷಧವಾಗಿ ಹೆಚ್ಚು ಬಳಕೆಯಲ್ಲಿದೆ.

ಚೆನ್ನಾಗಿ ಬಲಿತ ಕಾಂಡದ ತೊಗಟೆಯನ್ನು ಆಯುರ್ವೇದ ಪದ್ಧತಿಯಲ್ಲಿ ಕಷಾಯ ತಯಾರಿಸುವ ಕ್ರಮವೂ ಇದೆ. ಅತಿಸಾರ, ಆಂತರಿಕ ಗೆಡ್ಡೆಗಳು, ಹುಣ್ಣುಗಳು, ಮೂತ್ರನಾಳ ಸಂಬಂಧೀ ಖಾಯಿಲೆಗಳು, ಸಿಫಿಲಿಸ್ , ಲೈಂಗಿಕ ರೋಗಗಳಿಗೆ ಇದು ರಾಮಬಾಣವಾಗಿದೆ.

ಮುಟ್ಟಿನಲ್ಲಿ ಅಧಿಕ ರಕ್ತಸ್ರಾವದ ತೊಂದರೆಯುಳ್ಳವರು ಹೂವುಗಳನ್ನು ಕಷಾಯ ಅಥವಾ ಪುಡಿ ರೂಪದಲ್ಲಿ ಹಾಲು, ನೀರು ಮತ್ತು ಜೇನಿನೊಂದಿಗೆ ಸೇವಿಸಬಹುದು. ಅಶೋಕಾರಿಷ್ಟ, ಅಶೋಕವಟಿ ಮುಂತಾದ ಔಷಧಗಳು ಔಷಧದ ಅಂಗಡಿಗಳಲ್ಲಿ ದೊರೆಯುತ್ತವೆಯಾದರೂ ನಾವೇ ತಯಾರಿಸಿಕೊಳ್ಳುವ  ಇದರ ಮನೆಮದ್ದು ಉತ್ತಮ. 

ಈ ಗಿಡ ಜೀವನದ ಪ್ರತಿಯೊಂದು ದುಃಖವನ್ನೂ ದೂರ ಮಾಡುತ್ತದೆ. ಪ್ರತಿದಿನ ಅಶೋಕ ಮರಕ್ಕೆ ನೀರು ಹಾಕುವುದ್ರಿಂದ ದೇವರ ಕೃಪೆ ಪ್ರಾಪ್ತವಾಗುತ್ತದೆ.

ಸ್ತ್ರೀಯರ ಋತುಚಕ್ರ ಸರಿಯಿದ್ದು, ನಿರ್ಮಲ ಮನಸ್ಸಿನಿಂದ ಭಗವಂತನನ್ನು ನೆನೆಯುತ್ತಾ, ಆಶೋಕ ಮರದ ಎಲೆಗಳನ್ನು ಒಂದು ವಾರ ಸೇವಿಸಿದರೆ, ಸಂತಾನ ಪ್ರಾಪ್ತಿಯಾಗುತ್ತದೆಂಬ ನಂಬಿಕೆಯುಂಟು.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ