ಒಂದು ಹಣ್ಣು ಹಲವು ಉಪಯೋಗಗಳು

ಸೀತಾಫಲ ಹಣ್ಣಿನಲ್ಲಿ ವಿಟಮಿನ್ ಎ. ಮೆಗ್ನಿಸಿಯಂ. ಪೊಟ್ಯಾಸಿಯಂ. ಫೈಬರ್. ವಿಟಮಿನ್ ಬಿ6. ವಿಟಮಿನ್ ಸಿ. ಕ್ಯಾಲ್ಸಿಯಂ. ಐರನ್. ನಂತಹ ಪೋಷಾಕಾಂಶಗಳಿವೆ, ಇದನ್ನು ನಿತ್ಯ ಆಹಾರದ ಒಂದು ಬಾಗವಾಗಿ ಮಾಡಿಕೊಂಡರೆ ಮನುಷ್ಯನ ಆರೋಗ್ಯ ಅತ್ತ್ಯುತ್ತಮವಾಗಿರುತ್ತದೆ. ಸೀತಾಫಲ ಹಣ್ಣಿನ ಜೊತೆ ಅದರ ಬೀಜ. ಎಲೆ.  ಬೇರು.  ಸಿಪ್ಪೆ ಗಳಿಂದಳು ತುಂಬಾ ಉಪಯೋಗಗಳಿವೆ. ಅವುಗಳನ್ನು ನೋಡೋಣ.

ಸೀತಾಫಲದ ಎಲೆಗಳನ್ನು ಒಣಗಿಸಿ ಅದನ್ನು ಚೆನ್ನಾಗಿ ಹುರಿದು ಹುಣ್ಣು, ಗಾಯಗಳಿಗೆ ಹಚ್ಚಿದರೆ ಗಾಯ ಕಡಿಮೆಯಾಗುತ್ತದೆ.

ಸೀತಾಫಲ ಹಣ್ಣಿನ ರಸಕ್ಕೆ ಸಕ್ಕರೆ ಸೇರಿಸಿ ಕುಡಿದರೆ ಹೊಟ್ಟೆ ಉರಿ ಮತ್ತು ದಾಹ ಕಡಿಮೆಯಾಗುತ್ತದೆ.

ಸೀತಾಫಲ ಗಿಡದ ತೊಗಟೆಯಲ್ಲಿ ಕಷಾಯವನ್ನು ನಿಯಮಿತವಾಗಿ ಸೇವಿಸಿದರೆ ಭೇದಿ. ಆಮಶಂಕೆ ಗುಣವಾಗುತ್ತದೆ.

ಸೀತಾಫಲ ಹಣ್ಣಿನ ಸೇವನೆಯಿಂದ ಹಿಮೋಗ್ಲೋಬಿನ್ ಕಣಗಳು ಹೆಚ್ಚುತ್ತವೆ.

ಸೀತಾಫಲ ಬೀಜದ ಪುಡಿಯನ್ನು ನೀರಿನಲ್ಲಿ ಕಲಸಿ ಕೂದಲಿಗೆ ಹಚ್ಚಿದರೆ ಹೇನು ನಿವಾರಣೆಯಾಗಿ ಕೂದಲು ಮೃದುವಾಗುತ್ತದೆ.

ಮೂತ್ರದ ತೊಂದರೆ ಇರುವವರು ಹಣ್ಣಿನ ಸಿಪ್ಪೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ತೇದು ಕುಡಿದರೆ ಸಮಸ್ಯೆ ದೂರವಾಗುತ್ತದೆ.

ಹೃದಯದ ರಕ್ತ ಸಂಚಲನ ಸರಾಗವಾಗಿ ಇರುತ್ತದೆ.

ಸೀತಾಫಲ ಹಣ್ಣಿನಿಂದ ಕಷಾಯವನ್ನು ಮಾಡಿ ಕುಡಿದರೆ ಹೆಂಗಸರ ಮುಟ್ಟಿನ ಸಮಸ್ಯೆ ದೂರವಾಗುತ್ತದೆ.

ಸೀತಾಫಲ ಹಣ್ಣಿನಲ್ಲಿ ಹೆಚ್ಚು ವಿಟಮಿನ್ ಇರುವುದರಿಂದ ಕಣ್ಣಿಗೆ ತುಂಬಾ ಒಳ್ಳೆಯದು.ಇದು ದೇಹದ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.

ಸೀತಾಫಲ ಹಣ್ಣಿನ ತಿರುಳಿನ ಜೊತೆ ಜೇನುತುಪ್ಪ ಸೇರಿಸಿ ಸೇವಿಸುತ್ತಾ ಬಂದರೆ ಸೋಂಕು ರೋಗಗಳಿಂದ ರಕ್ಷಣೆ ಪಡೆಯಬಹುದು.

ಸೀತಾಫಲ ಹಣ್ಣನ್ನು ಗರ್ಭಿಣಿಯರು ಸೇವಿಸಿದರೆ ಗರ್ಭದಲ್ಲಿರುವ ಮಗುವಿನ ಮೆದುಳು ವಿಕಾಸವಾಗುತ್ತದೆ, ಜೊತೆಗೆ ಹೆರಿಗೆ ನಂತರ ತಾಯಂದಿರು ತೂಕ ಕಡಿಮೆಯಾಗುತ್ತದೆ.

ಈ ಹಣ್ಣಿನಲ್ಲಿ ಕ್ಯಾನ್ಸರ್ ಪ್ರತಿರೋಧಕ ಗುಣವಿದೆ. ಹಾಗೂ ಇದರಲ್ಲಿ ನಿಯಾಸಿಸ್. ಡಯಟೆರಿ. ಫೈಬರ್ ಅಧಿಕ ಪ್ರಮಾಣದಲ್ಲಿ ಇರುವ ಕಾರಣ ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಈ ಹಣ್ಣಿನ ತಿರುಳು ಹಲ್ಲು ಮತ್ತು ದವಡೆ ನೋವಿನ ವಿರುದ್ಧ ಹೋರಾಡುತ್ತದೆ. ಹಾಗೂ ಮೂಳೆ ಗಟ್ಟಿಯಾಗುತ್ತವೆ.

ಸೀತಾಫಲ ಹಣ್ಣು ಶರೀರದ ವ್ಯರ್ಥ ಪದಾರ್ಥಗಳನ್ನು ಹೊರ ಹಾಕಿ ರಕ್ತ ಶುದ್ದಿ ಮಾಡುತ್ತದೆ.

ಸೀತಾಫಲ ಹಣ್ಣಿನಲ್ಲಿ ಎಷ್ಟೆಲ್ಲ ಉಪಯೋಗವಿದೆ ಅಲ್ಲವೇ ಅದರಿಂದ ಈ ಹಣ್ಣು ತಿಂದು ನೀವು ಆರೋಗ್ಯವಾಗಿರಿ

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ