ಹೊಟ್ಟೆಯ ಕೊಬ್ಬನ್ನು ಕರಗಿಸಲು ಮಾತ್ರೆಗಳು ಜಿಮ್ ಜಾಗಿಂಗ್ ಅಂತ ಕಷ್ಟ ಪಡ್ತಾ ಇದ್ದೀರಾ ಹಾಗಾದ್ರೆ ಈ ಮನೆ ಮದ್ದು ಪಾಲಿಸಿ ನೋಡಿ. ಆದರು ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಸುಲಭದ ಮಾತಲ್ಲ . ಅದಕ್ಕೂ ಕೆಲವು ಉಪಯುಕ್ತ ಸಲಹೆಗಳನ್ನು ನಾವು ನೀಡುತ್ತಾ ಇದ್ದೇವೆ ಸರಳ ಮನೆಮದ್ದಿನಿಂದ ಹೊಟ್ಟೆಗೆ ಅನವಶ್ಯಕ ಕೊಬ್ಬನ್ನು ಬೇಗ ಕಡಿಮೆ ಮಾಡಿಕೊಳ್ಳಬಹುದು.

ಗೋಧಿ ಹುಲ್ಲು ಜ್ಯೂಸ್ ನಂತೆ ಕುಡಿಯಬಹುದಾದ ಈ ಗೋಧಿ ಹುಲ್ಲಿನ ರಸದಲ್ಲಿ ಅಧಿಕವಾದ ನಾರಿನಂಶವಿದೆ. ಈ ನಾರಿನಂಶ ದೇಹದಲ್ಲಿ ಬೊಜ್ಜು ಮನೆಮಾಡದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಕಬ್ಬಿಣಾಂಶ ಪ್ರೊಟೀನ್ ಕೂಡ ಇದೆ. ಪಾಲಾಕ್ ಸೊಪ್ಪು ಮತ್ತು ಮೊಳಕೆ ಕಾಳಿಗಿಂತ ಹೆಚ್ಚಿನ ಪ್ರಯೋಜನವನ್ನು ಗೋಧಿ ಹುಲ್ಲಿನಿಂದ ಪಡೆದುಕೊಳ್ಳಬಹುದು.

ಕೆಂಪು ಮೆಣಸಿನಕಾಯಿ ಸೇವನೆಯಿಂದ ಜೀರ್ಣಕ್ರಿಯೆ ಚುರುಕುಗೊಳ್ಳುವುದಲ್ಲದೆ ದೇಹದಲ್ಲಿ ಶಕ್ತಿಯ ಮಟ್ಟವನ್ನೂ ಹೆಚ್ಚಿಸುತ್ತದೆ. ಬೊಜ್ಜು ಕರಗಿಸುವಲ್ಲಿಯೂ ಹೆಚ್ಚು ಶಕ್ತಿಯುತವಾಗಿರುವ ಮೆಣಸಿನಕಾಯಿಯನ್ನು ನಿಯಂತ್ರಿತ ಮಟ್ಟದಲ್ಲಿ ಸೇವಿಸಬೇಕು. ಇಲ್ಲವೆಂದರೆ ಹೊಟ್ಟೆಯಲ್ಲಿ ಉರಿಯೂ ಉಂಟಾಗುತ್ತದೆ.

ಮೊಳಕೆ ಬರಿಸಿದ ಹೆಸರುಕಾಳಿನಲ್ಲಿ ವಿಟಮಿನ್ ಎ ಬಿ ಸಿ ಮತ್ತು ಇ ಹಾಗೂ ಅನೇಕ ಖನಿಜಾಂಶಗಳಿರುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಕಬ್ಬಿಣದಂಶ ಅಧಿಕ ನಾರಿನಂಶ ಕೊಲೆಸ್ಟ್ರಾಲ್ ಪ್ರಮಾಣವನ್ನ ಕಡಿಮೆ ಮಾಡಲು ಸಹಕಾರಿ. ದೇಹದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿಡುವಲ್ಲಿ ಅನುಕೂಲಕರ.

ಎಲೆಕೋಸನ್ನು ಹಸಿಯಾಗಿ ತಿಂದರೆ ತೂಕ ಕಡಿಮೆಯಾಗಲು ತುಂಬಾ ಸಹಕಾರಿ. ಎಲೆಕೋಸಿನಿಂದ ತಯಾರಿಸಿದ ಅಡುಗೆ ಪದಾರ್ಥಗಳ ಸೇವನೆ ಒಳ್ಳೆಯದು.


ಬೆಳಗ್ಗಿನ ಜಾವ ಒಂದು ಚಮಚ ಜೇನನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಕುಡಿದರೆ ದೇಹದ ತೂಕ ಕಡಿಮೆಯಾಗುವುದು. ಇತ್ತೀಚೆಗೆ ಹಲವರು ವಾಟರ್ ಅಥವಾ ಹನಿ ಥೆರಪಿ ಅಂತ ಇದನ್ನು ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ.

ಮಜ್ಜಿಗೆ: ಮಜ್ಜಿಗೆಯಲ್ಲಿ ಅಧಿಕ ಕೊಬ್ಬಿನಂಶವಿರುವುದಿಲ್ಲ. ಇದನ್ನು ಪ್ರತಿನಿತ್ಯ ಊಟವಾದ ನಂತರ ಸೇವಿಸಿದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶದ ಜತೆ ಸಮತೂಕದ ಮೈಕಟ್ಟು ಪಡೆಯಬಹುದು. ಟೀ ಕಾಫಿ ಬದಲಿಗೆ ಮಜ್ಜಿಗೆ ಕುಡಿದರೆ ಇನ್ನೂ ಒಳ್ಳೆಯದು.

 

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ