ಇತ್ತೀಚಿಗೆ ಯಾರಿಗೆ ತಾನೇ ಶುಗರ್ ಬಿಪಿ ಎಂಬುದು ಇಲ್ಲ ಹೇಳಿ ಯಾರಿಗಾದರೂ ಸಿಹಿ ಕೊಟ್ಟರೆ ನನಗೆ ಶುಗರ್ ಇದೆ ಬೇಡ ಎಂದು ಹೇಳುತ್ತಾರೆ ಈ ಶುಗರ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಕೂಡ ತುಂಬಾ ಕಷ್ಟ ಏನಾದರು ಸ್ವಲ್ಪ ಸಿಹಿ ಜಾಸ್ತಿ ತಿಂದರೆ ಸಾಕು ತಿಂದ ಹಿಂದೆ ಹಿಂದಲೆ ಶುಗರ್ ಬಂದು ಬಿಡುತ್ತದೆ ಆದರೆ ಶುಗರ್ ಜಾಸ್ತಿ ಆಗಿದಿಯೋ ಇಲ್ಲ ಸರಿಗಾಗಿ ಇದಿಯೋ ಎಂದು ತಿಳಿದುಕೊಳ್ಳುವುದಕ್ಕೆ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕೆಲವರ ಚಿಂತೆ ಆದರೆ ಸುಲಭವಾಗಿ ನಾವೇ ನಮ್ಮ ಶುಗರ್ ಜಾಸ್ತಿ ಆಗಿದಿಯೋ ಇಲ್ಲವೋ ಎಂಬುದನ್ನು ತಿಳಿಯಬಹುದು ಅದು ಹೇಗೆ ಎಂದು ಯೋಚಿಸುತ್ತಿದ್ದೀರಾ ಕೆಲವು ಲಕ್ಷಣಗಳು ಕಂಡು ಬಂದರೆ ಆಗ ಶುಗರ್ ಜಾಸ್ತಿ ಆಗಿದೇ ಎಂದು ಅರ್ಥ ಅಗಾದರೆ ಯಾವ ಲಕ್ಷಣಗಳು ಎಂದು ತಿಳಿಯೋಣ ಬನ್ನಿ ದೇಹದ ಬ್ಲಡ್ ಶುಗರ್ ಮಟ್ವವು ನಮ್ಮರಕ್ತದಲ್ಲಿನ ಗ್ಲುಕೋಸ್ನ ಪ್ರಮಾಣವನ್ನು ಸೂಚಿಸುತ್ತದೆ. ಗ್ಲುಕೋಸ್ ಎಂಬುದು ನಮ್ಮ ದೇಹದ ಮುಖ್ಯ ಶಕ್ತಿಯ ಮೂಲವಾಗಿರುತ್ತದೆ ಈ ರಕ್ತದಲ್ಲಿ ಹೆಚ್ಚು ಸಕ್ಕರೆ ಅಂಶವನ್ನು ಹೈಪರ್ಗ್ಲೈಸೀಮಿಯಾ ಎಂದು ಕರೆಯಲಾಗುತ್ತದೆ ಇದು ಶಾಶ್ವತವಾಗಿ ದೇಹದ ಎಲ್ಲ ಭಾಗಗಳನ್ನು ಹಾನಿ ಮಾಡುತ್ತದೆ ಅದರಲ್ಲೂ ಮುಖ್ಯವಾಗಿ ದೇಹದ ಭಾಗಗಳಾದ ರಕ್ತನಾಳಗಳು ಮೂತ್ರ ನರಗಳು ಕಣ್ಣುಗಳನ್ನು ಹಾನಿ ಮಾಡುತ್ತದೆ.

ಶುಗರ್ ಜಾಸ್ತಿ ಆಗಿದ್ದರೆ ನಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡು ಬರುತ್ತವೆ ಅವುಗಳೆಂದರೆ. ಸರಿಯಾಗಿ ಕಣ್ಣು ಕಾಣದೆ ಕಣ್ಣುಗಳು ಮಂಜು ಮಂಜು ಆಗುತ್ತವೆ ಎಲ್ಲವು ಮಂದ ದೃಷ್ಟಿಯಂತೆ ಕಾಣುತ್ತವೆ ಹೀಗೆ ಆದರೆ ಶುಗರ್ ಜಾಸ್ತಿ ಆಗಿದೆ ಎಂದು ಅರ್ಥ. ಸಾಮಾನ್ಯ ದಿನಗಳಿಗಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಅದು ಕೂಡ ಶುಗರ್ ಜಾಸ್ತಿ ಆಗಿದೆ ಎಂಬುದಕ್ಕೆ ಕಾರಣ ಎಷ್ಟು ನೀರು ಕುಡಿದರು ಕೂಡ ಬಾಯಿ ಒಣಗುತ್ತಿದ್ದರೆ ಅದು ಕೂಡ ಶುಗರ್ ಜಾಸ್ತಿ ಎಂಬುದರ ಲಕ್ಷಣ. ನಮಗೆ ನಮ್ಮಲ್ಲೇ ದುರ್ಬಲತೆ ಎಂಬುದು ಕಾಣುತ್ತದೆ ಇದು ಕೂಡ ಶುಗರ್ ಜಾಸ್ತಿ ಆಗುವುದಕ್ಕೆ ಕಾರಣ. ಮನಸ್ಸನ್ನು ಎಷ್ಟು ಏಕಾಗ್ರತೆಯಲ್ಲಿ ಇಟ್ಟು ಕೊಳ್ಳಲು ಪ್ರಯತ್ನ ಪಟ್ಟರು ಕೂಡ ಏಕಾಗ್ರತೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಇದು ಕೂಡ ಶುಗರ್ ಜಾಸ್ತಿ ಆಗುವುದಕ್ಕೆ ಕಾರಣ. ಹೊಟ್ಟೆಯ ಸಮಸ್ಯೆ ಕಾಡುತ್ತದೆ ಅಂದರೆ ಹೊಟ್ಟೆಯ ನೋವು .ಸರಿಯಾಗಿ ಊಟ ಸೇರದೆ ಇರುವುದು . ಸೇವಿಸಿದ ಆಹಾರ ಸರಿಯಾಗಿ ಜೀರ್ಣ ಆಗದೆ ಇರುವುದು ಕೂಡ ಶುಗರ್ ಜಾಸ್ತಿ ಆಗಿರುವುದರ ಲಕ್ಷಣಗಳು

ವಿವಿಧ ರೀತಿಯ ಸೋಂಕುಗಳು ಕಾಣಿಸಿಕೊಂಡರೆ ಅದು ಕೂಡ ಶುಗರ್ ಜಾಸ್ತಿ ಆಗಿರುವುದರ ಕಾರಣ. ಯಾವುದೇ ಸಣ್ಣ ಪುಟ್ಟ ಗಾಯಗಳು ಆದರೂ ಕೂಡ ಅವು ಅಷ್ಟು ಸುಲಭವಾಗಿ ವಾಸಿಯಾಗುವುದಿಲ್ಲ ತುಂಬಾ ಸುಸ್ತು ಆಯಾಸ ಆಗುತ್ತದೆ ಯಾವುದೇ ಕೆಲಸವನ್ನು ಮಾಡಲು ಕೂಡ ಆಗುವುದಿಲ್ಲ. ಎಷ್ಟು ಬಾರಿ ನೀರು ಕುಡಿದರು ಕೂಡ ನೀರು ಕುಡಿಯುತ್ತಲೇ ಇರಬೇಕು ಎನ್ನಿಸುತ್ತದೆ. ಚರ್ಮದಲ್ಲಿ ತುರಿಕೆಗಳು ಕಂಡು ಬರುತ್ತವೆ ಹೀಗೆ ತುರಿಕೆ ಕಂಡು ಬರುತ್ತಿದ್ದರೆ ಶುಗರ್ ಜಾಸ್ತಿ ಆಗಿದೆ ಎಂದು ಅರ್ಥ. ಚರ್ಮವು ತುಂಬಾ ಬೇಗ ಒಣಗುತ್ತದೆ ಹೀಗೆ ಚರ್ಮ ಒಣಗುತ್ತಿದ್ದರೆ ಶುಗರ್ ಜಾಸ್ತಿ ಆಗಿದೆ ಎಂದು ಅರ್ಥ. ಬೇಗ ತೂಕ ಹೆಚ್ಚಾಗುತ್ತದೆ. ನಮ್ಮ ನರಗಳಲ್ಲಿ ನೋವು ಕಾಣಿಸುತ್ತದೆ ಹೀಗೆ ನರಗಳಲ್ಲಿ ವ್ಯತ್ಯಾಸ ಕಂಡು ಬಂದರೆ ಶುಗರ್ ಜಾಸ್ತಿ ಆಗಿದೆ ಎಂದು ಅರ್ಥ. ತುಂಬಾ ಬೆವರುತ್ತಿದ್ದರೆ ಅದು ಕೂಡ ಶುಗರ್ ಜಾಸ್ತಿ ಆಗಿದೆ ಎಂಬುದಕ್ಕೆ ಕಾರಣ ಈ ಮೇಲಿನ ಎಲ್ಲ ಲಕ್ಷಣಗಳಲ್ಲಿ ಲಕ್ಷಣ ಕಂಡು ಬಂದರು ಕೂಡ ತಕ್ಷಣ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವುದು ತುಂಬಾ ಒಳ್ಳೆಯದು. ಈ ಉಪಯುಕ್ತ ಲೇಖನ ತಪ್ಪದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ
%d bloggers like this: