ಜಾಜಿ ಮಲ್ಲಿಗೆ ಎಂದರೆ ಯಾವ ಮಹಿಳೆಯರಿಗೆ ಇಷ್ಟವಾಗುವುದಿಲ್ಲ ಹೇಳಿ. ಹಿಂದೂ ಸಂಪ್ರದಾಯದಲ್ಲಿ ಹೂವುಗಳಿಗೆ ಬಹಳ ಮಹತ್ವದ ಸ್ಥಾನವಿದೆ. ಮಹಿಳೆಯರು ಸೀರೆ ಉಟ್ಟುಕೊಂಡು ಹೂ ಅನ್ನು ಮಡಿದು ಕೊಂಡಿದ್ದರೆ ಅವರನ್ನು ನೋಡಲು ಎರಡು ಕಣ್ಣು ಸಾಲದು. ಅದರಲ್ಲೂ ಜಾಜಿ ಮಲ್ಲಿಗೆಯನ್ನು ಮುಡಿದು ಕೊಂಡಿದ್ದಾರೆ ಅವರ ಸೌಂದರ್ಯ ದುಪ್ಪಟ್ಟಾಗುತ್ತದೆ. ಜಾಜಿ ಮಲ್ಲಿಗೆ ಬರಿ ದೇವರ ಪೂಜೆಯಲ್ಲಿ ಮತ್ತು ಮಹಿಳೆಯರು ಮುರಿದುಕೊಳ್ಳಲು ಸೀಮಿತವಾಗದೆ ಈ ಹೂವು ಆರೋಗ್ಯದ ವಿಚಾರದಲ್ಲಿ ಕೂಡ ಬಹಳ ಉಪಯೋಗಕಾರಿಯಾಗಿದೆ.

ಒಸಡಿನಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಜಾಜಿಮಲ್ಲಿಗೆಯ ಎಲೆಯನ್ನು ಚೆನ್ನಾಗಿ ಹರಿದು ಹೋಗಿರುವುದರಿಂದ ಒಸಡಿನಲ್ಲಿ ರಕ್ತಸ್ರಾವ ಬರುವುದು ಕಡಿಮೆಯಾಗುತ್ತದೆ. ಜ್ವರದ ಸಮಸ್ಯೆಯಿಂದ ಬಳಲುತ್ತಿದ್ದರೆ ಜಾಜಿ ಹೂವಿನ ಬೇರಿನಿಂದ ಕಷಾಯವನ್ನು ತಯಾರಿಸಿ ಅದನ್ನು ಕುಡಿಯುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ. ಜಾಜಿ ಹೂವಿನ ಎಲೆಯನ್ನು ಚೆನ್ನಾಗಿ ಅರೆದು ಅದರಿಂದ ಎಣ್ಣೆಯನ್ನು ತಯಾರಿಸಿ ಅದನ್ನು ಸುಟ್ಟ ಗಾಯಗಳಿಗೆ ಲೇಪಿಸುವುದರಿಂದ ಗಾಯದಿಂದ ಆಗುವ ಉರಿಯು ಬೇಗ ತಣ್ಣಗಾಗುತ್ತದೆ ಮತ್ತು ಗಾಯ ಬೇಗ ವಾಸಿಯಾಗುತ್ತದೆ.

ಕಣ್ಣಿನ ಆ ನೋವು ಅಥವಾ ಕಣ್ಣು ಉರಿಯುತ್ತಿದ್ದರೆ ಜಾಗವನ್ನು ಚೆನ್ನಾಗಿ ಅರೆದು ಅದರಿಂದ ಆ ರಸವನ್ನು ತೆಗೆದು ಅದಕ್ಕೆ ಸ್ವಲ್ಪ ನೀರನ್ನು ಮಿಶ್ರಣ ಮಾಡಿ ತೆಳುವಾದ ಕಾಟನ್ ಬಟ್ಟೆಯನ್ನು ತೆಗೆದುಕೊಂಡು ಆ ಬಟ್ಟೆಯನ್ನು ಮಿಶ್ರಣದಲ್ಲಿ ಅದ್ದಿ ನಂತರ ಕಣ್ಣಿನ ಮೇಲೆ ಸ್ವಲ್ಪ ಹೊತ್ತು ಇಟ್ಟುಕೊಳ್ಳುವುದರಿಂದ ಕಣ್ಣಿನ ನೋವು ಅಥವಾ ಕಣ್ಣಿನ ಉರಿ ಕಡಿಮೆಯಾಗುತ್ತದೆ. ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದರೆ ಜಾಜಿ ಹೂವಿನ ಎಲೆಯಿಂದ ತಯಾರಿಸಿದ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.

ಚಿಕ್ಕಮಕ್ಕಳಲ್ಲಿ ಚರ್ಮದ ಕಾಯಿಲೆ ಅಂದರೆ ಕಜ್ಜಿ ತುರಿಕೆ ಯ ಸಮಸ್ಯೆಗಳು ಕಂಡು ಬರುತ್ತಿದ್ದರೆ ಜಾಜಿ ವನ್ನು ಚೆನ್ನಾಗಿ ಅರೆದು ಅದರಿಂದ ರಸವನ್ನು ತೆಗೆದು ಆ ರಸವನ್ನು ತುರಿಕೆ ಇರುವ ಅಥವಾ ಅಜ್ಜಿಯಾಗಿ ಇರುವ ಜಾಗದಲ್ಲಿ ಲೇಪಿಸುತ್ತಾ ಬಂದರೆ ಸಮಸ್ಯೆ ಕಾಲ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಹೆಚ್ಚು ರಕ್ತಸ್ರಾವವಾಗುತ್ತಿದ್ದರೆ ಜಾಜಿ ಹೂವಿನ ಎಲೆಯನ್ನು ಚೆನ್ನಾಗಿ ಅರೆದು ಅದರಿಂದ ರಸವನ್ನು ತೆಗೆದು ಅದಕ್ಕೆ ಸ್ವಲ್ಪ ಮೆಣಸಿನ ಪುಡಿ ಮತ್ತು ಜೇನು ತುಪ್ಪವನ್ನು ಮಿಶ್ರಣ ಮಾಡಿ ಸೇವಿಸುವುದರಿಂದ ರಕ್ತಸ್ರಾವ ಕಡಿಮೆಯಾಗುತ್ತದೆ.

ಮಕ್ಕಳಿಗೆ ಹಾಲು ಕುಡಿಸುವುದನ್ನು ಬಿಡಿಸಲು ಜಾಜಿ ಮಲ್ಲಿಗೆಯ ಹೂವನ್ನು ಚೆನ್ನಾಗಿ ಅರೆದು ಅದರಿಂದ ಬರುವ ರಸವನ್ನು ಮೊಲೆಗಳಿಗೆ ಹಚ್ಚುವುದರಿಂದ ಎದೆ ಹಾಲು ಇಂಗುತ್ತದೆ. ಇದರಿಂದ ಮಕ್ಕಳಿಗೆ ಹಾಲು ಕುಡಿಸುವುದನ್ನು ಬಿಡಿಸಬಹುದು. ಜಾಜಿ ಮಲ್ಲಿಗೆಯನ್ನು ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಸುತ್ತಾರೆ. ಇದರಿಂದ ಬರುವ ವಾಸನೆಯು ಬಹಳ ಚೆನ್ನಾಗಿರುತ್ತದೆ ಮತ್ತು ಇದನ್ನು ಸೋಪುಗಳ ತಯಾರಿಕೆಯಲ್ಲೂ ಕೂಡ ಬಳಸುತ್ತಾರೆ. ಈ ಉಪಯುಕ್ತ ಮಾಹಿತಿ ತಪ್ಪದೇ ಶೇರ್ ಮಾಡಿ ಎಲ್ಲರಿಗು ಸಹಾಯ ಆಗುತ್ತೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ