ಎಲ್ಲರು ತಿಳಿಯಲೇ ಬೇಕಾದ ಉಪಯುಕ್ತ ಮಾಹಿತಿ ಇದು

ಈಗಿನ ಕಾಲದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟದ ಕೆಲಸವಾಗಿದೆ. ನಾವು ಉಸಿರಾಡುವ ಗಾಳಿ ,ಕುಡಿಯುವ ನೀರು, ತಿನ್ನುವ ಆಹಾರ ಎಲ್ಲವೂ ಕಲುಷಿತ ಆಗಿದೆ. ಹಾಗಾಗಿ ನಾವು ತಿನ್ನುವ ಯಾವ ಪದಾರ್ಥಗಳಲ್ಲೂ ಕೂಡ ಉತ್ತಮವಾದ ಪೌಷ್ಟಿಕಾಂಶ ಮತ್ತು ವಿಟಮಿನ್ ಗಳು ದೊರೆಯುವುದಿಲ್ಲ. ಈಗಿನ ಕಾಲದಲ್ಲಿ ಅಂತೂ ಎಲ್ಲರೂ ತಮ್ಮ ಎಲ್ಲಾ ಕೆಲಸಗಳು ಕೂತ ಜಾಗದಲ್ಲೇ ಆಗಬೇಕೆಂದು ಬಯಸುತ್ತಾರೆ. ತಿನ್ನುವ ಆಹಾರದಲ್ಲೂ ಕೂಡ ಅದೇ ರೀತಿ ಯೋಚನೆ ಮಾಡುತ್ತಾರೆ ಹೊರಗಡೆಯಿಂದ ಯಾವ ಪದಾರ್ಥಗಳು ಚೆನ್ನಾಗಿ ಕಾಣುತ್ತವೆ ಅಂತಹ ಪದಾರ್ಥಗಳನ್ನು ಹೆಚ್ಚು ತಿನ್ನುತ್ತಾರೆ. ಇತ್ತೀಚಿನ ದಿನಗಳಲ್ಲಿ ರಿಫೈಂಡ್ ಪದಾರ್ಥಗಳು ಹೆಚ್ಚಾಗಿ ಬರುತ್ತವೆ. ಅವುಗಳು ಹೊರಗಡೆಯಿಂದ ನೋಡಲು ಚೆನ್ನಾಗಿ ಕಾಣುತ್ತದೆ ಆದ್ದರಿಂದ ಅಂತಹ ಪದಾರ್ಥಗಳಿಗೆ ಮೊರೆ ಹೋಗುತ್ತಾರೆ. ರಿಫೈಂಡ್ ಪದಾರ್ಥಗಳನ್ನು ತಿನ್ನುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಯಾರು ಯೋಚನೆಯನ್ನೇ ಮಾಡುವುದಿಲ್ಲ.

ಅಂತಹ ಕೆಲವು ರಿಫೈಂಡ್ ಪದಾರ್ಥಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಾವು ತಿಳಿಸಿಕೊಡುತ್ತೇವೆ. ರಿಫೈಂಡ್ ಪದಾರ್ಥಗಳನ್ನು ನಾವು ತಿನ್ನದೇ ಇರಲು ಸಾಧ್ಯವೇ ಇಲ್ಲ ಬಿಡಿ ಆದರೆ ಅತೀಯಾದ್ರೆ ಮಾತ್ರೆ ಅದರಿಂದ ಆಗುವ ಸಮಸ್ಯೆಗಳು ಮಾತ್ರ ಕಡಿಮೆ ಅಲ್ಲ. ರಿಫೈಂಡ್ ಅಕ್ಕಿ ರಿಫೈಂಡ್ ಸಕ್ಕರೆ ರಿಫೈನ್ಡ್ ಉಪ್ಪು ರಿಫೈನ್ಡ್ ಹಿಟ್ಟು ಪಾಶ್ಚಿಕರಿಸಿದ ಹಾಲು ಹೀಗೆ ಎಲ್ಲವೂ ಕೂಡ ರಿಫೈನ್ಡ್ ಆಗಿ ಬರುತ್ತಿವೆ. ಹೀಗೆ ರಿಫೈಂಡ್ ಆಗಿರುವ ಅಥವಾ ಪಾಶ್ಚಿಕರಣಕ್ಕೆ ಒಳಪಟ್ಟಿರುವ ಪದಾರ್ಥಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮಗಳು ಉಂಟಾಗುತ್ತದೆ. ರಿಫೈನ್ಡ್ ಅಕ್ಕಿ ಎಂದರೆ ಪಾಲಿಶ್ ಮಾಡಿರುವ ಅಕ್ಕಿ.

ಈ ಅಕ್ಕಿ ನೋಡಲು ತುಂಬಾ ಚೆನ್ನಾಗಿ ಮತ್ತು ಹೊಳಪಾಗಿ ಕಾಣುತ್ತದೆ ಅದರಿಂದ ಮಾಡಿದರು ಕೂಡ ಅಷ್ಟೇ ಚೆನ್ನಾಗಿ ಆಗುತ್ತದೆ. ಅಕ್ಕಿಯನ್ನು ಪಾಲಿಶ್ ಮಾಡಿದಾಗ ಅದರಲ್ಲಿ ಇರುವ ಪೊಷ್ಟಿಕಾಂಶ ಎಲ್ಲ ಹೊರಟು ಹೋಗುತ್ತದೆ. ಈ ಅಕ್ಕಿಯಿಂದ ಮಾಡಿದ ಅನ್ನವನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆ ಅಥವಾ ಡಯಾಬಿಟಿಸ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಆದ್ದರಿಂದ ಪಾಲಿಶ್ ಮಾಡದೇ ಇರುವ ಅಕ್ಕಿಯಿಂದ ಮಾಡಿದ ಅನ್ನವನ್ನು ಸೇವಿಸಿರಿ ಇದರಿಂದ ನಿಮ್ಮ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ. ಕೆಂಪು ಅಕ್ಕಿ ಇಂದರೆ ಇನ್ನು ಶ್ರೇಷ್ಟ ನಿಮ್ಮ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಬರೋದಿಲ್ಲ ನಿಮ್ಮ ಆರೋಗ್ಯ ಸುಪರ್ ಆಗಿರುತ್ತೆ.

ಉಪ್ಪಿಗಿಂತ ಬೇರೆ ರುಚಿ ಇಲ್ಲ ಎಂದು ಎಲ್ಲರೂ ಹೇಳುತ್ತಾರೆ ಆದರೆ ರಿಫೈನ್ಡ್ ಉಪ್ಪನ್ನು ಸೇವಿಸುವುದರಿಂದ ಅಥವಾ ಆಹಾರದಲ್ಲಿ ಬಳಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತದೆ. ಈ ಉಪ್ಪನ್ನು ಸೇವಿಸುವುದರಿಂದ ಹೃದಯಾಘಾತ ಅಥವಾ ಹಾರ್ಟ್ ಅಟ್ಯಾಕ್ ಆಗಬಹುದು. ಉತ್ತಮ ಗುಣಮಟ್ಟದ ಉಪ್ಪು ಮಾರುಕಟ್ಟೆಯಲ್ಲಿ ದೊರೆಯಲಿದೆ ಅದನ್ನೇ ಖರೀದಿ ಮಾಡಿ ತಿನ್ನಿ. ಇನ್ನು ಪಾಶ್ಚೀಕರಿಸಿದ ಹಾಲು ಅಥವಾ ಪೌಡರ್ ಹಾಲಿನ ಬಗ್ಗೆ ಹೇಳುವುದಾದರೆ ಮನೆಯಲ್ಲೇ ಸಿಗುವ ಹಸುವಿನ ಹಾಲು ಅಥವಾ ಎಮ್ಮೆಯ ಹಾಲಿನಿಂದ ಸಿಗುವಷ್ಟು ಪೌಷ್ಟಿಕಾಂಶಗಳು ಈ ಪಾಶ್ಚೀಕರಿಸಿದ ಹಾಲಿನಿಂದ ಸಿಗುವುದಿಲ್ಲ. ಆನೇಕ ಕೆಮಿಕಲ್ ಗಳನ್ನು ಉಪಯೋಗಿಸಿಕೊಂಡು ಹಾಲನ್ನು ಪಾಶ್ಚಿಕರಿಸಿರುತ್ತಾರೆ.

ಇದನ್ನು ನಾವು ಕುಡಿಯುವುದರಿಂದ ಮಲಬದ್ಧತೆ ಅಥವಾ ಉದರ ಸಂಬಂಧಿ ಖಾಯಿಲೆಗಳು ಉಂಟಾಗುತ್ತದೆ. ಆದ್ದರಿಂದ ಮನೆಯಲ್ಲೇ ಸಿಗುವ ಹಾಲನ್ನು ಹೆಚ್ಚಾಗಿ ಉಪಯೋಗಿಸಿರಿ ಇದರಿಂದ ನಿಮಗೆ ಹೆಚ್ಚು ಪೋಷಕಾಂಶಗಳು ದೊರೆಯುತ್ತದೆ ಮತ್ತು ನಿಮ್ಮ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ. ಸಿಟಿ ಯಲ್ಲಿ ಇರುವ ಜನಕ್ಕೆ ಶುದ್ದ ಹಸುವಿನ ಹಾಲು ಸಿಗುವುದು ಕಷ್ಟ ನೀವು ನಂದಿನಿ ಹಾಲನ್ನೇ ಬಳಕೆ ಮಾಡಿ ಬೇರೆ ಕಂಪನಿಯ ಪೌಡರ್ ಮಿಕ್ಸ್ ಹಾಲು ಬೇಡವೇ ಬೇಡ. ರಿಫೈನ್ಡ್ ಸಕ್ಕರೆ ಮತ್ತು ರಿಫೈಂಡ್ ಹಿಟ್ಟು ಅಥವಾ ಮೈದಾ ಹಿಟ್ಟನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಬಳಸುವುದರಿಂದ ನಮ್ಮ ಆರೋಗ್ಯವನ್ನು ನಿದಾನವಾಗಿ ಹಾಳಾಗುತ್ತ ಹೋಗುತ್ತದೆ. ಇವುಗಳಲ್ಲಿರುವ ಕೆಮಿಕಲ್ ಅಂಶವು ನಮ್ಮ ದೇಹದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ರಿಫೈಂಡ್ ಪದಾರ್ಥಗಳನ್ನು ಹೆಚ್ಚು ಬಳಸಬೇಡಿ.

Check Also

ಸಕ್ಕರೆ ಖಾಯಿಲೆ ಬರಲೇ ಬಾರದು ಅಂದ್ರೆ ನಿಮ್ಮ ನಿತ್ಯ ಆಹಾರ ಹೀಗೆ ಇರಲಿ

ಈಗಿನ ದಿನಗಳಲ್ಲಿ ಯಾರನ್ನು ಆದರೂ ಸಿಹಿ ತಿನ್ನಿ ಎಂದರೆ ಸಾಕು ನನಗೆ ಶುಗರ್ ಇದೆ ಬೇಡ ಎನ್ನುತ್ತಾರೆ ಈ ಶುಗರ್ …

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ