ಇತ್ತೀಚಿನ ದಿನಗಳಲ್ಲಿ ಆರೋಗ್ಯ ವನ್ನು ಕಾಪಡಿಕೊಳ್ಳುವುದೇ ಒಂದು ದೊಡ್ಡ ವಿಚಾರವಾಗಿದೆ. ಆಹಾರ ದಲ್ಲಿ ಪೌಷ್ಟಿಕಾಂಶ ಇಲ್ಲದಿರುವುದು. ಪರಿಸರ ಮಾಲಿನ್ಯ ಒತ್ತಡದ ಜೀವನ ಹೀಗೆ ಅಲವಾರು ಸಮಸ್ಯೆಗಳಿಂದ ನಮ್ಮ ಆರೋಗ್ಯ ಬಹಳ ಬೇಗ ಹದಗೆಡುತ್ತಿದೆ. ಹಾಗಾಗಿ ಬಹು ಬೇಗ ನಾವು ರೋಗಗಳಿಗೆ ತುತ್ತಾಗುತ್ತಿದ್ದೇವೆ. ಅದೇ ರೀತಿ ಹಿಂದಿನ ಕಾಲದಲ್ಲಿ ವಯಸ್ಸಾದ ನಂತರ ಬರುತ್ತಿದ್ದ ಕೈ ಕಾಲು ನೋವು ಬೆನ್ನು ನೋವು ಇತ್ತೀಚೆಗೆ ಚಿಕ್ಕ ವಯಸ್ಸಿಗೆ ಬರುತ್ತಿದೆ. ಅದರಲ್ಲೂ ಬೆಳಗಿನಿಂದ ಸಂಜೆವರೆಗೂ ಆಫೀಸ್ ನಲ್ಲಿ ಕುಳಿತು ಕಂಪ್ಯೂಟರ್ ಮುಂದೆ ಕೆಲಸ ಮಾಡುವವರಿಗಂತೂ ಬೆನ್ನು ನೋವು ಕಟ್ಟಿಟ್ಟ ಬುತ್ತಿ. ಈ ಬೆನ್ನು ನೋವಿಗೋಸ್ಕರ ತುಂಬಾ ಜನ ಡಾಕ್ಟರ್ ಬಳಿ ಹೋಗಿ ಚಿಕಿತ್ಸೆ ಪಡೆಯುತ್ತಾರೆ. ಬಹಳ ಹಣವನ್ನು ಖರ್ಚು ಮಾಡುತ್ತಾರೆ. ಆದರೆ ನಾವು ಹೇಳುವ ಕೆಲವು ಸುಲಭ ಪರಿಹಾರಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸಿಗುವ ಪದಾರ್ಥ ಗಳಿಂದ ಮನೆಮದ್ದನ್ನು ತಯಾರಿಸಿ ನಿಮ್ಮ ಬೆನ್ನು ನೋವಿಗೆ ಪರಿಹಾರಗಳನ್ನು ಪಡೆಯಬಹುದು. ಹಾಗಾದರೆ ಆ ಮನೆಮದ್ದುಗಳು ಯಾವುವು ಮತ್ತು ಅವುಗಳನ್ನು ತಯಾರಿಸುವುದು ಹೇಗೆ ಎಂದು ತಿಳಿಯೋಣ ಬನ್ನಿ.

ಯಾವುದೇ ರೀತಿಯ ಮನೆಮದ್ದುಗಳನ್ನು ಬಳಸದೆ ಸುಲಭ ರೀತಿಯಲ್ಲಿ ನಿಮಗೆ ಬೆನ್ನು ನೋವು ಬರದಂತೆ ತಡೆಯಬೇಕೆಂದರೆ ಅದಕ್ಕೆ ನೀವು ಈಜಬೇಕು. ಹೌದು ಈಜುವುದರಿಂದ ನಿಮ್ಮ ಬೆನ್ನು ಮೂಳೆಗಳು ಹಾಗೂ ಸ್ನಾಯುಗಳು ಬಲಿಷ್ಠ ಆಗುತ್ತವೆ. ಇದರಿಂದ ನಿಮಗೆ ಬೆನ್ನು ನೋವಿನ ಸಮಸ್ಯೆ ಬರುವುದಿಲ್ಲ. ಕುಳಿತುಕೊಳ್ಳುವಾಗ ನೆಡೆಯುವಾಗ ಮಲಗುವಾಗ ಆದಷ್ಟು ನಿಮ್ಮ ಬೆನ್ನು ನೇರವಾಗಿ ಇರುವಂತೆ ನೋಡಿಕೊಳ್ಳಿ ಇದರಿಂದ ನಿಮಗೆ ಬೆನ್ನು ನೋವಿನ ಸಮಸ್ಯೆ ಬರುವುದಿಲ್ಲ. ಬಸ್ ಕಾರ್ ನಲ್ಲಿ ಹೆಚ್ಚು ಸಮಯ ಪ್ರಯಾಣ ಮಾಡುವ ಸಂದರ್ಭದಲ್ಲಿ ಮಧ್ಯ ಮಧ್ಯ ಸ್ವಲ್ಪ ವಿಶ್ರಾಮ ಕೊಡಿ. ಅಂದರೆ ಸ್ವಲ್ಪ ಹೊತ್ತು ಎದ್ದು ಓಡಾಡಿ ಇದರಿಂದ ನಿಮಗೆ ಹೆಚ್ಚು ಬೆನ್ನು ನೋವು ಬರುವುದಿಲ್ಲ.

ಹೆಚ್ಚು ಮೃದುವಾಗಿರುವ ತಲೆ ದಿಂಬು ಮತ್ತು ಹಾಸಿಗೆಯನ್ನು ಬಳಸ ಬಾರದು. ಇದರಿಂದ ನಿಮ್ಮ ಬೆನ್ನಿನ ಸಮಸ್ಯೆ ಹೆಚ್ಚಾಗುತ್ತದೆ. ಬೆನ್ನು ನೋವಿನ ಸಮಸ್ಯೆ ಇಂದ ಬಳಲುತ್ತಿದ್ದರೆ ಐಸ್ ಪ್ಯಾಕ್ ಅನ್ನು ಬೆನ್ನಿನ ಮೇಲೆ ಇಟ್ಟು ಮಸಾಜ್ ಮಾಡಿರಿ. ಇದರಿಂದ ನಿಮ್ಮ ಬೆನ್ನಿನ ನೋವು ಕಡಿಮೆಯಾಗುತ್ತದೆ. ಪ್ರತಿ ದಿನ ಬೆಳಗ್ಗೆ ವ್ಯಾಯಾಮ ಮಾಡಿರಿ. ಇದರಿಂದ ನಿಮಗೆ ಬೆನ್ನು ನೋವಿನ ಸಮಸ್ಯೆ ಬರುವುದಿಲ್ಲ. ಕ್ಯಾಲ್ಸಿಯಂ ಭರಿತ ಆಹಾರಗಳನ್ನು ಹೆಚ್ಚಾಗಿ ಸೇವಿಸಿರಿ, ಇದರಿಂದ ನಿಮ್ಮ ಮೂಳೆಗಳು ಗಟ್ಟಿ ಆಗುತ್ತವೆ ಮತ್ತು ಬೆನ್ನು ನೋವಿನ ಸಮಸ್ಯೆ ಬರುವುದಿಲ್ಲ. ಬೆನ್ನು ನೋವಿನ ಸಮಸ್ಯೆ ಇದ್ದರೆ ಬಿಸಿ ನೀರಿನ ಸ್ನಾನ ಮಾಡುವ ಮುನ್ನ ಸಾಸಿವೆ ಎಣ್ಣೆಯಿಂದ ನಿಮ್ಮ ಬೆನ್ನನ್ನು ಮಸಾಜ್ ಮಾಡಿರಿ. ನಂತರ ಸ್ನಾನ ಮಾಡಿರಿ. ಇದರಿಂದ ನಿಮ್ಮ ಬೆನ್ನು ನೋವಿನ ಸಮಸ್ಯೆ ಕಡಿಮೆ ಆಗುತ್ತದೆ. ಈ ಉಪಯುಕ್ತ ಲೇಖನ ಮರೆಯದೇ ಶೇರ್ ಮಾಡಿರಿ ಎಲ್ಲ ಸ್ನೇಹಿತರಿಗೂ ಸಹಾಯ ಆಗುತ್ತೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ