ಸ್ನೇಹಿತರು ಇವರು ಒಂದು ರೀತಿಯ ಮನೆಯ ಸಂಬಂಧಿಕರು ನಮಗೆ ಎಲ್ಲೆಲ್ಲಿ ಯಾವ ಯಾವ ಸಂದರ್ಭದಲ್ಲಿ ಯಾರು ಸ್ನೇಹಿತರು ಆಗುತ್ತಾರೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಅಲ್ಲವೇ ಹಾಗೆಯೇ ಯಾರಿಗೆ ಸ್ನೇಹಿತರು ಇಲ್ಲ ಹೇಳಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಕೂಡ ಸ್ನೇಹಿತರು ಇದ್ದರೆ ಆದರೆ ಎಲ್ಲ ಸ್ನೇಹಿತರು ಕೂಡ ನಿಜವಾದ ಸ್ನೇಹಿತರಲ್ಲ ಇತ್ತೀಚೆಗಂತೂ ಹೆಚ್ಚಾಗಿ ವಾಟ್ಸಾಪ್ ಫೇಸ್ಬುಕ್ ಅಲ್ಲೇ ಹೆಚ್ಚಾಗಿ ಸ್ನೇಹಿತರು ಇರುವುದು. ಈ ಸ್ನೇಹಿತರೆಲ್ಲ ನಿಜವಾದ ಸ್ನೇಹಿತರು ಅಲ್ಲ ಕೆಲವೊಮ್ಮೆ ಈ ಸ್ನೇಹಿತರಿಂದಲೇ ಎಷ್ಟೆಲ್ಲ ನೋವನ್ನು ಅನುಭವಿಸುವ ಸಂದರ್ಭ ಕೂಡ ಬಂದಿರುವದನ್ನು ನಾವು ನೋಡಿದ್ದೇವೆ ಅಲ್ಲವೇ ಹಾಗೆಯೇ ನಾವು ನಂಬಿರುವ ಸ್ನೇಹಿತರಿಂದಲೇ ನೋವು ಕಷ್ಟ ಅನುಭವಿಸುತ್ತೇವೆ ಹಾಗಾಗಿಯೇ ಹೆಚ್ಚಾಗಿ ಯಾರನ್ನು ಕೂಡ ನಂಬಬಾರದು ಎಂಬುದು ಕೆಲವು ಸಂಧರ್ಬದಲ್ಲಿ ಕಲಿತ ಪಾಠ ಆದರೆ ಕೆಲವು ಸ್ನೇಹಿತರು ಹೇಗಪ್ಪ ಅಂದ್ರೆ ಕಷ್ಟ ಅಂದ್ರೆ ಸ್ನೇಹಕ್ಕೆ ಪ್ರಾಣ ಕೊಡೊ ಅಷ್ಟು ಹತ್ತಿರ ಸಹ ಇರುತ್ತಾರೆ.

ಹಾಗಾದರೆ ನಿಜವಾದ ಸ್ನೇಹಿತರು ಯಾರು ಗೊತ್ತೇ. ಮನೆಯಲ್ಲಿ ಯಾರಿಗಾದರೂ ಹುಷಾರ್ ಇಲ್ಲದೆ ಇರುವಾಗ ತುಂಬಾ ದುಃಖದಲ್ಲಿ ಇರುವಾಗ ಬಂದು ವಿಚಾರಿಸಿ ಹೋಗುವವರೆ ನಿಜವಾದ ಸ್ನೇಹಿತರು ತುಂಬಾ ಆರ್ಥಿಕ ಸಮಸ್ಯೆಯಲ್ಲಿ ಇದ್ದಾಗ ಅದನ್ನು ತಿಳಿದುಕೊಂಡು ತನ್ನ ಕೈಯಲ್ಲಿ ಆದಷ್ಟು ಸಹಾಯ ಮಾಡುವವರು ನಿಜವಾದ ಸ್ನೇಹಿತರು. ಮನೆಯಲ್ಲಿ ಯಾರಾದರೂ ಮರಣ ಹೊಂದಿದಾಗ ನಮ್ಮ ಜೊತೆಯಲ್ಲಿ ಇದ್ದು ನಮ್ಮ ದುಃಖದಲ್ಲಿ ಭಾಗಿಯಾಗುವವವರು ನಿಜವಾದ ಮಿತ್ರರು. ನಮಗೆ ಯವುದೇ ರೀತಿಯ ಸಮಸ್ಯೆ ಆದರೂ ಕೂಡ ಅ ಸಮಸ್ಯೆ ಬಗ್ಗೆ ತಿಳಿದುಕೊಂಡು ಅದಕ್ಕೆ ಪರಿಹಾರ ಕಂಡು ಕೊಡುವವರು. ಕೇವಲ ಸಂತೋಷಕ್ಕೆ ಮಾತ್ರ ಬಾಗಿಯಗದೆ ದುಃಖದಲ್ಲೂ ಕೂಡ ಬಾಗಿಯಾಗುವವರು ನಿಜವಾದ ಸ್ನೇಹಿತರು. ಯಾವುದೇ ಸಂದರ್ಭದಲ್ಲಿ ಆದರೂ ಕೂಡ ಸ್ನೇಹಿತರ ಪರವಗೆ ಇರುವವರು ನಿಜವಾದ ಸ್ನೇಹಿತರು.

ಇಂತಹ ಸ್ನೇಹಿತರು ನಿಮಗೂ ಇದ್ದರೆ ಯಾವುದೇ ಕಾರಣಕ್ಕೂ ಆವರನ್ನು ದೂರ ಮಾಡಿಕೊಳ್ಳಬಾರದು ನಮಗೆ ಎಷ್ಟೋ ಮಂದಿ ಸ್ನೇಹಿತರು ಇರುತ್ತಾರೆ ಆದರೆ ಅವರಲ್ಲಿ ಇಂತಹವರು ಸಿಗುವುದು ತುಂಬಾ ಕಷ್ಟ ಜೊತೆಗೆ ನೀವು ಕೂಡ ಬೇರೆಯವರ ಜೊತೆ ಒಳ್ಳೆಯ ಬಾವನೆಯಿಂದ ನಡೆದುಕೊಳ್ಳಿ ನಾವೇ ಸ್ವಾರ್ಥಿಗಳು ಆಗಿದ್ದಾಗ ನಮಗೆ ಒಳ್ಳೆಯ ಸ್ನೇಹಿತರು ಸಿಗುವುದು ಕಷ್ಟ ಹಾಗಾಗಿ ಮೊದಲು ನಾವು ಒಳ್ಳೆಯವರಗಿರಬೇಕು. ಈಗಂತೂ ಸ್ನೇಹಿತರು ಸಣ್ಣ ಸಣ್ಣ ವಿಷಯಗಳಿಗೆ ಹೊಡೆದಾಡಿಕೊಂಡು ಸಾಯುತ್ತಾ ಇದ್ದಾರೆ. ಆದ್ರೆ ಸ್ವಚವಾದ ಸ್ನೇಹ ಇರೋ ಕಡೆ ಎಲ್ಲವು ಒಳ್ಳೆಯದೇ ಆಗುತ್ತದೆ. ನೀವು ಅಷ್ಟೇ ಒಳ್ಳೆಯ ಸ್ನೇಹಿತರನ್ನು ಮಾಡಿಕೊಳ್ಳಿ ಆದರೆ ನಿಮ್ಮ ನಿಜವಾದ ಸ್ನೇಹಿತರು ಯಾರು ಎಂಬುದನ್ನು ಕಂಡುಕೊಳ್ಳುವುದು ತುಂಬಾ ಮುಖ್ಯ. ಕೆಟ್ಟ ಸ್ನೇಹಿತರು ಯಾವಾಗಲು ನಮ್ಮ ಜೊತೆಗೆ ಇದ್ದು ನಮ್ಮ ಜೀವನ ಹಾಳು ಮಾಡಲು ಬಯಸುತ್ತಾ ಇರುತ್ತಾರೆ. ನಮಗೆ ಕಷ್ಟ ಬಂದರು ಕಿಂಚಿತ್ತು ಸಹ ಸಹಾಯ ಮಾಡೋದಿಲ್ಲ. ನಮಗೆ ಕಷ್ಟ ಇದ್ದಾಗ ಫೋನ್ ಕರೆ ಮಾಡಿದ್ರೆ ಯಾವುದೊ ಎಂದೋ ನೆಪ ಹೇಳಿಕೊಂಡು ಜಾರುತ್ತಾರೆ. ನಮ್ಮ ಗುಪ್ತ ವಿಷಯಗಳು ತಿಳಿದುಕೊಂಡು ನಮ್ಮ ಶತ್ರುಗಳ ಬಳಿ ಹೇಳುತ್ತಾರೆ ಅದಕ್ಕಾಗಿ ಈ ರೀತಿಯ ಸ್ನೇಹಿತರನ್ನು ನಿಮ್ಮ ಹತ್ತಿರವೂ ಸಹ ಸೇರಿಸಿಕೊಳ್ಳಬೇಡಿ ಅವರನ್ನು ದೂರ ಇಟ್ಟುಕೊಳ್ಳುವುದೇ ಸೂಕ್ತ. ಈ ಲೇಖನ ತಪ್ಪದೇ ಶೇರ್ ಮಾಡಿರಿ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ
%d bloggers like this: