ನೆಗಡಿ ಮತ್ತು ಕೆಮ್ಮು ನಿವಾರಣೆಗೆ ಚಿಕಿತ್ಸೆಗಳು
ಪ್ರತಿ ನಿತ್ಯದ ಜೀವನದಲ್ಲಿ ನೆಗಡಿ ಕೆಮ್ಮು ಸರ್ವೇ ಸಾಮಾನ್ಯ ಆಗಿದೆ, ನೆಗಡಿ ಬಂತು ಎಂದು ಯಾವಾಗಲು ಮಾತ್ರೆ ತಗೊಂಡ್ರೆ ಖಂಡಿತವಾಗಿಯೂ ನಿಮ್ಮ ಕಿಡ್ನಿ ಫೇಲ್ ಆಗೋದು ಖಚಿತ ನಾವು ಕೊಟ್ಟಿರುವ ಉಪಯುಕ್ತ ಮನೆಮದ್ದು ಬಳಸಿಕೊಂಡು ನೆಗಡಿ ಮತ್ತು ಕೆಮ್ಮಿನಿಂದ ದೂರ ಇರಿ.

  • ಕೆಮ್ಮು ಕಾಣಿಸಿಕೊಂಡಾಗ 10 ಕರಿಮೆಣಸಿನಕಾಳು, 5 ಲವಂಗ ಮತ್ತು ಒಂದು ಚಿಟಿಕೆ ಉಪ್ಪು ಇವುಗಳನ್ನು ಅಗಿದು ರಸವನ್ನು ಕುಡಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.
  • ಮೊಸರಿನ ಜೊತೆಗೆ ಬೆಲ್ಲವನ್ನು ಬೆರಸಿ ಮತ್ತು ಕರಿಮೆಣಸಿನ ಪುಡಿ ಸ್ವಲ್ಪ ಬೆರಸಿ ಕುಡಿದರೆ ನೆಗಡಿ ಮತ್ತು ಕೆಮ್ಮು ಎರಡು ಒಂದೇ ಸಲ ಕಡಿಮೆಯಾಗುತ್ತದೆ.

  • ಅನಾನಸ್ ಹಣ್ಣಿನ ರಸಕ್ಕೆ ಸ್ವಲ್ಪ ಕರಿಮೆಣಸಿನ ಪುಡಿ ಬೆರಸಿ ಕುಡಿಯುವುದರಿಂದ ನೆಗಡಿ ಕಡಿಮೆಯಾಗುತ್ತದೆ.
    ತಾಜಾ ಪುದಿನ ಸೊಪ್ಪಿನ ಚಹ ತಯಾರಿಸಿ ಒಂದೆರಡು ಬಾರಿ ಕುಡಿದರೆ ನೆಗಡಿ ನಿಲ್ಲುವುದು.
  • ಒಂದು ಲೋಟ ಹಾಲಿಗೆ ಅರ್ಧ ಚಮಚ ಶುದ್ದವಾದ ಅರಿಶಿನ ಪುಡಿ ಮತ್ತು 20-30 ಕಾಳುಮೆಣಸಿನ ಪುಡಿ ಬೆರಸಿದ ಹಾಲನ್ನು ಕಾಯಿಸಿ ಬಿಸಿ ಇರುವಾಗಲೆ ಹಾಲನ್ನು ಒಂದೆರಡು ದಿನದವರೆಗೆ ಸೇವಿಸುವುದರಿಂದ ನೆಗಡಿ ಮತ್ತು ಕೆಮ್ಮು ಕಡಿಮೆಯಾಗುತ್ತದೆ.

  • ಶುಂಠಿಯ ಕಷಾಯಕ್ಕೆ ಸ್ವಲ್ಪ ಸಕ್ಕರೆ ಬೆರಸಿ ದಿನಕ್ಕೆರಡು ಬಾರಿ ಸೇವಿಸಿದರೆ ನೆಗಡಿ ಕಡಿಮೆಯಾಗುತ್ತದೆ.
  • ಚೂರು ಒಣಶುಂಠಿಗೆ ಅಷ್ಷೇ ಗಾತ್ರದ ಕಲ್ಲು ಸಕ್ಕರೆ ಸೇರಿಸಿ ದಿನಕ್ಕೆ 3-4 ಬಾರಿಯಂತೆ 2-3 ದಿನ ಸೇವಿಸುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

  • ನೆಗಡಿಯಾಗಿ ಗಂಟಲು ಕಟ್ಟಿದಾಗ 2 ಬೆಳ್ಳುಳ್ಳಿ ಎಳಸಿನೊಡನೆ ಸ್ವಲ್ಪ ಬೆಲ್ಲ ಸೇರಿಸಿ ಅಗಿದು ಸ್ವಲ್ಪ ಸ್ವಲ್ಪ ರಸ ಕುಡಿಯುವುದರಿಂದ ಉತ್ತಮ ಫಲಿತಾಂಶ ಕಂಡುಬರುತ್ತದೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ