ಬಾಳೆ ಎಲೆಯನ್ನು ನೋಡಿದ ತಕ್ಷಣ ಎಲ್ಲರಿಗೂ ಅನ್ನಿಸುವುದು ಆ ಎಲೆಯ ಮೇಲೆ ಊಟ ಮಾಡಬೇಕು ಎಂದು. ನಮ್ಮ ಸಂಪ್ರದಾಯದಲ್ಲಿ ಬಾಳೆ ಎಲೆಯ ಮೇಲೆ ಊಟ ಮಾಡಿದರೆ ಮನುಷ್ಯನ ಹಲವಾರು ರೋಗಗಳು ಗುಣವಾಗುತ್ತವೆ ಎಂದು ನಂಬಿದ್ದಾರೆ. ಬಾಳೆ ಎಲೆಯ ಎಪಿಗಾಲ್ಲೋಕ್ಯಾಟೆಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶವಿರುತ್ತದೆ. ಜೊತೆಗೆ ಈ ಬಾಳೆ ಎಲೆಯು ಬ್ಯಾಕ್ಟೀರಿಯಾಗಳನ್ನು ಹತ್ತಿರ ಸಹ ಕರೆದುಕೊಳ್ಳುವುದಿಲ್ಲ ಹಾಗೂ ಬಾಳೆ ಎಲೆಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಡಿ ಶೇಖರಣೆಗೊಂಡಿರುತ್ತದೆ.

ಈ ಬಾಳೆ ಎಲೆ ಕೇವಲ ಊಟಕ್ಕೆ ಮಾತ್ರವಲ್ಲದೆ ಇನ್ನೂ ಹಲವಾರು. ಪ್ರಯೋಜನ ಪಡೆದುಕೊಂಡಿದೆ ಅದು ಏನು ಎಂದು ತಿಳಿದುಕೊಳ್ಳೋಣ ಬನ್ನಿ. ಬಿಸಿಯಾದ ಆಹಾರವನ್ನು ಬಾಳೆ ಎಲೆಯ ಮೇಲೆ ಬಡಿಸಿದಾಗ ಆ ಎಲೆಯಲ್ಲಿರುವ ಪೋಷಕಾಂಶಗಳು ಆಹಾರದ ಜೊತೆಗೆ ಸೇರುವ ಮೂಲಕ ನಮ್ಮ ದೇಹಕ್ಕೆ ಹಲವಾರು ಪೋಷಕಾಂಶಗಳು ಸೇರುತ್ತವೆ. ಮಕ್ಕಳಿಗೆ ಚಿಕ್ಕ ಗಾಯಗಳಾದಾಗ ಬಾಳೆ ಎಲೆಯ ರಸವನ್ನು ಹಾಕಿದರೆ ಗಾಯ ಗುಣವಾಗುತ್ತದೆ. ಬಾಳೆ ಎಲೆಯಿಂದ ಪೇಸ್ಟ್ ಮಾಡಿಕೊಂಡು ಅದನ್ನು ತಲೆಗೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ಸ್ನಾನ ಮಾಡಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಈ ಬಾಳೆ ಎಲೆಯ ಪೇಸ್ಟ್ ಅನ್ನು ಮುಖ. ಕೈ ಕಾಲಿಗೆ ಹಚ್ಚಿದರೆ ಬಿಸಿನಿಂದ ಆಗುವ ಟಾನ್ ಕಡಿಮೆ ಆಗುತ್ತದೆ. ಜೇನು ನೊಣ.ಯಾವುದಾದರೂ ಕೀಟ ಚೇಳುಗಳು ಕಚ್ಚಿದ್ದಾಗ ಮತ್ತು ಹಲವು ತ್ವಚೆಯ ಅಲರ್ಜಿಗಳಿಗೆ ಬಾಳೆ ಎಲೆಯ ರಸ ಹಾಕಿದರೆ ಬೇಗ ಗುಣವಾಗುತ್ತದೆ. ಒಂದು ಐಸ್ ಕ್ಯೂಬ್ ಅನ್ನು ಬಾಳೆ ಎಲೆಯಲ್ಲಿ ಸುತ್ತಿ ಅದರಿಂದ ಹಣೆಗೆ ಮಸಾಜ್ ಮಾಡಿಕೊಂಡರೆ ಮಾನಸಿಕ ಒತ್ತಡ. ತಲೆಯ ನೋವು ಕಡಿಮೆಯಾಗುತ್ತದೆ. ಸುಟ್ಟ ಗಾಯಗಳಿಗೆ ಶುಂಠಿ ಎಣ್ಣೆಯಲ್ಲಿ ಬಾಳೆ ಎಲೆಯನ್ನು ಅದ್ದಿ ಅದನ್ನು ಗಾಯಗಳಿಗೆ ಕಟ್ಟಿದರೆ ಅಥವಾ ಮುಚ್ಚಿದರೆ ಸುಟ್ಟ ಗಾಯ ಹೋಗುತ್ತದೆ.

ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು. ತುರಿಕೆ ಆಗಿದ್ದರೆ ಬಾಳೆ ಎಲೆಯ ರಸವನ್ನು ಹಚ್ಚಿದರೆ ಗುಳ್ಳೆ ಬೇಗ ಗುಣವಾಗುತ್ತದೆ. ಆಗ ತಾನೆ ಜನಿಸಿದ ಮಕ್ಕಳನ್ನು ಶುಂಠಿ ಎಣ್ಣೆಯನ್ನು ಸವರಿರುವ ಬಾಳೆ ಎಲೆಯಿಂದ ಸುತ್ತಿ ಬೆಳಗ್ಗೆ ಸೂರ್ಯನ ಕಿರಣಗಳಿಗೆ ಇಡುವುದರಿಂದ ಚರ್ಮ ರೋಗಗಳು ಮಗುವನ್ನು ಭಾದಿಸದಂತೆ ತಡೆಯಬಹುದು. ಸಣ್ಣ ವಯಸ್ಸಿನಲ್ಲೇ ಬಿಳಿಕೂದಲಿನ ಸಮಸ್ಯೆ ಇದ್ದವರು ನಿತ್ಯ ಬಾಳೆ ಎಲೆಯಲ್ಲಿ ಊಟ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೇ. ಬಾಳೆ ಎಲೆಯಲ್ಲಿ ಊಟ ಮಾಡುವುದುದರಿಂದ ದೇಹಕ್ಕೆ ತುಂಬಾ ತಂಪು. ಬಾಳೆ ಎಲೆಯಿಂದ ಎಷ್ಟೆಲ್ಲ ಲಾಭಗಳು ಇವೆ ನೋಡಿ ಹಾಗಾಗಿ ಆದಷ್ಟು ಊಟ ಮಾಡುವಾಗ ಬಾಳೆ ಎಲೆಯಲ್ಲಿ ಊಟ ಮಾಡಿ. ನಮ್ಮ ವೆಬ್ಸೈಟ್ ಎಲ್ಲ ಬರಹಗಳಿಗೆ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ. ತಪ್ಪದೇ ಶೇರ್ ಮಾಡಿ ಎಲ್ಲರೊಂದಿಗೂ ಹಂಚಿಕೊಳ್ಳಿ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ