ಈ ಹಣ್ಣು ತುಂಬಾ ತಂಪು. ಇದು ಕಫನಾಶಕ ಮತ್ತು ರಕ್ತಪಿತ್ತನಾಶಕ. ಶ್ವಾಶಕೋಶದಲ್ಲಿ ಸೇರಿಕೊಂಡಿರುವ ಕಫವನ್ನು ಕರಗಿಸಿ ಹೊರ ಬರುವಂತೆ ಮಾಡುತ್ತದೆ. ಮೂಲ ವ್ಯಾಧಿ, ಮೂತ್ರಕೋಶದಲ್ಲಿ ಕಲ್ಲು ಮುಂತಾದ ವ್ಯಾಧಿಗಳಿಗೆ ಇದು ಪರಿಣಾಮಕಾರಿ. ಅಂಜೂರದ್ಲಲಿರುವ ಆರೋಗ್ಯಕರ ಗುಣಗಳನ್ನು ನೋಡುವಾಗ ಪ್ರತಿಯೊಬ್ಬರು ಇದನ್ನು ತಿನ್ನಲೇಬೇಕೆಂದು ಸಲಹೆ ನೀಡುವುದು ತಪ್ಪಲ್ಲ ಎಂದೆನಿಸುತ್ತದೆ. ಇದರಲ್ಲಿ ಖನಿಜಾಂಶಗಳು ಹಾಗೂ ವಿಟಮಿನ್ ಗಳು ಹೇರಳವಾಗಿವೆ. ಇದರಲ್ಲಿರುವ ವಿಟಮಿನ್ ಎ, ವಿಟಮಿನ್ ಬಿ1, ವಿಟಮಿನ್ ಬಿ2, ಕ್ಯಾಲ್ಸಿಯಂ, ಕಬ್ಬಿಣದಂಶ, ರಂಜಕದ ಅಂಶ, ಸೋಡಿಯಂ,ಕ್ಲೋರೀನ್ ಈ ಅಂಶಗಳು ಈ ಕೆಳಗಿನ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

ಪ್ರತಿ ನಿತ್ಯ ಎರಡು ಅಥವ ಮೂರು ಹಣ್ಣುಗಳನ್ನು ದಿನನಿತ್ಯವೂ ಖಾಲಿಹೊಟ್ಟೆಯಲ್ಲಿ ಸೇವಿಸುವುದರಿಂದ ಕೆಲದಿನಗಳಲ್ಲಿ ಮಲಬದ್ಧತೆ ದೂರವಾಗುತ್ತದೆ.

ಎರಡು ಅಥವ ಮೂರು ಹಣ್ಣುಗಳನ್ನು ಒಣದ್ರಾಕ್ಷಿಗಳೊಂದಿಗೆ ಒಂದು ಪಾವು ಹಾಲಿನಲ್ಲಿ ಹಾಕಿ ಬೇಯಿಸಿ ಆ ಹಾಲನ್ನು ಕುಡಿಯುವುದರಿಂದ ರಕ್ತಶುದ್ಧಿಯಾಗಿ ರಕ್ತವೃದ್ಧಿಯಾಗುತ್ತದೆ.

ಅಂಜೂರದ ರಸವನ್ನು ಸೇವಿಸುವುದರಿಂದ ಉಷ್ಣ ಪೀಡತೆಯಿಂದ ಮುಕ್ತಿ ಹೊಂದಬಹುದು.

ಶ್ವಾಶಕೋಶದ ತೊಂದರೆಯಿರುವವರು ೫ ಅಂಜೂರವನ್ನು ಅರ್ಧ ಲೀಟರ್ ನೀರಿನಲ್ಲಿ ಹಾಕಿ ಕಾಯಿಸಿ ನಂತರ ಆರಿಸಿ ಇಟ್ಟಿಕೊಂಡು ಬೆಳಗ್ಗೆ ಮತ್ತು ಸಂಜೆ ಸೇವಿಸುವುದರಿಂದ ತೊಂದರೆಗಳು ದೂರವಾಗುತ್ತವೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ
%d bloggers like this: