ಉತ್ತಮ ಆರೋಗ್ಯಕ್ಕಾಗಿ ಬೇಕು ಸೋರೆಕಾಯಿ ಜ್ಯೂಸ್

ಸೋರೆಕಾಯಿ ಯಾರಿಗೆ ಗೊತ್ತಿಲ್ಲ ಹೇಳಿ, ಎಲ್ಲರೂ ಸಾಂಬಾರ್ ಮತ್ತು ಪಲ್ಯ ಮಾಡಲು ಬಳಸುತ್ತಾರೆ. ಅಕ್ಕಿ ರೊಟ್ಟಿಯ ಜೊತೆ ಸೋರೆಕಾಯಿ ಪಲ್ಯ ಇದ್ದರೆ ಅದರ ಮಜವೇ ಬೇರೆ. ತುಂಬಾ ಜನರು ಸೋರೆಕಾಯಿಯನ್ನು ಅಡುಗೆಗೆ ಮಾತ್ರ ಬಳಸುತ್ತಾರೆ ಎಂದು ಭಾವಿಸಿದ್ದಾರೆ. ಆದರೆ ಸೋರೆಕಾಯಿಯಲ್ಲಿರುವ ಆರೋಗ್ಯದ ಅಂಶ ಯಾರಿಗೂ ತಿಳಿದಿರುವುದಿಲ್ಲ. ಬನ್ನಿ ಹಾಗಾದರೆ ಸೋರೆಕಾಯಿ ತಿನ್ನುವುದರಿಂದ ಆಗುವ ಉಪಯೋಗಗಳ ಬಗ್ಗೆ ತಿಳಿಯೋಣ.

ದೇಹದ ತೂಕ ಕಡಿಮೆ ಮಾಡಲು ಹೋಗಿದ್ದು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಪ್ರತಿನಿತ್ಯ ಒಂದು ಲೋಟ ಸೋರೆಕಾಯಿ ಜ್ಯೂಸನ್ನು ಕುಡಿಯುವುದರಿಂದ ಮತ್ತು ಅದರ ಜೊತೆ ಮಿತವಾದ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹದ ತೂಕ ಬೇಗ ಕಡಿಮೆಯಾಗುವುದು.ಬಿಸಿಲು ಹೆಚ್ಚಾದಾಗ ದೇಹವನ್ನು ತಂಪಾಗಿಡಲು ಎಲ್ಲರೂ ಹೊರಗಡೆ ಸಿಗುವ ತಂಪು ಪಾನೀಯಗಳನ್ನು ಕುಡಿಯುವುದು ಸಾಮಾನ್ಯ ಇದರಿಂದ ಸ್ವಲ್ಪ ಮಟ್ಟಿಗೆ ನಮ್ಮ ದೇಹ ತಣ್ಣಗಾಗುವುದು ಆದರೆ ಬಹುಬೇಗ ಮತ್ತೆ ಬಾಯರುತ್ತದೆ ಮತ್ತು ಆರೋಗ್ಯದ ಮೇಲೂ ಪರಿಣಾಮವನ್ನು ಬೀರುತ್ತದೆ. ಆದರೆ ಸೋರೆಕಾಯಿ ಜ್ಯೂಸನ್ನು ಕುಡಿಯುವುದರಿಂದ ನಮ್ಮ ದೇಹ ತಣ್ಣಗಾಗುತ್ತದ ಮತ್ತು ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ.

ಒಂದು ಲೋಟ ಸೋರೆಕಾಯಿ ಜ್ಯೂಸ್ ಗೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಮಿಶ್ರಣ ಮಾಡಿ ಪ್ರತಿನಿತ್ಯ ಕುಡಿಯುವುದರಿಂದ ಮೂತ್ರದ ಉರಿ ಸಮಸ್ಯೆ ಕಾಡುತ್ತಿದ್ದರೆ ಪರಿಹಾರವಾಗುವುದು. ಡಯಾಬಿಟಿಸ್ ಅಥವಾ ಮಧುಮೇಹದಿಂದ ಬಳಲುತ್ತಿರುವವರು ಪ್ರತಿನಿತ್ಯ ಸೋರೆಕಾಯಿ ಜ್ಯೂಸನ್ನು ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಸೋರೆಕಾಯಿಯಲ್ಲಿ ನಾರಿನಂಶ ಮತ್ತು ಪ್ರೊಟೀನ್ ಗಳು ಹೆಚ್ಚಾಗಿದ್ದು ಇದನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಶಕ್ತಿ ದೊರೆಯುವುದಲ್ಲದೆ ಜೀರ್ಣಕ್ರಿಯೆ ಚೆನ್ನಾಗಿ ಆಗಲು ಸಹಾಯ ಮಾಡುತ್ತದೆ.

ಸೋರೆಕಾಯಿಯಲ್ಲಿ ಫೈಬರ್ ಅಂಶ ಮತ್ತು ನೀರಿನಂಶ ಕಡಿಮೆ ಇರುವುದು. ಇದನ್ನು ಪ್ರತಿನಿತ್ಯ ಬೆಳಗ್ಗೆ ಜ್ಯೂಸ್ ಮಾಡಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಹೆಚ್ಚು ಫೈಬರ್ ಅಂಶ ದೊರೆಯುತ್ತದೆ ಇದರಿಂದ ನಮ್ಮ ದೇಹದ ಕೊಬ್ಬು ಕಡಿಮೆಯಾಗುತ್ತದೆ. ವಾಂತಿ ಮತ್ತು ಬೇಧಿ ಯಾದಾಗ ನಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ ಇದರಿಂದ ಬಹಳ ಬೇಗ ಸುಸ್ತು ಆಗುತ್ತದೆ. ಆಗ ಸೋರೆಕಾಯಿಯನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ವಾಂತಿ ಮತ್ತು ಬೇಧಿ ಕಡಿಮೆಯಾಗುತ್ತದೆ. ರಾತ್ರಿ ಹೊತ್ತು ಸರಿಯಾಗಿ ನಿದ್ದೆ ಬರದಿದ್ದರೆ ಸೋರೆಕಾಯಿ ಜ್ಯೂಸ್ ಜೊತೆ ಸ್ವಲ್ಪ ಸಾಸಿವೆ ಎಣ್ಣೆಯನ್ನು ಮಿಶ್ರಣಮಾಡಿ ಕುಡಿಯುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ

ಪ್ರತಿನಿತ್ಯ ಸೋರೆಕಾಯಿಯನ್ನು ಜ್ಯೂಸ್ ಮಾಡಿ ಕುಡಿಯಲು ಬೇಜಾರು ಆಗುತ್ತಿದ್ದರೆ ಅದನ್ನು ಬೇರೆ ಬೇರೆ ರೂಪದಲ್ಲಿ ಕೂಡ ತಿನ್ನಬಹುದು ಇದರಿಂದ ನಮ್ಮ ದೇಹಕ್ಕೆ ಆಗುವ ಆರೋಗ್ಯದ ಅಂಶಗಳು ದೊರೆಯುತ್ತದೆ. ಸೋರೆಕಾಯಿಯಲ್ಲಿ ಸಾಂಬಾರ್.ಹುಳಿ ಮತ್ತು ಮಜ್ಜಿಗೆ ಹುಳಿಯಲ್ಲಿ ಕೂಡ ಬಳಸಬಹುದು. ಸೋರೆಕಾಯಿಯಲ್ಲಿ ಅಲ್ವಾ ಕೂಡ ಮಾಡಬಹುದು. ಇದರಿಂದ ಸೋರೆಕಾಯಿಯನ್ನು ಹಾಗೆ ಜ್ಯೂಸ್ ಮಾಡಿ ಕುಡಿಯಲು ಕಷ್ಟವಾಗುತ್ತಿದ್ದರೆ ಈ ರೀತಿ ಬೇರೆ ಬೇರೆ ಪ್ರೀತಿಯ ಅಡಿಗೆಗಳಿಂದ ಸೇವಿಸಬಹುದು.

Check Also

ಕೆಮ್ಮು ಜ್ವರ ದೃಷ್ಟಿ ದೋಷ ಎಲ್ಲವನು ದೂರ ಮಾಡುವ ಅದ್ಬುತವಾದ ಬಳ್ಳಿ ಇದು

ಹಳ್ಳಿಯಲ್ಲಿ ಇರುವವರಿಗೆ ಈ ಈಶ್ವರ ಬಳ್ಳಿ ಚೆನ್ನಾಗಿ ಗೊತ್ತಿರುತ್ತದೆ. ಬಹಳಷ್ಟು ಔಷಧಿಯ ಗುಣಗಳನ್ನು ಹೊಂದಿರುವ ಈ ಈಶ್ವರ ಬಳ್ಳಿ ಗಿಡವು …

Leave a Reply

Your email address will not be published. Required fields are marked *