ಕೆಂಪು ಬಾಳೆ ಹಣ್ಣು ತಿಂದವರಿಗೆ ಮಾತ್ರ ಸಿಗೋದು ಈ ಇಪ್ಪತ್ತು ಲಾಭ

ಹಣ್ಣುಗಳು ಎಂದರೆ ಎಲ್ಲರಿಗೂ ಮೊದಲು ನೆನಪಾಗುವ ಹಣ್ಣು ಎಂದರೆ ಅದು ಬಾಳೆಹಣ್ಣು. ಯಾವುದೇ ಸಮಾರಂಭಗಳಾಗಲಿ ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ ಬಾಳೆಹಣ್ಣು ಇಲ್ಲದೆ ಅದು ಸಂಪೂರ್ಣವಾಗುವುದಿಲ್ಲ. ಆರೋಗ್ಯದ ವಿಷಯಕ್ಕೆ ಬಂದರೂ ಅಷ್ಟೇ, ವೈದ್ಯರುಗಳು ಮೊದಲು ಸಲಹೆ ಕೊಡುವುದು ಬಾಳೆ ಹಣ್ಣನ್ನು ಹೆಚ್ಚಾಗಿ ತಿನ್ನಿ ಎಂದು. ಸಾಮಾನ್ಯವಾಗಿ ನಾವೆಲ್ಲರೂ ಹಳದಿ ಬಾಳೆಹಣ್ಣನ್ನು ನೋಡಿರುತ್ತೇವೆ. ಆದರೆ ಕೆಂಪು ಬಾಳೆ ಹಣ್ಣಿನ ಬಗ್ಗೆ ಅಷ್ಟು ಗೊತ್ತಿರುವುದಿಲ್ಲ. ಕೆಂಪು ಬಾಳೆ ಹಣ್ಣನ್ನು ತಿನ್ನುವುದರಿಂದ ಆಗುವ ಉಪಯೋಗಗಳನ್ನು ತಿಳಿದರೆ ನೀವು ಅಚ್ಚರಿ ಪಡುತ್ತೀರಾ.

ಕೆಂಪು ಬಾಳೆ ಹಣ್ಣಿನಲ್ಲಿ ಪೌಷ್ಟಿಕಾಂಶ ಮತ್ತು ನಾರಿನಾಂಶ ಅತಿ ಹೆಚ್ಚಾಗಿದ್ದು ಎರಡೇ ಎರಡು ಬಾಳೆಹಣ್ಣನ್ನು ಸೇವಿಸಿದರೆ ಸಾಕು ನಿಮಗೆ ಅರ್ಧ ದಿನಕ್ಕೆ ಬೇಕಾಗುವಷ್ಟು ಶಕ್ತಿ ಬರುತ್ತದೆ ಮತ್ತು ಇದು ನಿಮ್ಮ ಹಸಿವನ್ನು ನೀಗಿಸುತ್ತದೆ. ಕೆಂಪು ಬಾಳೆಹಣ್ಣು ನಿಮ್ಮ ತೂಕವನ್ನು ಇಳಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕೆಂಪು ಬಾಳೆ ಹಣ್ಣನ್ನು ಹೆಚ್ಚಾಗಿ ತಿನ್ನುವುದರಿಂದ ನಿಮ್ಮ ತೂಕವನ್ನು ಬಹಳ ಸುಲಭವಾಗಿ ಇಳಿಸಬಹುದು.

ಕೆಂಪು ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಮತ್ತು ಕ್ಯಾಲ್ಸಿಯಂ ಹೇರಳವಾಗಿರುವುದು. ಇದು ನಮ್ಮ ದೇಹದಲ್ಲಿನ ಮೂಳೆಗಳನ್ನು ಗಟ್ಟಿಯಾಗಿರಲು ಹೆಚ್ಚು ಸಹಾಯ ಮಾಡುತ್ತದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರೆ ಪ್ರತಿ ದಿನ ಕೆಂಪು ಬಾಳೆ ಹಣ್ಣನ್ನು ತಿನ್ನಿ ಇದರಿಂದ ಕಿಡ್ನಿಯಲ್ಲಿರುವ ಕಲ್ಲು ನಿಧಾನವಾಗಿ ಕರಗುವ ಸಾಧ್ಯತೆ ಇರುತ್ತದೆ. ನೀವು ಧೂಮಪಾನ ಮತ್ತು ಮದ್ಯಪಾನ ವ್ಯಾಸನಿಗಳು ಆಗಿದ್ದರೆ ಅದನ್ನು ಬಿಡಲು ಇಚ್ಛಿಸುತ್ತಿದ್ದರೆ ನಿಮಗೆ ಧೂಮಪಾನ ಮತ್ತು ಮಧ್ಯಪಾನ ಮಾಡಬೇಕೆಂದು ಅನ್ನಿಸಿದಾಗಲೆಲ್ಲ ಕೆಂಪು ಬಾಳೆ ಹಣ್ಣನ್ನು ತಿನ್ನಿ. ಬಾಳೆಹಣ್ಣಿನಲ್ಲಿ ಮೆಗ್ನೀಷಿಯಂ ಮತ್ತು ಪೊಟಾಶಿಯಂ ಹೆಚ್ಚಾಗಿದ್ದು ಬರೀ ನಿಕೋಟಿನ್ ತುಂಬಿರುವ ಸಿಗರೇಟ್ ನಿಂದ ಹೊರಬರಲು ಸಹಾಯ ಮಾಡುತ್ತದೆ.

ಕೆಂಪು ಬಾಳೆಹಣ್ಣು ಬರೀ ಉತ್ತಮ ಆರೋಗ್ಯಕ್ಕೆ ಮಾತ್ರ ಸೀಮಿತವಾಗದೆ ಸೌಂದರ್ಯ ವರ್ಧಕವಾಗಿ ಕೆಲಸ ಮಾಡುತ್ತದೆ. ನಿಮ್ಮ ತ್ವಚೆಯು ಕಾಂತಿಯಿಂದ ಕಾಣಬೇಕೆಂದು ನೀವು ಬಯಸುತ್ತಿದ್ದರೆ ಕೆಂಪು ಬಾಳೆ ಹಣ್ಣನ್ನು ಚೆನ್ನಾಗಿ ಕಿವುಚಿ ಪೇಸ್ಟ್ ತರ ಮಾಡಿಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ಓಟ್ಸ್ ಪೌಡರ್ ಅನ್ನು ಮಿಶ್ರಣ ಮಾಡಿ ಅದನ್ನು ನಿಮ್ಮ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಸ್ವಲ್ಪ ಸಮಯದ ನಂತರ ಉಗುರು ಬೆಚ್ಚನೆ ನೀರಿನಲ್ಲಿ ಮುಖವನ್ನು ಚೆನ್ನಾಗಿ ತೊಳೆಯಿರಿ. ಇದರಿಂದ ನಿಮ್ಮ ಮುಖ ಕಾಂತಿಯುಕ್ತವಾಗುತ್ತದೆ. ನಿಮ್ಮ ದೇಹದಲ್ಲಿ ರಕ್ತದ ಕೊರತೆ ಇದ್ದರೆ ಪ್ರತಿನಿತ್ಯ ಎರಡು ಕೆಂಪು ಬಾಳೆ ಹಣ್ಣನ್ನು ಸೇವಿಸುತ್ತಾ ಬಂದರೆ ನಿಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪತ್ತಿ ಹೆಚ್ಚಾಗುತ್ತದೆ.

ಕೂದಲು ಉದುರುವ ಸಮಸ್ಯೆ ಇದ್ದರೆ ಕೆಂಪು ಬಾಳೆ ಹಣ್ಣಿಗೆ ಸಾಸಿವೆ ಎಣ್ಣೆ ಮತ್ತು ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಪೇಸ್ಟ್ ಮಾಡಿ ನಂತರ ಪೇಸ್ಟ್ ಅನ್ನು ನಿಮ್ಮ ತಲೆಗೆ ಚೆನ್ನಾಗಿ ಹೆಚ್ಚಿಕೊಳ್ಳಿ. ನಂತರ ನಿಂಬೆ ಹಣ್ಣಿನ ರಸವನ್ನು ನೀರಿನಲ್ಲಿ ಮಿಶ್ರಣ ಮಾಡಿ ಆ ನೀರನ್ನು ತಲೆಗೆ ಸಿಂಪಡಿಸಿ. ವಾರಕ್ಕೆ ಕನಿಷ್ಠ ಮೂರು ಬಾರಿ ಈ ಪ್ರಕ್ರಿಯೆಯನ್ನು ಮಾಡುವುದರಿಂದ ನಿಮ್ಮ ತಲೆ ಕೂದಲಿನ ಸಮಸ್ಯೆ ಮತ್ತು ಕೂದಲಿನ ಹೊಟ್ಟಿನ ಸಮಸ್ಯೆ ಕೂಡ ಕಡಿಮೆಯಾಗುತ್ತಾ ಬರುತ್ತದೆ.

Check Also

ಪ್ರತಿ ನಿತ್ಯ ಹೀಗೆ ಬಾದಾಮಿ ತಿಂದರೆ ನಿಮಗೆ ಸಿಗುತ್ತೆ ನಲವತ್ತು ಲಾಭ

ಇತ್ತೀಚಿನ ದಿನಗಳಲ್ಲಿ ಶೇಕಡಾ 60 ರಿಂದ 70 ರಷ್ಟು ಜನರು ರಕ್ತದೊತ್ತಡ ಅಥವಾ ಬಿಪಿ ಇಂದ ಬಳಲುತ್ತಿರುತ್ತಾರೆ. ಬಾದಾಮಿಯಲ್ಲಿ ಸೋಡಿಯಂ …

Leave a Reply

Your email address will not be published. Required fields are marked *