ಪ್ರತಿಯೊಬ್ಬರ ಜೀವನದಲ್ಲೂ ತಮ್ಮದೇ ಆದ ನಿರ್ದಿಷ್ಟ ವಯಸ್ಸಿನಲ್ಲಿ ಕಂಕಣ ಭಾಗ್ಯ ಎಂಬುದು ಕೂಡಿ ಬರುತ್ತದೆ. ನಮ್ಮ ಬಾಲ್ಯದ ಜೀವನದಿಂದ ಸಾಂಸಾರಿಕ ಜೀವನಕ್ಕೆ ಕಾಲು ಇಡುವುದು ಒಂದು ಅಮೂಲ್ಯವಾದ ಬಂಧನ ಈ ಮದುವೆ ಸಮಯ ದಿನ ಹತ್ತಿರ ಬರುತ್ತಿದೆ ಎಂದ ತಕ್ಷಣ ಎಲ್ಲ ಮದು ಮಕ್ಕಳು ಅಂದವಾಗಿ ಕಾಣಬೇಕು ಆರೋಗ್ಯವಾಗಿ ಇರಬೇಕು ಎಂದು ಬಯಸುತ್ತಾರೆ ಆದರೆ ಆರೋಗ್ಯವಾಗಿ ಇದ್ದು ಅಂದವಾಗಿ ಕಾಣಲು ಏನು ಮಾಡಬೇಕು ಎಂದು ಗೊತ್ತಾಗದೆ ಒದ್ದಾಡುತ್ತಾರೆ ಅದಕ್ಕಾಗಿ ಮದುವೆ ಸಮಯ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ತಪ್ಪದೆ ಪಾಲಿಸಬೇಕಾದ ಕ್ರಮಗಳು ಏನು ಎಂದು ತಿಳಿಯೋಣ ಬನ್ನಿ.

ಮೊದಲು ಅತಿಯಾದ ತೂಕವನ್ನು ಹೊಂದಿದ್ದಾರೆ ಅದನ್ನು ಕಡಿಮೆ ಮಾಡಿಕೊಳ್ಳಬೇಕು ಹಾಗೂ ತುಂಬ ತೆಳ್ಳಗೆ ಇದ್ದರೆ ಸ್ವಲ್ಪ ತೂಕ ಹೆಚ್ಚಿಸಿಕೊಳ್ಳಬೇಕು ಎಂದರೆ ಅತಿಯಾಗಿ ದಪ್ಪ ಕೂಡ ಇರದೇ ಅತಿಯಾದ ಸಣ್ಣ ಕೂಡ ಇರದೇ ಅಂದವಾದ ಮೈಕಟ್ಟನ್ನು ಹೊಂದಿರಬೇಕು. ಇಲ್ಲವಾದರೆ ಅಂದವಾಗಿ ಕಾಣುವುದಿಲ್ಲ. ಮದುವೆ ಹತ್ತಿರ ಬರುತ್ತಿರುವ ಸಮಯದಲ್ಲಿ ಒಂದು ತಿಂಗಳು ಮುಂಚೆ ಆದಷ್ಟು ಜಂಕ್ ಫುಡ್ ಎಣ್ಣೆಗೆ ಕರಿದ ಆಹಾರಗಳನ್ನು ಹೆಚ್ಚು ಸೇವಿಸಬಾರದು. ತೀರ ಅವಶ್ಯ ಇದ್ದರೆ ಮಾತ್ರ ಸೇವನೆ ಮಾಡಿರಿ. ನೀವು ನೀರು ಸೇವನೆ ಕಡಿಮೆ ಮಾಡುತ್ತಾ ಇದ್ದರೆ ಖಂಡಿತ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತದೆ. ಮದುವೆ ಹತ್ತಿರ ಬರುತ್ತಿರುವ ಸಮಯದಲ್ಲಿ ಸಾಕಷ್ಟು ನೀರು ಕುಡಿಯಬೇಕು ಇದರಿಂದ ಚರ್ಮ ಕಾಂತಿಯುಕ್ತ ನಿಮ್ಮ ಸ್ಕಿನ್ ಗ್ಲೌನೆಸ್ಸ್ ಆಗುತ್ತದೆ ಜೊತೆಗೆ ಆರೋಗ್ಯವು ಉತ್ತಮವಾಗಿ ಇರುತ್ತದೆ. ನೀರಿನ ಜೊತೆಗೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಕುಡಿಯುವುದರಿಂದ ಬೊಜ್ಜು ಕಡಿಮೆ ಆಗುತ್ತದೆ.

ಮದುವೆ ಸಮಯದಲ್ಲಿ ಉದ್ವಿಗ್ನತೆ ಮತ್ತು ಆತಂಕವನ್ನು ಆದಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಮದುವೆ ಹತ್ತಿರ ಬರುತ್ತಿದ್ದಂತೆ ಹುಡುಗಿಯರು ಹೆಚ್ಚು ಭಯ ಪಡುತ್ತಾರೆ ಆದರೆ ಭಯ ಪಡದೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಮದುವೆ ಹತ್ತಿರ ಬರುತ್ತಿದ್ದನಂತೆ ನಿದ್ದೆ ಬರದೆ ಯೋಚನೆಯಲ್ಲಿ ಮುಳುಗುವುದು ಹೆಚ್ಚು ಆದರೆ ಯಾವುದೇ ಕಾರಣಕ್ಕೂ ಹಾಗೆ ಮಾಡದೆ ಹೆಚ್ಚು ನಿದ್ದೆ ಮಾಡಬೇಕು. ಪ್ರತಿ ನಿತ್ಯ ಹೆಚ್ಚಿನ ರೀತಿಯಲ್ಲಿ ದ್ರಾಕ್ಷಿ ಗೋಡಂಬಿ ಪಿಸ್ತಾ ಬಾದಾಮಿಗಳನ್ನ ಹೆಚ್ಚಾಗಿ ಉಪಯೋಗಿಸಬೇಕು ಇದರಿಂದ ದೇಹಕ್ಕೆ ಮತ್ತು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗು ನಿಮಗೆ ಹೆಚ್ಚಿನ ಎನರ್ಜಿ ನೈಸರ್ಗಿಕವಾಗಿ ದೊರೆಯುತ್ತದೆ.

ಮದುವೆ ಹತ್ತಿರ ಬರುತ್ತಿದ್ದಂತೆ ಹೆಚ್ಚು ಟೆನ್ಸನ್ ಮಾಡಿಕೊಳ್ಳುತ್ತಾರೆ ಇದರಿಂದ ಆರೋಗ್ಯವು ಕೆಡುತ್ತದೆ ಸಂತೋಷ ಕೂಡ ಇರುವುದಿಲ್ಲ ಹಾಗಾಗಿ ಟೆನ್ಸನ್ ಮಾಡಿಕೊಳ್ಳದೆ ಆರಾಮವಾಗಿ ಇರಬೇಕು. ಹಾಗಾಗಿ ಮದುವೆ ಹತ್ತಿರ ಬರುತ್ತಿರುವ ಸಮಯದಲ್ಲಿ ಹೆಚ್ಚು ಖುಷಿ ಖುಷಿಯಾಗಿ ಇದ್ದಷ್ಟು ಆರೋಗ್ಯಾವು ಚೆನ್ನಾಗಿರುತ್ತದೆ ಜೊತೆಗೆ ಮುಖದ ಕಾಂತಿ ಕೂಡ ಹೆಚ್ಚಿ ಅಂದವಾಗಿ ಕಾಣುತ್ತಿರ ಹಾಗಾಗಿ ಇದನ್ನು ಪಾಲಿಸಿ. ಈ ಒಂದು ಲೇಖನ ಮರೆಯದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗಲಿ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ