ಪ್ರತಿಯೊಂದು ಜೀವಿಗೂ ಕೂಡ ನಿದ್ದೆ ಎಂಬುದು ತುಂಬಾ ಮುಖ್ಯ ಅವರ ಅವರ ವಯಸ್ಸಿಗೆ ಅನುಗುಣವಾಗಿ ಎಷ್ಟು ಗಂಟೆಗಳ ನಿದ್ದೆ ಮಾಡಬೇಕೋ ಅಷ್ಟು ಗಂಟೆಗಳ ಕಾಲ ನಿದ್ದೆ ಮಾಡಿದರೆ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ. ನಿದ್ರೆ ಕೆಟ್ಟರೆ ಅನೇಕ ರೀತಿಯ ಸಮಸ್ಯೆಗಳು ಬರುತ್ತದೆ ಎಂಬುದು ಸಾಕಷ್ಟು ಜನಕ್ಕೂ ತಿಳಿದಿದೆ ಆದ್ರೆ ಅದನ್ನ ನಿರ್ಲಕ್ಷ್ಯ ಮಾಡುವ ಜನರೇ ಹೆಚ್ಚಾಗಿದ್ದಾರೆ. ಧೀರ್ಘ ಸಮಯ ನಿದ್ರೆ ಕೆಟ್ಟರೆ ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆ ಹೆಚ್ಚಿದೆ ಜೊತೆಗೆ ಕೆಲವರು ತುಂಬಾ ಸಮಯ ನಿದ್ದೆ ಮಾಡುತ್ತಾರೆ ಇನ್ನು ಕೆಲವರು ಸರಿಯಾಗಿ ನಿದ್ದೆ ಮಾಡುವುದಿಲ್ಲ ಆದರೆ ಸರಿಯಾದ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದೆ ಇದ್ದಾಗ ಆ ಮನುಷ್ಯ ಮನಸಿಕವಾಗಿ ದೈಹಿಕವಾಗಿ ತೊಂದರೆಗಳನ್ನು ಅನುಭವಿಸುತ್ತಾನೆ.

ಸರಿಯಾಗಿ ನಿದ್ದೆ ಆಗಿಲ್ಲ ಎಂದರೆ ಅವರು ಯಾವುದೇ ರೀತಿಯ ಕೆಲಸಗಳನ್ನು ಮಾಡಲು ಆಗುವುದಿಲ್ಲ ಜೊತೆಗೆ ಮನಸ್ಸು ಕೂಡ ಸರಿಯಾಗಿ ಕೆಲಸ ಮಾಡುವುದಿಲ್ಲ ಹಾಗಾಗಿ ಅವರ ವರ್ತನೆಗಳೇ ಬದಲಾಗುತ್ತವೆ. ಹಾಗಾದರೆ ಸರಿಯಾಗಿ ನಿದ್ದೆ ಮಾಡದೆ ಇರುವವರು ಯಾವ ರೀತಿಯಲ್ಲಿ ವರ್ತಿಸುತ್ತಾರೆ ಎಂದು ತಿಳಿಯೋಣ ಬನ್ನಿ. ಸರಿಯಾಗಿ ನಿದ್ದೆ ಮಾಡದೆ ಇರುವ ಕಾರಣ ಇವರು ಚಿಕ್ಕ ಪುಟ್ಟ ವಿಷಯಕ್ಕೂ ಕೋಪ ಮಾಡಿಕೊಳ್ಳುತ್ತಾರೆ ತಾಳ್ಮೆ ಎಂಬುದು ಇರುವುದಿಲ್ಲ. ಸರಿಯಾಗಿ ನಿದ್ದೆ ಮಾಡದೆ ಅವರ ಮೆದುಳು ಹಾಗೂ ಮನಸ್ಸು ಕೆಟ್ಟು ತಮ್ಮ ದೇಹದ ಮೇಲೆ ಮನಸ್ಸಿನ ಮೇಲೆ ಹಿಡಿತವನ್ನ ಕಳೆದುಕೊಳ್ಳುತ್ತಾರೆ.

ನಿದ್ದೆ ಮಾಡದೆ ಇರುವ ಸಮಯದಲ್ಲಿ ಯಾರಾದರು ಬಂದು ಅವರನ್ನು ಸ್ವಲ್ಪ ಕೆಣಕಿದರು ಬೇಗ ಕೋಪ ಮಾಡಿಕೊಳ್ಳುತ್ತಾರೆ. ಸರಿಯಾಗಿ ನಿದ್ದೆ ಆಗಿಲ್ಲ ಎಂದರೆ ದೇಹಕ್ಕೆ ನಿದ್ದೆಯಲ್ಲಿ ಸಿಗಬೇಕಾದ ಶಕ್ತಿಯನ್ನು ಊಟದ ಮೂಲಕ ಪಡೆಯಲು ಹಸಿವಿನ ಹಾರ್ಮೋನನ್ನು ಜಾಸ್ತಿ ರಿಲೀಸ್ ಮಾಡುತ್ತದೆ ಹಾಗಾಗಿ ಹೆಚ್ಚು ಹಸಿವು ಎಂದು ಒದ್ದಾಡುತ್ತಾರೆ. ಸರಿಯಾಗಿ ನಿದ್ದೆ ಮಾಡಿಲ್ಲ ಎಂದರೆ ದೇಹಕ್ಕೆ ರೋಗವನ್ನು ತಡೆಗಟ್ಟುವ ಹಾರ್ಮೋನನ್ನು ದೇಹವು ಉತ್ಪತ್ತಿ ಮಾಡುವುದು ನಿದ್ದೆ ಮಾಡುವಾಗ ಅದು ಸಿಗದೆ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಸರಿಯಾಗಿ ನಿದ್ದೆ ಮಾಡಿಲ್ಲ ಎಂದರೆ ಮುಖದ ಅಂದ ಕೆಡುತ್ತದೆ ಕಣ್ಣುಗಳು ಒಳಗೆ ಹೋಗುತ್ತವೆ ಕಣ್ಣಿನ ಸುತ್ತ ಕಪ್ಪಾಗಿ ಆಗುತ್ತದೆ. ಚರ್ಮವೆಲ್ಲ ಸುಕ್ಕು ಬೀಳುತ್ತದೆ. ಸರಿಯಾಗಿ ನಿದ್ದೆ ಮಾಡಿಲ್ಲ ಎಂದರೆ ಮನುಷ್ಯನಿಗೆ ಮರೆವು ಹೆಚ್ಚುತ್ತದೆ. ಸರಿಯಾಗಿ ನಿದ್ದೆ ಮಾಡಿಲ್ಲ ಎಂದರೆ ಮೈಕೈಯಲ್ಲ ನೋವು ಬರುತ್ತವೆ. ಸರಿಯಾಗಿ ನಿದ್ದೆ ಮಾಡಿಲ್ಲ ಎಂದರೆ ಯೋಚನೆ ಹೆಚ್ಚುತ್ತದೆ ಚಿಕ್ಕ ಪುಟ್ಟ ವಿಷಯಕ್ಕೆಲ್ಲ ಹೆಚ್ಚು ಯೋಚಿಸುತ್ತೇವೆ.

ಹಾಗಾಗಿ ಯಾವುದೇ ಕಾರಣಕ್ಕೂ ಕೂಡ ನಿದ್ದೆಯನ್ನು ಕಡಿಮೆ ಮಾಡಬಾರದು ನಿದ್ದೆ ಇಲ್ಲ ಎಂದರೆ ಆರೋಗ್ಯ ಕೆಡುತ್ತದೆ ಜೊತೆಗೆ ಮನಸ್ಸು ಕೂಡ ಕೆಡುತ್ತದೆ. ಮನುಷ್ಯ ಕನಿಷ್ಠ ಅಂದರೆ ಎಂಟು ತಾಸು ನಿದ್ರೆ ಮಾಡಲೇ ಬೇಕು. ಆದರೆ ರಾತ್ರಿ ಪಾಳಿ ಕೆಲಸ ಮಾಡುವ ಯುವಕ ಯುವತಿಯರು ಮುಂದಿನ ಆರೋಗ್ಯದ ದೃಷ್ಟಿಯಿಂದ ಹಲವು ರೀತಿಯ ಕ್ರಮ ತೆಗೆದುಕೊಳ್ಳುವುದು ಸೂಕ್ತ ಇಲ್ಲವಾದಲ್ಲಿ ಯೌವನದಲ್ಲೇ ಸಾವು ಬರುವುದು ನಿಶ್ಚಿತವಾಗಿದೆ. ತಪ್ಪದೇ ಈ ಲೇಖನ ಶೇರ್ ಮಾಡಿ ನಿಮ್ಮ ಎಲ್ಲ ಸ್ನೇಹಿತರಿಗೂ ಸಹಾಯ ಆಗುತ್ತದೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ