ಮನುಷ್ಯನ ದೇಹಕ್ಕೆ ಆದೇಶ ಹಾಗೂ ನಿಯಂತ್ರಣವನ್ನು ನೀಡುವ ಏಕಮಾತ್ರ ಅಂಗವೆಂದರೆ ಮೆದುಳು. ಇದು ಸ್ವಯಂಪ್ರೇರಿತವಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗೂ ದೇಹವನ್ನು ಸಮತೋಲನ ಮಟ್ಟದಲ್ಲಿ ಸಾಗಿಸುತ್ತದೆ. ದೇಹದ ಎಲ್ಲ ಅಂಗಗಳ ಕಾರ್ಯ ಚಟುವಟಿಕೆಗಳನ್ನು ಸರಿಯಾದ ಸಮಯಕ್ಕೆ ತಿಳಿಸುವ ಕೆಲಸವನ್ನು ಮಾಡುತ್ತದೆ. ಆದರೆ ಈ ಮೆದುಳಿಗೆ ಸ್ವಲ್ಪ ಏನಾದರೂ ಸಮಸ್ಯೆ ಆದರೆ ಇಡೀ ದೇಹದ ಕಾರ್ಯ ಚಟುವಟಿಕೆಯೇ ನಿಂತು ಬಿಡುತ್ತದೆ. ಜೊತೆಗೆ ಕೆಲವು ಸಲ ನಮಗೆ ಗೊತ್ತಿಲದ ಹಾಗೆ ನಮ್ಮ ಚಟುವಟಿಕೆ ಉತ್ಸಹ ಕಡಿಮೆ ಆಗುತ್ತದೇ ಇದಕ್ಕೆ ಕಾರಣ ನಮ್ಮ ಮನಸ್ಸಿಗೆ ಆಗಿರುವ ಬೇಜಾರು ಎಂದು ತಿಳಿದುಕೊಳ್ಳುತ್ತೇವೆ ಆದರೆ ಸತ್ಯ ಸಂಗತಿ ಏನೆಂದರೆ ನಮ್ಮ ಮೆದುಳಿಗೆ ಸರಿಯಾದ ಪೌಷ್ಟಿಕ ಆಹಾರ ಸಿಗದೆ ಇರುವುದು

ಹಾಗಾದರೆ ನಮ್ಮ ಮೆದುಳು ಸದಾ ಕಾಲ ಉತ್ತಮ ಕಾರ್ಯ ಚಟುವಟಿಕೆಯನ್ನು ಸಾಗಿಸಬೇಕು ಮತ್ತು ಬುದ್ದಿವಂತರಾಗಿ ಇರ್ಬೇಕು ಎಂದರೆ ಅದಕ್ಕೆ ನಾವು ಸರಿಯಾದ ಪೌಷ್ಟಿಕಾಂಶ ಇರುವ ಆಹಾರವನ್ನು ನೀಡಬೇಕು. ಹಾಗಾದರೆ ಮೆದುಳಿಗೆ ಹೆಚ್ಚು ಶಕ್ತಿ ನೀಡುವ ಯಾವ ಯಾವ ಪೌಷ್ಟಿಕ ಆಹಾರ ನೀಡಬೇಕು ಎಂದು ತಿಳಿಯೋಣ ಬನ್ನಿ. ಒಮೇಗಾ 3 ಇದು ಮೆದುಳಿಗೆ ಬೇಕಾದ ಕೊಬ್ಬಿನಂಶವನ್ನು ನೀಡುತ್ತದೇ ಜೊತೆಗೆ ಮೆದುಳಿಗೆ ಬೇಕಾಗಿರುವ ಶಕ್ತಿ ಇದರಿಂದ ಸಿಗುತ್ತದೆ.ಈ ಒಮೆಗ 3 ಅಂಶವು ಹೆಚ್ಚಾಗಿ ಸಬ್ಜಾ ಬೀಜ ಅಗಸೇ ಬೀಜ ಮೊಟ್ಟೆ ಕಾರ್ಡ್ ಲಿವರ್ ಆಯಿಲ್ ಸಾಲ್ಮನ್ ಸಾರ್ಡೈನ್ಸ್ ಇವುಗಳಿಂದ ಸಿಗುತ್ತದೆ.

ಮೆದುಳಿನಲ್ಲಿ ಆಗುವ ರಾಸಾಯನಿಕ ಕ್ರಿಯೆಗೆ ಮೇಗ್ನೀಶಿಯಂ ತುಂಬಾ ಮುಖ್ಯ ಇದು ಮನುಷ್ಯನ ದೇಹದಲ್ಲಿ ಊತ. ಒತ್ತಡವನ್ನು ಕಡಿಮೆ ಮಾಡುತ್ತದೆ ಇದು ಹೆಚ್ಚಾಗಿ ಬಾದಾಮಿ ಗೋಡಂಬಿ ಬೆಣ್ಣೆ ಹಣ್ಣು ಪಾಲಾಕ್ ಸೊಪ್ಪು ಇವುಗಳಿಂದ ಸಿಗುತ್ತದೆ. ವಿಟಮಿನ್ ಬಿ1 ಇದು ಮೆದುಳಿನಲ್ಲಿ ನಡೆಯುವ ಎಲ್ಲ ರೀತಿಯ ಕ್ರಿಯೆಗಳಿಗೆ ಇದು ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಮನಸ್ಸಿಗೆ ಶಾಂತಿ ಲವಲವಿಕೆಯನ್ನು ಕೊಡುತ್ತದೆ. ಇದು ಹೆಚ್ಚಾಗಿ ಕಡಲೆಕಾಯಿ ಸೂರ್ಯಕಾಂತೀ ಬೀಜ ಮಕಾಡಾಮಿಯಾ ಬೀಜ ಮಸೂರಗಳು ಕಪ್ಪು ಹುರುಳಿಗಳು ಇವುಗಳಲ್ಲಿ ಸಿಗುತ್ತದೆ. ವಿಟಮಿನ್ ಬಿ6 ಇದು ಮನುಷ್ಯನನ್ನು ಸದಾ ಸಂತೋಷದಿಂದ ಇರುವಂತೆ ಮಾಡುತ್ತದೆ ಹಾಗೂ ಮೆದುಳು ತುಂಬಾ ಚುರುಕಾಗಿ ಕೆಲಸ ಮಾಡುವಂತೆ ಮಾಡುತ್ತದೆ ಇದು ಪಿಸ್ತಾ, ಬೆಣ್ಣೆ ಹಣ್ಣು, ಗೋಮಾಂಸ, ಟ್ಯೂನ ಮೀನು ಗಳಿಂದ ಸಿಗುತ್ತದೆ.

ವಿಟಮಿನ್ ಬಿ9 ಇದು ಮೆದುಳಿನ ಸಾಮಾನ್ಯ ಬೆಳವಣಿಗೆಗೆ ಸಹಾಯ ಮಾಡುತ್ತದೆ ಇದಕ್ಕೆ ಪಾಲಾಕ್ ಶತಾವರೀ ಬ್ರೊಕ್ಕೋಲೀ ಗಳನ್ನು ಸೇವಿಸಬೇಕು. ವಿಟಮಿನ್ ಬಿ 12 ಇದು ಸೆರಟೋನಿನ್ ಹಾಗೆ ಡೋಪಮೈನ್ ಉತ್ಪತ್ತಿಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಹಾಗೂ ಮೆದುಳಿನ ಮುಖ್ಯ ಕ್ರಿಯೆಗಳಾದ ಏಕಾಗ್ರತೆ ಹಾಗೆ ನೆನಪಿನ ಶಕ್ತಿ ಯನ್ನು ಹೆಚ್ಚಿಸುತ್ತದೆ ಇದಕ್ಕೆ ಸಾಲ್ಮೊನೆಲ್ ಮೊಟ್ಟೆ ಯೀಸ್ಟ್ ಸಾರ್ಡೈನ್ಸ್ ಗಳನ್ನು ಸೇವಿಸಬೇಕು. ವಿಟಮಿನ್ ಸಿ ಇದು ಮೆದುಳಿಗೆ ಯಾವುದೇ ರೀತಿಯ ಹಾನಿ ಆಗದ ಹಾಗೆ ನೋಡಿಕೊಳ್ಳುತ್ತದೆ ಅದಕ್ಕಾಗಿ ಬ್ರೋಕ್ಕೋಲೀ ನಿಂಬೆಯಂತಹ ಹುಳಿ ಹಣ್ಣುಗಳು ಪಾಲಾಕ್ ಕಲ್ಲಂಗಡಿಯನ್ನು ಸೇವಿಸಬೇಕು.

ವಿಟಮಿನ್ ಡಿ ಇದು ಮೂಳೆಗಳ ಹಾಗು ಹೃದಯದ ಆರೋಗ್ಯಕ್ಕೆ ಮುಖ್ಯವಾಗಿ ಬೇಕು ಇದು ಹೆಚ್ಚಾಗಿ ಸೂರ್ಯನ ಕಿರಣಗಳಿಂದ ಸಿಗುತ್ತದೆ. ವಿಟಮಿನ್ ಈ ಇದು ಮೆದುಳು ಸಾಕಷ್ಟು ವರ್ಷ ಸರಿಯಾಗಿ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಇದಕ್ಕೆ ಬಾದಾಮಿ ಹಸಿರು ತರಕಾರಿ ಮತ್ತು ಸೊಪ್ಪು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಇವುಗಳನ್ನು ಸರಿಯಾಗಿ ತೆಗೆದುಕೊಂಡರೆ ಮೆದುಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಈ ಮಾಹಿತಿ ತಪ್ಪದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ