ಚಿಕ್ಕ ಪುಟ್ಟ ಕಾಯಿಲೆಗೆ ಆಸ್ಪತ್ರೆಗೆ ಹೋಗುವ ಅಗತ್ಯವೇ ಇಲ್ಲ ಜೀವನದಲ್ಲಿ ಕಾಯಿಲೆ ಕಸಾಲೆಗಳು ಸಾಮನ್ಯ. ಆದರೆ ನಮ್ಮ ಜೀವನ ಕ್ರಮ ಕಾಯಿಲೆಯನ್ನು ಹೆಚ್ಚು ಮಾಡುವಲ್ಲಿ ಅಥವಾ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚಿಕ್ಕ ಪುಟ್ಟ ಕಾಯಿಲೆ ಬರುವಾಗಲೇ ಅದರ ಬಗ್ಗೆ ಗಮನ ಹರಿಸಿದರೆ ಬೇಗನೆ ಗುಣ ಪಡಿಸಬಹುದು. ಆದರೆ ಸಣ್ಣ ಪುಟ್ಟ ಕಾಯಿಲೆಗಳನ್ನು ಹಾಗೇ ಬಿಟ್ಟರೆ ಅವು ದೊಡ್ಡ ಸಮಸ್ಯೆಯಾಗಿ ಉದ್ಭವವಾಗುತ್ತದೆ. ಉದಾಹರಣೆಗೆ ನಿದ್ರಾ ಹೀನತೆ. ಇದನ್ನು ಆರಂಭದಲ್ಲಿಯೇ ಗುಣ ಪಡಿಸದಿದ್ದರೆ ಮುಂದೆ ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಕೆಲವೊಂದು ಸಮಸ್ಯೆಗಳಿಗೆ ಮನೆ ಔಷಧಿಯಿಂದ ಪರಿಹಾರ ಕಾಣಬಹುದು.

ಈ ಕೆಳಗ್ಗೆ ಕೆಲ ಸಲಹೆಗಳನ್ನು ನೀಡಲಾಗಿದೆ. ಅವುಗಳು ನಿಮ್ಮನ್ನು ಆರೋಗ್ಯವಂತರಾಗಿ ಇಡುವಲ್ಲಿ ಸಹಕಾರಿಯಾಗಿದೆ.

1. ಪ್ರತಿದಿನ ಹಸಿ ಕರಿ ಬೇವಿನ ಎಲೆ ತಿಂದರೆ ಅಕಾಲಿಕ ಮುಪ್ಪು ಉಂಟಾಗುವುದಿಲ್ಲ. ಅಲ್ಲದೆ ಇದನ್ನು ತಿಂದರೆ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ.

2. ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಇದ್ದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಉತ್ತಮ ಪ್ರಯೋಜನವನ್ನು ಕಾಣಬಹುದು.

3. ಅಜೀರ್ಣತೆ ಉಂಟಾದರೆ 2-3 ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಜಜ್ಜಿ, ಅದನ್ನು ಹಾಲಿನಲ್ಲಿ ಹಾಕಿ ಕುದಿಸಿ ಕುಡಿದರೆ ತಕ್ಷಣ ಗುಣವಾಗುವುದು.

4. ನಿದ್ದೆ ಸರಿಯಾಗಿ ಬರದಿದ್ದರೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಅರೆದು ಅದರಿಂದ ಜ್ಯೂಸ್ ಮಾಡಿ ಕುಡಿದರೆ ತಕ್ಷಣ ನಿದ್ದೆ ಬರುತ್ತದೆ.

5. ಕೊತ್ತಂಬರಿ ಸೊಪ್ಪಿನ ರಸವನ್ನು ಮೊಸರಿನಲ್ಲಿ ಹಾಕಿ ಮಿಶ್ರ ಮಾಡಿ ಕುಡಿದರೆ ಅಜೀರ್ಣ ಸಮಸ್ಯೆ ನಿವಾರಣೆಯಾಗುವುದು.

6. ರಕ್ತಹೀನತೆ ಉಂಟಾಗಿದ್ದರೆ ಮೆಂತೆಯನ್ನು ನೀರಿನಲ್ಲಿ ನೆನೆ ಹಾಕಿ ಪ್ರತಿದಿನ ಬೆಳಗ್ಗೆ ತಿಂದರೆ ಒಳ್ಳೆಯದು. ಬೀಟ್ ರೂಟ್ ತಿನ್ನುವುದು ಮತ್ತು ಕಬ್ಬಿಣದಂಶವಿರುವ ಆಹಾರಗಳ ಸೇವನೆ ಒಳ್ಳೆಯದು.

7. ಶೀತವಾಗಿದ್ದರೆ ಶುಂಠಿ ರಸವನ್ನು ಜೇನು ಮತ್ತು ತುಳಸಿ ರಸದ ಜೊತೆ ಮಿಶ್ರ ಮಾಡಿ ಅದಕ್ಕೆ ಎರಡು ಕಾಳು ಕರಿಮೆಣಸಿನ ಪುಡಿ ಹಾಕಿ ಮಿಶ್ರ ಮಾಡಿದರೆ ಸೇವಿಸಿದರೆ ಒಳ್ಳೆಯದು.

8. ಅಸಿಡಿಟಿ ಇದ್ದರೆ ನಿಂಬೆ ಪಾನಕದ ಜೊತೆ ಶೂಂಠಿ ರಸ ಮಿಶ್ರ ಮಾಡಿ ಕುಡಿಯುವುದು ಒಳ್ಳೆಯದು.

9. ಪುದೀನಾ ಜೀರ್ಣ ಕ್ರಿಯೆಗೆ ಒಳ್ಳೆಯದು.

10. ಅಸ್ತಮಾ ಖಾಯಿಲೆಗೆ ಮೂರು ಅಥವ ನಾಲ್ಕು  ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಹಾಲಿಗೆ ಹಾಕಿ ಕಾಯಿಸಿ ರಾತ್ರಿ ಕುಡಿಯುವುದು ಒಳ್ಳೆಯದು.

11. ಬಾಳೆ ಹಣ್ಣು ಕಿಡ್ನಿಯಲ್ಲಿರುವ ಕಶ್ಮಲಗಳನ್ನು ತೆಗೆದುಹಾಕಲು ಮತ್ತು ಮಲಬದ್ಧತೆ ಸಮಸ್ಯೆಯನ್ನು ತೊಡೆದು ಹಾಕಲು ಸಹಕಾರಿಯಾಗಿದೆ. ಪ್ರತಿನಿತ್ಯ ಒಂದು ಬಾಳೆಹಣ್ಣು ತಿಂದರೆ ದೇಹಕ್ಕೆ ಉತ್ತಮ ಪೋಷಕಾಂಶ ದೊರೆಯುತ್ತದೆ. ಆದರೆ ತುಂಬಾ ಬಾಳೆಹಣ್ಣು ತಿಂದರೆ ದೇಹದ ತೂಕ ಹೆಚ್ಚಾಗುವುದು. ಬಾಳೆಹಣ್ಣು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.

12. ಓಟ್ ಮೀಲ್ಸ್ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡಲು ಸಹಕಾರಿಯಾಗಿದೆ.ಇದನ್ನು ಬೆಳಗ್ಗಿನ ತಿಂಡಿಯಾಗಿ ಸೇವಿಸಿದರೆ ಬೇಗನೆ ತೆಳ್ಳಗಾಗಬಹುದು.

ಚಿಕ್ಕ ಪುಟ್ಟ ಕಾಯಿಲೆಗೆ ಆಸ್ಪತ್ರೆಗೆ ಹೋಗುವ ಬದಲು ಈ ಮೇಲಿನ ಸಲಹೆಗಳನ್ನು ಅನುಸರಿಸಿದರೆ ಕಾಯಿಲೆ ಗುಣಮುಖವಾಗುವುದು ಮತ್ತು ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ.

1 thought on “ಚಿಕ್ಕ ಪುಟ್ಟ ಕಾಯಿಲೆಗೆ ಆಸ್ಪತ್ರೆಗೆ ಹೋಗುವ ಅಗತ್ಯವೇ ಇಲ್ಲ

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ