ಹಿಂದೂ ಸಂಪ್ರದಾಯದಲ್ಲಿ ತಾಂಬೂಲ ಎಂದರೆ ಮೊದಲಿಗೆ ನೆನಪಾಗುವ ವಸ್ತುವೇ ವಿಳ್ಳೆದೆಲೆ ಮತ್ತು ಅಡಿಕೆ. ದೇವಸ್ಥಾನಗಳಲ್ಲಿ ದೇವರ ಪೂಜೆಗೆ ಮತ್ತು ಶುಭ ಸಮಾರಂಭಗಳಲ್ಲಿ ಎಲೆ ಅಡಿಕೆಯನ್ನು ಹೆಚ್ಚು ಬಳಸುತ್ತಾರೆ. ಇಷ್ಟೆಲ್ಲಾ ಪ್ರಾಮುಖ್ಯತೆಯನ್ನು ಹೊಂದಿರುವ ಎಲೆ ಅಡಿಕೆಯನ್ನು ತಿನ್ನುವುದರಿಂದ ಆಗುವ ಲಾಭಗಳ ಬಗ್ಗೆ ಹೇಳುವುದಾದರೆ. ವಿಲ್ಲೆದೆಲೆಯಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿದೆ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.

ಗಂಟಲಲ್ಲಿ ಕಿರಿಕಿರಿ ಆಗುತ್ತಿದ್ದು ಧ್ವನಿ ಪೆಟ್ಟಿಗೆ ಹಾಳಾಗಿದ್ದರೆ ವಿಲ್ಲೆದೆಲೆ ತಿನ್ನುವುದರಿಂದ ನಮ್ಮ ಧ್ವನಿ ಪೆಟ್ಟಿಗೆ ಸರಿಯಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರು ವೀಳ್ಯದೆಲೆಯನ್ನು ಹೆಚ್ಚಾಗಿ ತಿನ್ನುವುದರಿಂದ ಗ್ಯಾಸ್ ಟ್ರಬಲ್ ಕಡಿಮೆಯಾಗುತ್ತದೆ. ಚಿಕ್ಕ ಮಕ್ಕಳಲ್ಲಿ ಕೆಮ್ಮು ಕಾಣಿಸಿಕೊಂಡರೆ ವಿಲ್ಲೆದೆಲೆಯ ರಸವನ್ನು ಕುಡಿಸುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ. ವೀಳ್ಯದ ಎಲೆಗೆ ಸ್ವಲ್ಪ ಅಡುಗೆ ಎಣ್ಣೆಯನ್ನು ಸವರಿ ಎಲೆಯನ್ನು ಬೆಂಕಿಯಲ್ಲಿ ಬೆಚ್ಚಗೆ ಮಾಡಿ ಅದನ್ನು ಮಕ್ಕಳ ಎದೆಯ ಮೇಲೆ ಇಡುವುದರಿಂದ ಆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಉಸಿರಾಟದ ತೊಂದರೆಯನ್ನು ನಿವಾರಿಸಬಹುದು.

ತಲೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ವೀಳ್ಯದ ಎಲೆಗೆ ಕರ್ಪೂರ ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಸವರಿ ಎಲೆಯನ್ನು ನಂತರ ಬೆಂಕಿಯಲ್ಲಿ ಬೆಚ್ಚಗೆ ಮಾಡಿ ಹಣೆಯ ಮೇಲೆ ಇಟ್ಟು ಕಾವು ಕೊಡುವುದರಿಂದ ತಲೆನೋವಿನ ಸಮಸ್ಯೆ ದೂರವಾಗುತ್ತದೆ. ಬಿದ್ದು ಗಾಯವಾದಾಗ ವೀಳ್ಯದೆಲೆಯ ರಸವನ್ನು ನಿಂಬೆ ರಸದ ಜೊತೆ ಮಿಶ್ರಣ ಮಾಡಿ ಗಾಯದ ಮೇಲೆ ಹಚ್ಚುವುದರಿಂದ ಆಗಿರುವ ಗಾಯ ಬಹು ಬೇಗ ವಾಸಿಯಾಗುತ್ತದೆ.

ಊಟ ಆದ ನಂತರ ವೀಳ್ಯದೆಲೆಯನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಗರ್ಭಿಣಿಯರಿಗೆ ಪದೇ ಪದೇ ವಾಕರಿಕೆ ಅಥವಾ ಬಿಕ್ಕಳಿಕೆಯ ಸಮಸ್ಯೆ ಆಗುತ್ತಿದ್ದರೆ ವೀಳ್ಯದೆಲೆಯ ಜೊತೆ ಅಡಿಕೆಯನ್ನು ಮಿಶ್ರಣ ಮಾಡಿ ಮತ್ತು ಅದಕ್ಕೆ ಸ್ವಲ್ಪ ಏಲಕ್ಕಿ ಸೇರಿಸಿ ತಿನ್ನುವುದರಿಂದ ಬಿಕ್ಕಳಿಕೆಯ ಸಮಸ್ಯೆ ನಿವಾರಣೆಯಾಗುತ್ತದೆ. ಹಲ್ಲು ಅಥವಾ ಒಸಡಿನ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ವೀಳ್ಯದೆಲೆಯನ್ನು ಚೆನ್ನಾಗಿ ಅರೆದು ಅದರಿಂದ ರಸವನ್ನು ತೆಗೆದು ಅದಕ್ಕೆ ಸ್ವಲ್ಪ ಲವಂಗವನ್ನು ಮಿಶ್ರಣ ಮಾಡಿ ಈ ಮಿಶ್ರಣವನ್ನು ನೋವಿರುವ ಜಾಗದಲ್ಲಿ ಹಚ್ಚುವುದರಿಂದ ವಸಡು ನೋವು ಅಥವಾ ಹಲ್ಲು ನೋವು ಕಡಿಮೆಯಾಗುತ್ತದೆ.

ಕೂದಲು ಉದುರುವ ಸಮಸ್ಯೆ ಇದ್ದರೆ ವೀಳ್ಯದೆಲೆಯ ರಸವನ್ನು ಕೊಬ್ಬರಿ ಎಣ್ಣೆಯ ಜೊತೆ ಮಿಶ್ರಣ ಮಾಡಿ ಅದಕ್ಕೆ ಒಂದಲಗದ ಸೊಪ್ಪಿನ ರಸವನ್ನು ಮಿಶ್ರಣ ಮಾಡಬೇಕು. ಪ್ರತಿದಿನ ಈ ಮಿಶ್ರಣವನ್ನು ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ ಮತ್ತು ಕೂದಲಿನ ಹೊಟ್ಟಿನ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಅಸ್ತಮಾ ಅಥವಾ ಕಫದ ಸಮಸ್ಯೆಯಿಂದ ಬಳಲುತ್ತಿರುವವರು ವಿಳ್ಳೆ ದೆಲೆಯ ರಸವನ್ನು ಈರುಳ್ಳಿ ರಸದ ಜೊತೆ ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಮಿಶ್ರಣ ಮಾಡಿಕೊಂಡು ಪ್ರತಿನಿತ್ಯ ಕುಡಿಯುವುದರಿಂದ ಕಫದ ಸಮಸ್ಯೆ ದೂರವಾಗುತ್ತದೆ. ವಿಳ್ಳೆದೆಲೆ ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಇದರಿಂದ ನಮ್ಮ ದೇಹದ ಕೊಲೆಸ್ಟ್ರಾಲ್ ಅಥವಾ ಕೊಬ್ಬಿನಂಶ ಕೂಡ ಕಡಿಮೆಯಾಗುತ್ತದೆ ಮತ್ತು ದೇಹದ ತೂಕ ಇಳಿಯುತ್ತದೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ