ಕಲ್ಲಂಗಡಿ ಹಣ್ಣಿನಲ್ಲಿ ಲೈಕೋಪೀನ್ ಪೊಟ್ಯಾಸಿಯಮ್ ಮತ್ತು ಇತರ ಪೋಷಕಾಂಶಗಳು ಇವೆ ಈ ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ಹಲವರು ರೀತಿಯ ಸಮಸ್ಯೆಗಳು ದೂರ ಅಗುತ್ತವೆ ಈ ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚಾಗಿ ಇರುವ ಕಾರಣ ಇದು ನಮ್ಮ ದೇಹಕ್ಕೆ ಬೇಕಾಗಿರುವ ನೀರಿನ ಅಂಶವನ್ನು ದೊರಕಿಸಿಕೊಡುತ್ತದೆ ಅದರಲ್ಲೂ ಬೇಸಿಗೆಗೆ ಉತ್ತಮ ಆಹಾರ ಎಂದರೆ ಕಲ್ಲಂಗಡಿ ಹಣ್ಣು. ಈ ಹಣ್ಣನ್ನು ಸೇವಿಸುವುದರಿಂದ ಕ್ಯಾನ್ಸರ್ ಸಮಸ್ಯೆ ದೂರ ಆಗುತ್ತದೆ. ಅತಿಸಾರದ ಸಮಸ್ಯೆ ದೂರ ಆಗುತ್ತದೆ. ಹೃದಯ ರೋಗಕ್ಕೆ ಕಾರಣವಾಗುವ ಕೊಲೆಸ್ಟ್ರಾಲ್‌ ನಿವಾರಣೆಯಾಗಿ ಹೃದಯವು ಆರೋಗ್ಯವಾಗಿ ಇರುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ಪೋಟ್ಯಾಷಿಯಂ ಮತ್ತು ಸೋಡಿಯಂ ಅಂಶ ಹೆಚ್ಚಾಗಿ ಇರುವುದರಿಂದ ರಕ್ತಸ್ರಾವದ ಸಮಸ್ಯೆ ದೂರ ಆಗುತ್ತದೆ.

ಈ ಹಣ್ಣಿನ ಸೇವನೆಯಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಹಣ್ಣಿನಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೇಶಿಯಂ ಅಂಶ ಇರುವುದರಿಂದ ಬ್ಲಡ್‌ ಪ್ರೆಶರ್‌ ಕಡಿಮೆಯಾಗುತ್ತದೆ. ಡಯಾಬಿಟಿಸ್ ಸಮಸ್ಯೆ ಇರುವವರಿಗೆ ಉತ್ತಮ ಆಹಾರ ಇದು. ಈ ಹಣ್ಣಿನ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆ ಹೋಗುತ್ತದೆ. ಕಲ್ಲಂಗಡಿಯಲ್ಲಿ ಕಂಡುಬರುವ ಪ್ರಮುಖ ಅಮಿನೋ ಆಮ್ಲ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ರಕ್ತದ ಹರಿವನ್ನು ಹೆಚ್ಚಿಸುವ ನೈಟ್ರಿಕ್ ಆಕ್ಸೈಡ್ನ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಆದರೆ ಇನ್ನೊಂದು ಮುಖ್ಯವಾದ ಅಂಶವನ್ನು ತಿಳಿದುಕೊಳ್ಳಬೇಕು ಅದು ಏನೆಂದರೆ ನಾವು ಯಾವುದೇ ಹಣ್ಣನ್ನು ಸೇವಿಸಿದರೂ ಕೂಡ ಸೇವಿಸಿದ ತಕ್ಷಣ ನೀರನ್ನು ಕುಡಿಯುತ್ತೇವೆ ಅಲ್ಲವೇ ಆದರೆ ಕಲ್ಲಂಗಡಿ ಹಣ್ಣು ಸೇವಿಸಿದ ನಂತರ ಯಾವುದೇ ಕಾರಣಕ್ಕೂ ನೀರನ್ನು ಕುಡಿಯಬಾರದು ಏಕೆಂದರೆ ಕಲ್ಲಂಗಡಿ ಹಣ್ಣಿನಲ್ಲಿ ಮೊದಲೇ ನೀರಿನ ಅಂಶ ಹೆಚ್ಚು ಇರುತ್ತದೆ ಅಲ್ಲವೇ ಆದ್ದರಿಂದ ಇದನ್ನು ಸೇವಿಸಿದ ನಂತರ ನೀರು ಕುಡಿದರೆ ಇದು ಜೀರ್ಣಕಾರಿ ರಸವನ್ನು ದುರ್ಬಲಗೊಳಿಸುವುದರ ಮೂಲಕ ನಮ್ಮ ಜೀರ್ಣಕಾರಿ ವ್ಯವಸ್ಥೆಯನ್ನು ಕುಂಠಿತಗೊಳಿಸುತ್ತದೆ.

ಜೊತೆಗೆ ಕಲ್ಲಂಗಡಿ ಹಣ್ಣನ್ನು ಸೇವಿಸಿದ ನಂತರ ಹೆಚ್ಚು ನೀರು ಕುಡಿದರೆ ಸಕ್ಕರೆ ರೂಪದಲ್ಲಿರುವ ಫ್ರಕ್ಟೋಸ್ ಹೆಚ್ಚುವರಿ ನೀರನ್ನು ಹೀರಿ ಹೊಟ್ಟೆ ಸೋಂಕುಗಳ ಅಪಾಯಕ್ಕೆ ಕಾರಣವಾಗುತ್ತದೆ. ಕಲ್ಲಂಗಡಿ ಹಣ್ಣನ್ನು ಸೇವಿಸಿದ ನಂತರ ನೀರನ್ನು ಕುಡಿದರೆ ಹೊಟ್ಟೆಯ ಭಾಗದಲ್ಲಿ ಸೂಕ್ಷ್ಮಜೀವಿಗಳ ಹರಡುವಿಕೆ ಹೆಚ್ಚಾಗುತ್ತದೆ. ಆದ್ದರಿಂದ ಯಾವುದೇ ಸಕ್ಕರೆ ಮತ್ತು ನೀರು ಭರಿತ ಹಣ್ಣುಗಳನ್ನು ಸೇವಿಸಿದ ಒಂದು ಗಂಟೆಯ ವರೆಗೂ ಯಾವುದೇ ಕಾರಣಕ್ಕೂ ನೀರು ಕುಡಿಯಬಾರದು. ನೋಡಿದರಲ್ಲ ಕೇವಲ ಕಲ್ಲಂಗಡಿ ಹಣ್ಣನ್ನು ಸೇವಿಸುವುದಲ್ಲ ಅದನ್ನು ಸೇವಿಸಿದ ನಂತರ ನೀರು ಕುಡಿದರೆ ಹಣ್ಣನ್ನು ಸೇವಿಸಿದಕ್ಕೆ ಲಾಭಗಳು ಸಿಗುವುದಿಲ್ಲ ಜೊತೆಗೆ ಹಲವಾರು ಸಮಸ್ಯೆಗಳನ್ನು ನಾವೇ ತಂದು ಕೊಳ್ಳುತ್ತೇವೆ. ನಮ್ಮಲ್ಲಿ ಎಷ್ಟೋ ಜನಕ್ಕೆ ಈ ರೀತಿಯ ಮಾಹಿತಿಗಳ ಬಗ್ಗೆ ಹೆಚ್ಚಿನ ಅರಿವು ಇರುವುದಿಲ್ಲ ತಪ್ಪದೇ ಈ ಮಾಹಿತಿ ಓದಿದ ನಂತರ ಶೇರ್ ಮಾಡುವುದು ಮರೆಯಬೇಡಿ. ನೀವು ಮಾಡುವ ಒಂದು ಶೇರ್ ಒಬ್ಬರಿಗೂ ಸಹಾಯ ಆಗಬಹುದು.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ