ನಮ್ಮ ಹಿರಿಯರು ಹೇಳುವ ಒಂದು ಒಂದು ಮಾತಿನಲ್ಲಿ ಕೂಡ ಹಲವಾರು ರೀತಿಯ ಅರ್ಥ ಪ್ರಯೋಜನ ಇರುತ್ತದೆ. ಅವರ ಪ್ರತಿಯೊಂದು ಹೇಳಿಕೆ ಕೂಡ ತುಂಬಾ ಅರ್ಥ ಗರ್ಭಿತವಾಗಿರುತ್ತದೆ. ಹಿಂದಿನ ಕಾಲದಲ್ಲಿ ಏನಾದರೂ ಸ್ವಲ್ಪ ಆರೋಗ್ಯದ ಸಮಸ್ಯೆಗಳು ಬಂದರೆ ಸಾಕು ಮೊದಲು ನಾವು ಮಾಡುವುದು ಆಸ್ಪತ್ರೆಗೆ ಹೋಗುತ್ತೇವೆ ಇಲ್ಲ ಅಂದರೆ ಮೆಡಿಕಲ್ ಗೆ ಹೋಗಿ ಮಾತ್ರೆ ಟಾನಿಕ್ ತೆಗೆದುಕೊಂಡು ಕುಡಿಯುತ್ತೇವೆ ಅಲ್ಲವೇ ಆದರೆ ಇವು ಅಡ್ಡ ಪರಿಣಾಮವನ್ನು ಬೀರುತ್ತವೆ. ಆದರೆ ಹಿಂದಿನ ಕಾಲದಲ್ಲಿ ಎಂತಹ ಆರೋಗ್ಯದ ಸಮಸ್ಯೆಗಳು ಬಂದರು ಎಲ್ಲದಕ್ಕೂ ಆಯುರ್ವೇದದ ಔಷಧಿಯನ್ನು ಕೊಡುತ್ತಿದ್ದರು ಇವು ಯಾವುದೇ ರೀತಿಯ ಅಡ್ಡ ಪರಿಣಾಮ ಬಿರುತ್ತಿರಲಿಲ್ಲ. ಹಾಗೆಯೇ ಇಂದು ಯಾವುದಾದರೂ ಚಿಕ್ಕ ಮಕ್ಕಳಿಗೆ ಹೊಟ್ಟೆ ನೋವು ಬಂದರೆ ಸಾಕು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಟಾನಿಕ್ ಕುಡಿಸುತ್ತಾರೆ ಆದರೆ ನಮ್ಮ ಅಜ್ಜಿಯರು ಮಾಡುವ ಕೆಲಸ ಎಂದರೆ ಮಕ್ಕಳು ಹೊಟ್ಟೆ ನೋವು ಎಂದು ಅಳುತ್ತಿರುವ ಸಂದರ್ಭದಲ್ಲಿ ಮಕ್ಕಳ ಹೊಟ್ಟೆಗೆ ಎಣ್ಣೆಯಿಂದ ಮಸಾಜ್ ಮಾಡುತ್ತಾರೆ ಅದು ಏಕೆ ಗೊತ್ತೇ.

ಮಗು ಹುಟ್ಟುವ ಮುಂಚೆ ಭ್ರೂಣಾವಸ್ಥೆಯಲ್ಲಿ ತಾಯಿ ಮತ್ತು ಮಗುವಿನ ನಡುವೆ ಸಂಬಂಧ ಕಲ್ಪಿಸುವ ಏಕೈಕ ಕೊಂಡಿ ಎಂದರೆ ಹೊಕ್ಕಳು ಬಳ್ಳಿ. ತಾಯಿಯಿಂದ ಮಗುವಿಗೆ ಬೇಕಾದ ಅಗತ್ಯ ಪೋಷಕಾಂಶಗಳು ಸರಬರಾಜು ನಡೆಯುವುದೇ ಅಲ್ಲಿಂದ ಆದರೆ ಮಗು ಹುಟ್ಟಿದ ನಂತರ ಈ ಹೊಕ್ಕಳು ಬಳ್ಳಿಯನ್ನು ತೆಗೆದು ಹಾಕಲಾಗುತ್ತದೆ ಜೊತೆಗೆ ಹೊಕ್ಕಳಿಗೆ ನೀಡುವ ಅನೇಕ ಚಿಕಿತ್ಸೆಗಳು ಹಲವಾರು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಅಗುತ್ತವೆ ಆದರೆ ಇದಕ್ಕೆಲ್ಲ ಉತ್ತಮ ಮದ್ದು ಅಜ್ಜಿ ಹಾಕುವ ಎಣ್ಣೆಯ ಮಸಾಜ್ ಇದರಿಂದ ಏನೆಲ್ಲ ಪ್ರಯೋಜನ ಗೊತ್ತೇ.

ಒಂದೆರಡು ಹನಿ ಬೇವಿನ ಎಣ್ಣೆ ಮತ್ತು ಹರಳೆಣ್ಣೆಯನ್ನು ಉಗುರು ಬೆಚ್ಚಗೆ ಮಾಡಿ ಹೊಕ್ಕಳಿಗೆ ಹಾಕಿ ತಿಕ್ಕುವುದರಿಂದ ಮುಖದಲ್ಲಿನ ಮೊಡವೆಗಳು ದೂರವಾಗುತ್ತವೆ. ಒಂದೆರಡು ಹನಿಯ ಬಾದಾಮಿ ಎಣ್ಣೆಯನ್ನು ಹೊಕ್ಕಳಿಗೆ ಹಾಕಿ ಮೃದುವಾಗಿ ತಿಕ್ಕುವುದರಿಂದ ಮುಖದ ಹಾಗೂ ಚರ್ಮದ ಕಾಂತಿ ಹೆಚ್ಚಾಗುತ್ತದೆ. ರಾತ್ರಿ ಮಲಗುವಾಗ ಒಂದೆರಡು ಹನಿ ಹರಳೆಣ್ಣೆಯನ್ನು ಹೊಕ್ಕಳಿಗೆ ಹಾಕಿ ಮಲಗಿಕೊಂಡರೆ ಮೊಣಕಾಲಿನ ನೋವು ಅಥವಾ ಬೆನ್ನು ನೋವಿನ ಸಮಸ್ಯೆಗಳು ದೂರ ಅಗುತ್ತವೆ. ಮೂತ್ರ ಕಟ್ಟಿದೆ ಅಥವಾ ಮೂತ್ರ ಹೋಗುವ ಜಾಗದಲ್ಲಿ ಉಷ್ಣದಿಂದ ನೋವು ಕಂಡು ಬಂದರೆ ಹೊಕ್ಕಳು ಮತ್ತು ಕಿಬ್ಬೊಟ್ಟೆ ಜಾಗಕ್ಕೆ ಹರಳೆಣ್ಣೆ ಹಚ್ಚಿ ಮಸಾಜ್ ಮಾಡಬೇಕು. ಹೊಕ್ಕಳಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಇಷ್ಟೆಲ್ಲ ರೀತಿಯ ಪ್ರಯೋಜನ ನಮಗೆ ಸಿಗುತ್ತದೆ. ಹಾಗಾಗಿ ನಿತ್ಯ ಹೊಕ್ಕಳಿಗೆ ಎಣ್ಣೆಯನ್ನು ಹಚ್ಚಿಕೊಂಡು ಮಲಗಿ ಒಳ್ಳೆಯದಾಗುತ್ತದೆ. ಅಥವ ಪ್ರತಿ ನಿತ್ಯ ಸಾಧ್ಯ ಆಗದೆ ಇದ್ದರು ಸಹ ವಾರಕ್ಕೆ ಒಮ್ಮೆ ಈ ಅಭ್ಯಾಸ ಮಾಡಿಕೊಳ್ಳಿರಿ ಖಂಡಿತ ನಿಮ್ಮ ಆರೋಗ್ಯದಲ್ಲಿ ಅಭಿವೃದ್ದಿ ಕಾಣಲಿದೆ. ಈ ಲೇಖನ ಮರೆಯದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ