ಕೊತ್ತಂಬರಿ ಸೊಪ್ಪಿಗೆ ಇದನ್ನು ಬೆರೆಸಿಕೊಂಡು ತಿಂದರೆ ಆರೋಗ್ಯ ಸುಪರ್ ಆಗಿರುತ್ತೆ

ಕೊತ್ತಂಬರಿ ಸೊಪ್ಪನ್ನು ಸಂಬಾರ ಸೊಪ್ಪು ಎಂದು ಕೂಡ ಕರೆಯುತ್ತಾರೆ. ಈ ಸೊಪ್ಪನ್ನು ವೆಜ್ ಮತ್ತು ನಾನ್-ವೆಜ್ ಎರಡು ತರಹದ ಅಡುಗೆ ಮಾಡಲು ಬಳಸುತ್ತಾರೆ. ನನ್ನ ಅಡಿಗೆಯ ರುಚಿ ಹೆಚ್ಚಿಸಲು ಮತ್ತು ಅಡುಗೆಯ ಅಲಂಕಾರಕ್ಕಾಗಿ ಉಪಯೋಗಿಸುತ್ತಾರೆ. ಎಲ್ಲರೂ ಇವೆರಡು ಕಾರಣಗಳಿಗೆ ಮಾತ್ರ ಸೀಮಿತ ಎಂದು ಅಂದುಕೊಂಡಿರುತ್ತಾರೆ ಆದರೆ ಇದರಲ್ಲಿರುವ ಔಷಧೀಯ ಗುಣಗಳ ಬಗ್ಗೆ ಹೆಚ್ಚು ಜನರಿಗೆ ಗೊತ್ತಿರುವುದಿಲಲ್ಲ. ಕೊತ್ತಂಬರಿ ಸೊಪ್ಪು ಬರಿ ಅಡುಗೆಗೆ ಮಾತ್ರ ಸೀಮಿತವಾಗದೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಚಾರದಲ್ಲಿ ಕೂಡ ಮುಖ್ಯ ಪಾತ್ರವನ್ನು ವಹಿಸುತ್ತದೆ. ಹಾಗಾದರೆ ಕೊತ್ತಂಬರಿ ಸೊಪ್ಪು ಅಥವಾ ಸಂಬಾರ ಸೊಪ್ಪಿನಿಂದ ಆಗುವ ಉಪಯೋಗಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಕೊತ್ತಂಬರಿ ಸೊಪ್ಪನ್ನು ಹೆಚ್ಚಾಗಿ ತಿನ್ನುವುದರಿಂದ ದೇಹದಲ್ಲಿ ಹೆಚ್ಚು ಕೊಬ್ಬಿನಂಶ ಬೆಳೆಯುವುದಿಲ್ಲ. ಪ್ರತಿದಿನ ಕೊತ್ತಂಬರಿ ಸೊಪ್ಪನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ರಕ್ತದೊತ್ತಡ ಇರುವವರಿಗೆ ತುಂಬಾ ಉಪಯೋಗವಾಗುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ದೇಹದ ತೂಕವನ್ನು ಇಳಿಸುತ್ತದೆ. ಕೊತ್ತಂಬರಿ ಸೊಪ್ಪನ್ನು ನಮ್ಮ ದೈನಂದಿನ ಆಹಾರ ಪದ್ದತಿಯಲ್ಲಿ ಹೆಚ್ಚು ತಿನ್ನುವುದನ್ನು ರೂಢಿಸಿಕೊಳ್ಳುವುದರಿಂದ ಮಕ್ಕಳಾಗದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮಕ್ಕಳಾಗುವ ಸಾಧ್ಯತೆಗಳು ಹೆಚ್ಚಾಗುತ್ತದೆ ಮತ್ತು ಗರ್ಭಿಣಿಯರಿಗೆ ಕೊತ್ತಂಬರಿ ಸೊಪ್ಪನ್ನು ಹೆಚ್ಚಾಗಿ ತಿನ್ನಿಸುವುದರಿಂದ ಹುಟ್ಟುವ ಮಗುವು ಆರೋಗ್ಯದಿಂದ ಹುಟ್ಟುತ್ತದೆ. ಅಂದರೆ ಮಕ್ಕಳು ಜನಿಸಿದಾಗ ಬರುವಂತಹ ಸಣ್ಣಪುಟ್ಟ ಕಾಯಿಲೆಗಳು ಬರದಂತೆ ತಡೆಯುತ್ತದೆ.

ಕೊತ್ತಂಬರಿ ಸೊಪ್ಪನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ತುಂಬಾ ಉಪಯೋಗವಾಗುತ್ತದೆ. ಮೂತ್ರಪಿಂಡ ದಲ್ಲಿ ಕಲ್ಲು ಅಥವಾ ಲವಣದ ಉಂಡೆಗಳು ಬೆಳೆಯದಂತೆ ಇದು ನೋಡಿಕೊಳ್ಳುತ್ತದೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಕೊತ್ತಂಬರಿ ಸೊಪ್ಪನ್ನು ಹೆಚ್ಚಾಗಿ ಸೇವಿಸುವುದರಿಂದ ಇದು ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗದಂತೆ ನಿಯಂತ್ರಿಸುತ್ತದೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳು ಇದನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ಮರೆವಿನ ಕಾಯಿಲೆ ಕಡಿಮೆಯಾಗುತ್ತದೆ.

ಮೂತ್ರನಾಳದ ಸಮಸ್ಯೆಯಿಂದ ಬಳಲುತ್ತಿರುವವರು ಕೊತ್ತಂಬರಿ ಸೊಪ್ಪನ್ನು ಹೆಚ್ಚಾಗಿ ಸೇವಿಸಿ ಇದರಿಂದ ಮೂತ್ರದ ಸಮಸ್ಯೆ ನಿವಾರಣೆಯಾಗುವುದು. ಪ್ರತಿನಿತ್ಯ ಮುಂಜಾನೆ ಕೊತ್ತಂಬರಿ ಸೊಪ್ಪಿನ ರಸವನ್ನು ಕುಡಿಯಿರಿ. ಇದರಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರಿಗೆ ಇದು ಮೆದುಳಿನ ನರಗಳನ್ನು ಶಾಂತಗೊಳಿಸಿ ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಮತ್ತು ದಿನಪೂರ್ತಿ ಹೆಚ್ಚು ಲವಲವಿಕೆಯಿಂದ ಇರುವಂತೆ ಮಾಡುತ್ತದೆ. ಕೊತ್ತಂಬರಿ ಸೊಪ್ಪು ಅಥವಾ ಸಂಬಾರ ಸೊಪ್ಪನ್ನು ನಮ್ಮ ದೈನಂದಿನ ಆಹಾರದಲ್ಲಿ ಹೆಚ್ಚು ಸೇವಿಸುವುದರಿಂದ ನಮ್ಮ ಮೂಳೆಗಳು ಹೆಚ್ಚು ಬಲಿಷ್ಠವಾಗುತ್ತದೆ. ಮತ್ತು ಮೂಳೆಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಕೊತ್ತಂಬರಿ ಸೊಪ್ಪನ್ನು ಹೆಚ್ಚಾಗಿ ಸೇವಿಸುವುದರಿಂದ ರಕ್ತ ಹೆಪ್ಪುಗಟ್ಟು ವಂತೆ ಮಾಡುತ್ತದೆ. ಅಂದರೆ ಸಣ್ಣಪುಟ್ಟ ಗಾಯಗಳಾಗಿ ರಕ್ತ ಸೋರಿಕೆ ಉಂಟಾಗುತ್ತದೆ. ಅಂತಹ ಸಂದರ್ಭಗಳಲ್ಲಿ ರಕ್ತವನ್ನು ಬೇಗ ಹೆಪ್ಪುಗಟ್ಟುವಂತೆ ಮಾಡಿ ರಕ್ತ ಸೋರಿಕೆಯನ್ನು ನಿಯಂತ್ರಿಸುತ್ತದೆ. ಮಾಹಿತಿ ನಕಲು ಮಾಡದೇ ತಪ್ಪದೇ ಶೇರ್ ಮಾಡಿ ಎಲ್ಲರಿಗು ಸಹಾಯ ಆಗಲಿ.

Check Also

ಪ್ರತಿ ನಿತ್ಯ ಹೀಗೆ ಬಾದಾಮಿ ತಿಂದರೆ ನಿಮಗೆ ಸಿಗುತ್ತೆ ನಲವತ್ತು ಲಾಭ

ಇತ್ತೀಚಿನ ದಿನಗಳಲ್ಲಿ ಶೇಕಡಾ 60 ರಿಂದ 70 ರಷ್ಟು ಜನರು ರಕ್ತದೊತ್ತಡ ಅಥವಾ ಬಿಪಿ ಇಂದ ಬಳಲುತ್ತಿರುತ್ತಾರೆ. ಬಾದಾಮಿಯಲ್ಲಿ ಸೋಡಿಯಂ …

Leave a Reply

Your email address will not be published. Required fields are marked *