ಕಲ್ಲಂಗಡಿ ಸೇವನೆಯಿಂದ  ಆಗುವ 5 ಲಾಭಗಳು 

ಕಲ್ಲಂಗಡಿ ಹಣ್ಣು ಅಂದರೆ ಯಾರಿಗಿಷ್ಟ ಇಲ್ಲ ಹೇಳಿ. ಬೇಸಿಗೆ ಬಂತೆಂದರೆ ಸಾಕು. ಜನರು ತಂಪು ಪಾನೀಯ ಅಥವಾ ಹಣ್ಣಿನ ಮೊರೆ ಹೋಗ್ತಾರೆ. ಅದರಲ್ಲೂ ಕಲ್ಲಂಗಡಿ ಹಣ್ಣು ಎಂದರೆ ಬಿಸಿಲಲ್ಲಿ ಅದು ತಂಪನ್ನು ನೀಡುತ್ತದೆ. ಒಂದು ರೀತಿಯಲ್ಲಿ ಇದು ನಮಗೆ ಬೇಸಿಗೆ ಬಂಧು ಎನ್ನಬಹುದು.

ಕಲ್ಲಂಗಡಿ ಹಣ್ಣು ಮೂಲತಃ ದಕ್ಷಿಣ ಆಫ್ರಿಕಾ ಭಾಗದಲ್ಲಿ ಕಂಡು ಬರುವ ಬಳ್ಳಿಯಾಗಿ ನೆಲದ ಮೇಲೆ ಬೆಳೆಯುವ ಸಸ್ಯವಾಗಿದೆ.ಕಲ್ಲಂಗಡಿ ಹಣ್ಣಿನಲ್ಲಿ ಹೇರಳವಾಗಿ ವಿಟಮಿನ್ ಗಳಿಂದ ಕೂಡಿದ ಹಣ್ಣಾಗಿದೆ. ವಿಟಮಿನ್ ಎ, ಬಿ6 ಮತ್ತು ಸಿ ಯನ್ನು ಒಳಗೊಂಡಿರುವ ಕಲ್ಲಂಗಡಿ ಬಹುವಿಟಮಿನ್ ಅಂಶದಿಂದ ಕೂಡಿದೆ. ಇದರಲ್ಲಿರುವ ವಿಟಮಿನ್ ಸಿ ಅಂಶ ರೋಗನಿರೋಧಕ ಶಕ್ತಿಯನ್ನು ವರ್ಧಿಸಿ ದೇಹಕ್ಕೆ ಚೈತನ್ಯವನ್ನುಂಟು ಮಾಡುತ್ತದೆ. ಇತರ ಹಣ್ಣು ತರಕಾರಿಗಳಿಗಿಂತ ಲೈಕೊಪಿನ್ ಹೆಚ್ಚಾಗಿರುವ ಕಲ್ಲಂಗಡಿ ಕೊಬ್ಬು ಮುಕ್ತ ನೈಸರ್ಗಿಕ ಕೊಡುಗೆಯಾಗಿದೆ.

ಕೊಲೆಸ್ಟ್ರಾಲ್ ಅಂಶವಿಲ್ಲದ ದೇಹಕ್ಕೆ ಶಕ್ತಿಯನ್ನು ಒದಗಿಸುವ ವಿಟಮಿನ್ ಭರಿತ ಹಣ್ಣಾದ ಕಲ್ಲಂಗಡಿ ಬೇಸಿಗೆಯ ಬೇಗೆಯನ್ನು ಕಳೆಯುವಲ್ಲಿ ಸಹಕಾರಿ. ಇದನ್ನು ಜ್ಯೂಸ್ ಅಥವಾ ಹಾಗೆ ಕೂಡ ಸೇವಿಸಬಹುದು. ಕಲ್ಲಂಗಡಿ ಬಾಯಾರಿಕೆಯನ್ನು ಮಾತ್ರ ತೀರಿಸುವುದಲ್ಲದೇ ರೋಗಗಳ ವಿರುದ್ಧ ಹೋರಾಡುವ ಗುಣವನ್ನು ಒಳಗೊಂಡ ಸಮೃದ್ಧ ಹಣ್ಣು.

ಇದು ರಕ್ತ ಶುದ್ಧಿಗೆ ಸಹಕಾರಿ. ಕಜ್ಜಿ ಅಥವಾ ತುರಿಕೆಯಂತಹ ಸಮಸ್ಯೆಗಳಿಗೆ ಕಲ್ಲಂಗಡಿ ಹಣ್ಣು ಪರಿಹಾರ ನೀಡುತ್ತದೆ.

ಹೈಡ್ರೇಟ್ ಮತ್ತು ದೇಹ ಸ್ವಚ್ಛಕ: ಕಲ್ಲಂಗಡಿ 6% ಸಕ್ಕರೆ ಮತ್ತು 92% ನೀರನ್ನು ಒಳಗೊಂಡಿರುವ ನ್ಯೂಟ್ರೀಷಿಯನ್ ಪೂರಿತ ಹಣ್ಣಾಗಿದೆ. ಕಿಡ್ನಿ ರೋಗಿಗಳಿಗೆ ಡಯಾಲಿಸಿಸ್‌ಗಿಂತ ಮುಂಚೆ ಹೋಮಿಯೋಪತಿ ಚಿಕಿತ್ಸೆಯಂತೆ ಕಲ್ಲಂಗಡಿಯನ್ನು ನೀಡಲಾಗುತ್ತದೆ.

ಕ್ಯಾನ್ಸರ್ ನಿರೋಧಕ: ಲೈಕೋಪಿನ್ ಅಂಶ ಕಲ್ಲಂಗಡಿಯಲ್ಲಿದ್ದು, ಜನನಾಂಗ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್‌ಗೆ ಉತ್ತಮ ಔಷಧಿಯಾಗಿದೆ

ಪೊಟ್ಯಾಶಿಯಂ ಅತ್ಯಧಿಕವಾಗಿದೆ: ಪೊಟ್ಯಾಶಿಯಂನ ಹೇರಳ ಅಂಶ ಕಲ್ಲಂಗಡಿಯಲ್ಲಿದ್ದು, ಸ್ನಾಯು ಮತ್ತು ನರ ವ್ಯವಸ್ಥೆಯ ಸುಧಾರಣೆಯಲ್ಲಿ ಸಹಾಯ ಮಾಡುತ್ತದೆ. ಅಸ್ತಮಾ, ಅಪಧಮನಿ ಕಾಠಿಣ್ಯ, ಮಧುಮೇಹ, ಕರುಳಿನ ಕ್ಯಾನ್ಸರ್ ಮತ್ತು ಸಂಧಿವಾತವನ್ನು ದೂರವಾಗಿಸುತ್ತದೆ.

ತ್ವಚೆಯ ರಕ್ಷಣೆ: ನೀವು ಒಣ ತ್ವಚೆಯನ್ನು ಹೊಂದಿದ್ದರೆ ನಿಮ್ಮ ಈ ಬಗೆಯ ಸಮಸ್ಯೆಯನ್ನು ದೂರಮಾಡುವಲ್ಲಿ ಕಲ್ಲಂಗಡಿ ಉತ್ತಮ ಹಣ್ಣಾಗಿದೆ. ಇದರಲ್ಲಿರುವ ಅತ್ಯಧಿಕ ನೀರಿನ ಅಂಶ ಬಾಯಾರಿಕೆಯನ್ನು ದೂರಮಾಡಿ ನಮ್ಮನ್ನು ಹೈಡ್ರೇಟ್‌‌ನ್ನಾಗಿ ಮಾಡುತ್ತದೆ

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ