ಹಾವು ಹಚ್ಚಿದಾಗ ಮತ್ತು ಜ್ವರ ಕೆಮ್ಮು ನೆಗಡಿಗೆ ಈ ಬಳ್ಳಿಯೇ ಮನೆ ಮದ್ದು

ಹಿಂದಿನ ಕಾಲದ ಜನರು ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗಳು ಬಂದರೆ ತಮ್ಮ ಸುತ್ತ ಮುತ್ತ ಸಿಗುವ ನಿಸರ್ಗದ ಸೊಪ್ಪು ಬೇರುಗಳನ್ನು ಬಳಸಿಕೊಂಡು ಔಷಧಿ ಮಾಡಿಕೊಂಡು ಗುಣ ಪಡಿಸಿಕೊಳ್ಳುತ್ತಿದ್ದರು ಹಾಗಾಗಿ ಸಾಮಾನ್ಯವಾಗಿ ಹಳ್ಳಿಯಲ್ಲಿ ವಾಸಿಸುವ ಜನರಿಗೆ ಎಲ್ಲ ರೀತಿಯ ಬಳ್ಳಿ. ಬೇರುಗಳ ಬಗ್ಗೆ ಗೊತ್ತಿರುತ್ತದೆ.ಹಾಗೆಯೇ ಹೆಚ್ಚಾಗಿ ಹಳ್ಳಿಯಲ್ಲಿ ಸಿಗುವ ಈಶ್ವರ ಬಳ್ಳಿ ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ ಎಂದು.

ಆಯುರ್ವೇದದ ಔಷಧಿಗಳಲ್ಲಿ ಹೆಚ್ಚಾಗಿ ಬಳಕೆ ಮಾಡುವುದು ಸೊಪ್ಪುಗಳು ಬೇರುಗಳು ಬಳ್ಳಿಗಳು ತೊಗಟೆಗಳು ಏಕೆಂದರೆ ಇವುಗಳಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ ಎಂಬುದು ಆಗುವುದಿಲ್ಲ. ಈಶ್ವರ ಬಳ್ಳಿಯ ಗಿಡವು ಆಯುರ್ವೇದದಲ್ಲಿ ತನ್ನದೇ ಆದ ಹೆಸರನ್ನು ಪಡೆದಿದೆ ಜೊತೆಗೆ ಈ ಗಿಡವು ತನ್ನ ಅಕ್ಕ ಪಕ್ಕದಲ್ಲಿ ಇರುವ ಮರಗಳು ಗೋಡೆಗಳಿಗೆ ಹಬ್ಬಿಕೊಳ್ಳುತ್ತದೆ. ಈ ಬಳ್ಳಿಯು ಕಪ್ಪು ಬಳ್ಳಿ ಎಲೆಗಳು ಉದ್ದವಾಗಿ ತಳದಲ್ಲಿ ಅಗಲವಾಗಿ ತುದಿಯಲ್ಲಿ ಮೊನಚಾಗಿ ಮೃದುವಾಗಿರುತ್ತದೆ. ಇದರ ಬೀಜಗಳು ಚಪ್ಪಟೆಯಾಗಿ ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ. ಇದರ ಬೇರುಗಳಲ್ಲಿ ಸುಗಂಧ ತೈಲವಿರಿತ್ತದೆ.

ಹಾಗಾದರೆ ಈಶ್ವರ ಬಳ್ಳಿಯಿಂದ ಏನೆಲ್ಲ ಉಪಯೋಗ ಆಗುತ್ತದೆ ಎಂದು ತಿಳಿಯೋಣ ಬನ್ನಿ. ಈಶ್ವರ ಬಳ್ಳಿಯ ಬೇರಿನ್ನು ತೆಗೆದುಕೊಂಡು ಅದನ್ನು ಸಣ್ಣದಾಗಿ ಪುಡಿ ಮಾಡಿ ಅದಕ್ಕೆ ಸ್ವಲ್ಪ ಚಂದನ ಸೇರಿಸಿಕೊಂಡು ನಿತ್ಯ ಹಣೆಗೆ ಇಟ್ಟುಕೊಂಡರೆ ದೃಷ್ಟಿ ದೋಷ ಕಣ್ಣಿನ ತೊಂದರೆಗಳು ಹೋಗುತ್ತವೆ. ಈಶ್ವರಬಳ್ಳಿಯ ಬೇರನ್ನು ಪುಡಿ ಮಾಡಿ ಅದರಲ್ಲಿ ಕಷಾಯ ಮಾಡಿಕೊಂಡು ದಿನಕ್ಕೆ 2 ರಿಂದ 3 ಬಾರಿ ಕುಡಿದರೆ ಜ್ವರ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.

ಹಾವು ಕಚ್ಚಿರುವ ಜಾಗಕ್ಕೆ ಈಶ್ವರ ಬಳ್ಳಿಯ ಎಲೆ ಹಾಗೂ ಕಾಳು ಮೆಣಸುನ್ನು ನುಣ್ಣಗೆ ಹರೆದು ಪೇಸ್ಟ್ ಮಾಡಿ ಹಾವು ಕಚ್ಚಿದ ಜಾಗಕ್ಕೆ ಹಚ್ಚಿದರೆ ಗಾಯ ಬೇಗ ಗುಣವಾಗುತ್ತದೆ. ಈಶ್ವರಿ ಬಳ್ಳಿಯ ಬೇರು ದಂತಿ ತಿಗಡೆ ಕೊಮ್ಮೆ ಬೇರು ಅಳಲೆಕಾಯಿ ಸಿಪ್ಪೆ ಹಿಪ್ಪಲಿ ಇವುಗಳೆಲ್ಲವನ್ನು ಪುಡಿ ಮಾಡಿ ಅದನ್ನು ಬಿಸಿನೀರಿಗೆ ಹಾಕಿಕೊಂಡು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆ ಯಾಗುತ್ತದೆ. ಈಶ್ವರಿ ಬಳ್ಳಿಯ ಬೇರನ್ನು ಚೆನ್ನಾಗಿ ಜಜ್ಜಿ ಅದನ್ನು ನೆನೆಸಿಡಬೇಕು ನಂತರ ಅದರಿಂದ ಬಂದ ತಿಳಿಯಾದ ನೀರನ್ನು ಶೋಧಿಸಿ ದಿನಕ್ಕೆ ಒಂದೆರಡು ಚಮಚ ಸೇವಿಸಿದರೆ ವಿಷಮ ಜ್ವರ ಗುಣಮುಖವಾಗುತ್ತದೆ.

ಈಶ್ವರ ಬಳ್ಳಿಯ ಬೇರಿನ್ನು ಪುಡಿಮಾಡಿ ಅದಕ್ಕೆ ಸ್ವಲ್ಪ ಬೆಲ್ಲ ಅಥವಾ ನಿಂಬೆರಸ ಹಾಕಿಕೊಂಡು ಸೇವಿಸಿದರೆ ಮುಟ್ಟಿನ ಸಮಸ್ಯೆ ಗುಣವಾಗುತ್ತದೆ. ಈಶ್ವರ ಬಳ್ಳಿಯ ಸೊಪ್ಪನ್ನು ಹರೆದು ಅದಕ್ಕೆ ಸ್ವಲ್ಪ ಅರಿಶಿನ ಹಾಕಿ ಪೇಸ್ಟ್ ಮಾಡಿಕೊಂಡು ಗಾಯಕ್ಕೆ ಹಚ್ಚಿದರೆ ಗಾಯಗಳು ಗುಣವಾಗುತ್ತದೆ. ನೋಡಿದರಲ್ಲ ಈಶ್ವರ ಬಳ್ಳಿಯಿಂದ ಎಷ್ಟೆಲ್ಲ ಅನಾರೋಗ್ಯಕ್ಕೆ ಔಷಧಿ ಎಂದು ಇದನ್ನು ಉಪಯೋಗ ಪಡಿಸಿಕೊಳ್ಳಿ. ಮಾಹಿತಿ ನಕಲು ಮಾಡದೆ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ.

Check Also

ತೆಂಗಿನ ಹಾಲಿನ ಲಾಭ ಗೊತ್ತಾದ್ರೆ ಇವತ್ತೇ ಉಪಯೋಗ ಮಾಡ್ತೀರ

ತೆಂಗಿನ ಮರ ಎಂದರೆ ಭಾರತೀಯರಿಗೆ ಏನೋ ಒಂದು ರೀತಿಯ ಪೂಜ್ಯ ಭಾವ ಈ ತೆಂಗಿನ ಮರವನ್ನು ಕಲ್ಪವೃಕ್ಷ ಎಂತಲೂ ಕರೆಯುತ್ತಾರೆ. …

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ