ಮನುಷ್ಯನ ಮುಖದಲ್ಲಿ ಇರುವ ಒಂದು ಅಂಗ ಮೂಗು ಇದು ಮನುಷ್ಯನಿಗೆ ಗಾಳಿಯನ್ನು ತೆಗೆದುಕೊಳ್ಳಲು ಹಾಗೂ ಗಾಳಿಯನ್ನು ಹೊರಹಾಕಲು ಸಹಾಯ ಮಾಡುವ ಜೊತೆಗೆ ವಾಸನೆಯನ್ನು ಗ್ರಹಿಸಲು ಸಹಾಯ ಮಾಡುತ್ತದೆ. ಇದಕ್ಕೆ ಒಂದು ಸಲ ಸಣ್ಣ ಶೀತ ನೆಗಡಿಯಾಗಿ ಮೂಗು ಕಟ್ಟಿಕೊಂಡರೆ ಯಾವುದೇ ರೀತಿಯ ವಾಸನೆಯನ್ನು ಕಂಡು ಹಿಡಿಯಲು ಆಗುವುದಿಲ್ಲ ಜೊತೆಗೆ ಸರಿಯಾಗಿ ಉಸಿರಾಡಲು ಆಗದೆ ತುಂಬಾ ಒದ್ದಾಡುತ್ತೇವೆ ಅಲ್ಲವೇ. ಇದಕ್ಕಾಗಿ ನಾವು ಹಲವು ರೀತಿಯ ಮಾತ್ರೆಗಳನ್ನು ಸೇವನೆ ಮಾಡುತ್ತೇವೆ ಹೈ ದೋಸೆಜ್ ಇಂಜೆಕ್ಷನ್ ತೆಗೆದುಕೊಳ್ಳುತ್ತೇವೆ ಆದರು ಕೆಲವೊಮ್ಮೆ ನಮ್ಮ ಕೈ ಮೀರಿ ಸಮಸ್ಯೆ ಆಗುತ್ತದೆ.

ಮೂಗಿನಲ್ಲಿ ಒಂದು ಒಂದು ಬಾರಿ ದೇಹದಲ್ಲಿ ಉಂಟಾಗುವ ಬದಲಾವಣೆ ಇಲ್ಲ ಶೀತ ನೆಗಡಿಯಿಂದ ಮೂಗು ಕಟ್ಟಿಕೊಂಡು ಮೂಗಿನ ಒಳಗೆ ಒಣಗಿ ಗಾಯ ಆಗುವ ಸಂಭವ ಕೂಡ ಎದುರಾಗುತ್ತದೆ. ಇದನ್ನು ನಾವು ನಿರ್ಲಕ್ಷ್ಯ ಮಾಡಿದರೆ ಸೈನಸ್ ಅಂತಹ ಸಮಸ್ಯೆಗೆ ಗುರಿ ಆಗುತ್ತೇವೆ ಇದಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋದರೆ ತುಂಬಾ ಹಣ ಖರ್ಚಾಗುತ್ತದೆ. ಅದಕ್ಕಾಗಿ ಇಂತಹ ಸಮಸ್ಯೆಗೆ ಸುಲಭವಾಗಿ ಮನೆಯಲ್ಲೇ ಮದ್ದು ತಯಾರಿಸಿಕೊಂಡು ಗುಣ ಪಡಿಸಿಕೊಳ್ಳಬಹುದು ಅದು ಹೇಗೆಂದರೆ

ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಒಂದು ಎರಡು ಹನಿಯಷ್ಟು ಮೂಗಿಗೆ ಹಾಕಿಕೊಳ್ಳಬೇಕು ಹೀಗೆ ದಿನಕ್ಕೆ 2 ಬಾರಿಯಂತೆ ಒಂದು ವಾರ ಮಾಡಿದರೆ ಒಣಗಿದ ಮೂಗು ಗುಣವಾಗುತ್ತದೆ. ಉಪ್ಪುನೀರಿನ ಸ್ಪ್ರೇ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಶುದ್ಧ ನೀರಿನ ಒಳಗೆ ಹಾಕಿ ಉಪ್ಪು ಪೂರ್ತಿಯಾಗಿ ಕರಾಗುವವರೆಗೆ ಬಿಡಬೇಕು ನಂತರ ಇದನ್ನು ಒಂದು ಸ್ಪ್ರೇ ಬಟಲಿಗೆ ಹಾಕಿಕೊಳ್ಳಬೇಕು ನಂತರ ಮೂಗಿನ ಒಳ್ಳೆಗಳಿಗೆ ಇದನ್ನು ಸ್ಪ್ರೇ ಮಾಡಿಕೊಳ್ಳಬಹುದು ಇಲ್ಲವಾದರೆ ಕೈಯಿಂದ ಮೂಗಿನ ಒಳಗೆ ಹಾಕಬಹುದು ಹೀಗೆ ಮಾಡಿದರೆ ಒಣಗಿದ ಮೂಗು ಮೃದು ಆಗುತ್ತದೆ.

ವಿಟಮಿನ್ ಈ ಎಣ್ಣೆ ಇದನ್ನು ತೆಗೆದುಕೊಂಡು ಒಂದು ಎರಡು ಹನಿಗಳಷ್ಟು ಮೂಗಿನ ಒಳಗೆ ಹಾಕಿಕೊಂಡರೆ ಒಣಗಿದ ಮೂಗು ಮೃದು ಆಗುತ್ತದೆ. ಆಲೀವ್ ಎಣ್ಣೆ ಇದನ್ನು ಕೂಡ ಒಂದು ಎರಡು ಹನಿಗಳಷ್ಟು ಮೂಗಿನ ಒಳಗೆ ಹಾಕಿಕೊಳ್ಳಬೇಕು ಹೀಗೆ ಮಾಡಿದರೆ ಒಣಗಿದ ಮೂಗು ಮೃದು ಆಗುತ್ತದೆ. ಎಳ್ಳೆಣ್ಣೆ ಇದನ್ನು ಮೂಗಿನ ಹೊಳ್ಳೆಗೆ ಒಂದು ಹನಿ ಹಾಕಿಕೊಂಡು ಜೋರಾಗಿ ಉಸಿರು ತೆಗೆದುಕೊಳ್ಳಬೇಕು ಹೀಗೆ ಮಾಡುವುದರಿಂದ ಒಣಗಿದ ಮೂಗು ಮೃದು ಆಗುತ್ತದೆ.

ಹಬೆ ಸುಡುತ್ತಿರುವ ಬಿಸಿನೀರನ್ನೂ ಒಂದು ಪಾತ್ರೆಯ ಒಳಗೆ ಹಾಕಿಕೊಂಡು ಒಂದು ಟವಲ್ ಅಲ್ಲಿ ಮುಖ ಕತ್ತು ಮುಚ್ಚಿಕೊಂಡು ಆ ಬಿಸಿಯ ಹಬೆಯನ್ನು ಒಂದು ಹತ್ತು ನಿಮಿಷ ತೆಗೆದುಕೊಳ್ಳುವುದರಿಂದ ಒಣಗಿದ ಮೂಗು ಮೃದು ಆಗುತ್ತದೆ. ಹೀಗೆ ಮಾಡಿದರೆ ಒಣಗಿದ ಮೂಗು ಮೃದು ಆಗುತ್ತದೆ ಜೊತೆಗೆ ಉಸಿರಾಡಲು ಕೂಡ ತೊಂದರೆ ಆಗುವುದಿಲ್ಲ ಹಾಗಾಗಿ ಈ ಸಮಸ್ಯೆ ಇದ್ದವರು ಹೀಗೆ ಮಾಡಿ ಗುಣಪಡಿಸಿಕೊಳ್ಳಿ. ನಮ್ಮ ವೆಬ್ಸೈಟ್ ಎಲ್ಲ ಲೇಖನ ಮತ್ತು ಚಿತ್ರಗಳಿಗೆ ಕಾಪಿ ರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡುವ ಪ್ರಯತ್ನ ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ