ಎಲ್ಲರಿಗೂ ಗೊತ್ತಿರುವ ಹಾಗೆ ಬಿಡಿ ಸಿಗರೇಟ್ ಸೇದುವುದು ಹಾನಿಕರ. ಇವನ್ನು ಸೇದುವುದರಿಂದ ಅನೇಕ ರೀತಿಯ ಸಮಸ್ಯೆಗಳನ್ನು ನಾವಾಗಿಯೇ ನಮ್ಮ ದೇಹಕ್ಕೆ ತಂದು ಕೊಳ್ಳುತ್ತೇವೆ. ಹೆಚ್ಚಿನ ರೀತಿಯಲ್ಲಿ ಇದು ಶ್ವಾಸಕೋಶಕ್ಕೆ ಸಂಬದ್ಧಪಟ್ಟ ಆರೋಗ್ಯ ಸಮಸ್ಯೆಯನ್ನು ನಮಗೆ ಉಂಟುಮಾಡುತ್ತದೆ. ವೈದ್ಯರು ಮತ್ತು ನಮ್ಮ ಹಿರಿಯರು ನಮಗೆ ಧೂಮಪಾನ ಕೆಟ್ಟ ಚಟ ಬಿಡು ಎಂದು ಎಷ್ಟು ಹೇಳಿದರೂ ಸಹ ನಾವೂ ಇದನ್ನು ಕೇಳುವುದಿಲ್ಲ. ಅದನ್ನ ತಕ್ಷಣ ಬಿಡಲು ಆಗುವುದಿಲ್ಲ. ಏಕೆಂದರೆ ಈ ಚಟ ಹೇಗೆಂದರೆ ಒಮ್ಮೆ ನಾವು ಅದಕ್ಕೆ ಅಂಟಿಕೊಂಡರೆ ಅದನ್ನು ಬಿಡುವುದು ಸಾಕಷ್ಟು ರೀತಿಯಲ್ಲಿ ಕಷ್ಟ ಆಗುತ್ತದೆ. ಅಮೇರಿಕಾದಲ್ಲಿ ಸಂಶೋಧನೆ ಮಾಡುತ್ತಿರುವ ವರ್ಡ್ ಹೆಲ್ತ್ ಆರ್ಗನೈಷೆಶನ್ ವೈದ್ಯರು ಹೇಳುವ ಪ್ರಕಾರ ಒಂದು ವರ್ಷಕ್ಕೆ ಸಿಗೆರಟ್ ಸೇವನೆ ಮಾಡಿ ಪ್ರಪಂಚದಾದಂತ್ಯ ಸಾಯುವವರ ಸಂಖ್ಯೆ ಎಂಟು ಲಕ್ಷಕ್ಕೂ ಅಧಿಕ ಎಂದು ತಿಳಿಸಿದ್ದಾರೆ. ಹಾಗೆಯೇ ಕ್ಯಾನ್ಸರ್ ಸಮಸ್ಯೆಗಳಿಂದ ಬಳಲುತ್ತಾ ಇರುವವರ ಸಂಖ್ಯೆ ಇಪ್ಪತ್ತು ಲಕ್ಷಕ್ಕೂ ಅಧಿಕವಾಗಿದೆ ಅಂತೆ.

ಹೀಗೆ ನಮ್ಮ ಜನರು ಧೂಮಪಾನ ಮಾಡುತ್ತಾ ಸಾಕಷ್ಟು ಸಮಸ್ಯೆಯನ್ನು ಅನುಭವಿಸುತ್ತಿರುತ್ತಾರೆ. ಕೆಲವರು ಕೆಮ್ಮಿದರೆ ಇನ್ನು ಕೆಲವರು ಉಬ್ಬಸದಂತಹ ಸಮಸ್ಯೆಯಿಂದ ಬಳಲುತ್ತಾರೆ. ಕೆಮ್ಮು ಬರುತ್ತಿದ್ದರೂ ಸಹ ಕೆಲವರು ಧೂಮಪಾನವನ್ನು ಮಾಡುತ್ತಿರುತ್ತಾರೆ. ಹೀಗೆ ಅಧಿಕವಾಗಿ ಧೂಮಪಾನ ಮಾಡುವುದರಿಂದ ನಿಮ್ಮ ದೇಹದಲ್ಲಿ ತುಂಬಾ ಬದಲಾವಣೆಯಾಗುತ್ತದೆ ಮತ್ತು ಕ್ಯಾನ್ಸರ್ ನಂತಹ ಅನೇಕ ದೊಡ್ಡ ಖಾಯಿಲೆಗಳು ಬರುತ್ತದೆ. ಧೂಮಪಾನ ಹಾನಿಕರ ಮಾಡುವುದಂತೂ ನಿಜ. ಆದರೂ ಸಹ ನಾವು ನಿಮಗೆ ಒಂದು ರಸದ ಬಗ್ಗೆ ತಿಳಿಸುತ್ತಿದ್ದೇವೆ. ಈ ಮನೆಮದ್ದು ಮಾಡಿಕೊಂಡು ಸೇವನೆ ಮಾಡುವುದರಿಂದ ಧೂಮಪಾನದಿಂದ ಆಗುವ ತೊಂದರೆಯನ್ನು ನೀವು ತಡೆಯಬಹುದು. ಅಂದರೆ ಧೂಮಪಾನದಿಂದ ಬರುವ ಕೆಮ್ಮಿನ ಸಮಸ್ಯೆಯನ್ನು ನೀವು ತಡೆಗಟ್ಟಬಹುದು. ಪ್ರತಿನಿತ್ಯ ನಾವು ಸೇವನೆ ಮಾಡುವ ಈರುಳ್ಳಿಯಿಂದ ಕೆಮ್ಮಿನ ಸಮಸ್ಯೆಯನ್ನು ದೂರ ಮಾಡಬಹುದು. ಅದು ಹೇಗೆಂದರೆ ನಿಮ್ಮ ಮನೆಯಲ್ಲಿರುವ ಬಿಳಿ ಬಣ್ಣದ ಈರುಳ್ಳಿಯನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ಹಾಕಿ ರುಬ್ಬಿ ರಸ ಮಾಡಿಕೊಂಡು ಬೆಳಿಗ್ಗೆ ಮಧ್ಯಾಹ್ನ ರಾತ್ರಿ ಐದು ಎಮ್.ಎಲ್ ನಂತೆ ಸೇವನೆ ಮಾಡಿರಿ. ಹೀಗೆ ಏಳು ದಿನಗಳ ಕಾಲ ಬಿಳಿ ಈರುಳ್ಳಿಯ ರಸವನ್ನು ಸೇವನೆ ಮಾಡಿದರೆ ನಿಮಗೆ ಧೂಮಪಾನದಿಂದ ಬಂದಿರುವ ಕೆಮ್ಮಿನಿಂದ ಪಾರಾಗಬಹುದು.

ಆದರೆ ಸ್ನೇಹಿತರೆ ತಿಳಿಯಿರಿ ಈ ರೀತಿ ಮಾಡಿದರೂ ಸಹ ಕೆಮ್ಮಿನ ಸಮಸ್ಯೆ ಇದ್ದರೆ ವೈದ್ಯರಲ್ಲಿ ಸೂಕ್ತ ನೆರವು ಪಡೆಯುವುದು ಒಳ್ಳೆಯದು. ಹಾಗೆಯೇ ಈರುಳ್ಳಿ ರಸವನ್ನು ಸೇವಿಸುವುದರಿಂದ ನಿಮಗೆ ಧೂಮಪಾನದಿಂದ ಬರುವ ಕೆಮ್ಮು ಅಷ್ಟೇ ಅಲ್ಲದೆ ಬೇರೆ ರೀತಿಯಿಂದ ಬಂದಿರುವ ಕೆಮ್ಮಿನ ಸಮಸ್ಯೆಯು ಸಹ ದೂರವಾಗಲಿದೆ. ನಮ್ಮ ವೆಬ್ಸೈಟ್ ಬರಹಗಳಿಗೆ ವಿಶೇಷ ಕಾಪಿರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡುವುದು ಶಿಕ್ಷಾರ್ಹ ಅಪರಾಧ ಮಾಹಿತಿ ಮರೆಯದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗಲಿ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ