ಅಸ್ತಮಾ ಕಾಯಿಲೆ ಇರುವವರು ತಣ್ಣನೆಯ ಹವಾಮಾನ ಇರುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಥಂಡಿಯಲ್ಲಿ ಹೋಡಾಡುತ್ತಿದ್ದರೆ ಕಾಯಿಲೆ ಹೆಚ್ಚಿ ಉಸಿರಾಟದ ತೊಂದರೆ ಉಂಟಾಗುವುದು. ಆದ್ದರಿಂದ ಅಸ್ತಮಾ ಕಾಯಿಲೆ ಇರುವವರು ಈ ಕೆಳಗಿನ

ಸಲಹೆಗಳನ್ನು ಪಾಲಿಸುವುದು ಒಳ್ಳೆಯದು: 1. ಬಿಸಿಲಿನಲ್ಲಿ ನಿಲ್ಲುವುದು: ವಿಟಮಿನ್ ಡಿ ಅಸ್ತಮಾ ಕಾಯಿಲೆಯನ್ನು ಗುಣ ಪಡಿಸಲು ಸಹಕಾರಿಯಾಗಿದೆ. ಆದ್ದರಿಂದ ಬಿಸಿಲು ಬಂದಾಗ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಹೋಗಿ ನಿಲ್ಲಬೇಕು. ತಣ್ಣನೆ ಹವಾಮಾನ ಇರುವಾಗ ಸ್ವೆಟರ್ ಅಥವಾ ಬೆಚ್ಚಗಿನ ಉಡುಪು ಧರಿಸಿ ಮೈಯನ್ನು ಬೆಚ್ಚಗೆ ಇಟ್ಟುಕೊಳ್ಳಬೇಕು.

2. ವಿಟಮಿನ್ ಡಿ ಇರುವ ಆಹಾರ ಸೇವನೆ: ವಿಟಮಿನ್ ಡಿ ಕೊರತೆಯಿದ್ದರೆ ಅಸ್ತಮಾ ಕಾಯಿಲೆ ಹೆಚ್ಚಾಗುವುದು. ಆದ್ದರಿಂದ ವಿಟಮಿನ್ ಡಿ ಇರುವ ಆಹಾರ ಪದಾರ್ಥಗಳನ್ನು ತಿನ್ನುವುದು ಒಳ್ಳೆಯದು. ಮೀನು, ಅಣಬೆ, ಮೊಟ್ಟೆ, ತುನಾ ಫಿಶ್ ನಲ್ಲಿ ವಿಟಮಿನ್ ಡಿ ಅಧಿಕವಾಗಿ ಇರುತ್ತದೆ.

3. ಒಮೆಗಾ 3 ಇರುವ ಆಹಾರ ಸೇವನೆ: ಒಮೆಗಾ 3 ಮೀನಿನಲ್ಲಿ ಅಧಿಕವಿರುವುದರಿಂದ ಈ ಆಹಾರ ಸೇವನೆ ಒಳ್ಳೆಯದು. ಆದರೆ ಮಳೆಗಾಲದಲ್ಲಿ ಮೀನು ಕೊಳ್ಳುವಾಗ ತಾಜಾ ಮೀನನ್ನು ನೋಡಿ ಕೊಳ್ಳಬೇಕು. ಇದಲ್ಲದೆ ನಾಟಿ ಕೋಳಿ, ಮೊಟ್ಟೆ ಇವುಗಳನ್ನು ತಿನ್ನುವುದು ಒಳ್ಳೆಯದು.

4. ವನಸ್ಪತಿ ಎಣ್ಣೆ ಬಳಸಬಾರದು: ಅಸ್ತಮಾ ಕಾಯಿಲೆ ಇರುವವರಿಗೆ ಕೊಡುವ ಆಹಾರದಲ್ಲಿ ವನಸ್ಪತಿ ಎಣ್ಣೆ ಬಳಸಬಾರದು.

5. ವ್ಯಾಯಾಮ: ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಜಾಸ್ತಿಯಾಗುತ್ತದೆ. ಉತ್ತಮ ಗಾಳಿ ಸೇವನೆ ಮಾಡಿದರೆ ಅಸ್ತಮಾ ರೋಗ ಹೆಚ್ಚಾಗುವುದನ್ನು ತಡೆಯಬಹುದು. ತುಂಬಾ ತಂಪಾದ ವಾತಾವರಣವಿರುವಾಗ ಮನೆಯಲ್ಲಿಯೇ ವ್ಯಾಯಾಮ ಮಾಡುವುದು ಒಳ್ಳೆಯದು.

6. ಒತ್ತಡ: ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಂಗೀತ ಕೇಳುವುದು, ಪ್ರಾಣಾಯಾಮ ಮಾಡುವುದು ಒಳ್ಳೆಯದು.

7. ತರಕಾರಿ: ಅರಿಶಿಣ ಹಾಕಿದ ಹಾಲಿನ ಸೇವನೆ , ಹಾಗಲಕಾಯಿ, ಮೆಂತೆ ಇವುಗಳನ್ನು ತಿನ್ನುವುದು ಒಳ್ಳೆಯದು. ಥಂಡಿಯಲ್ಲಿ ಅಸ್ತಮಾ ಹೆಚ್ಚಾಗದಿರಲು ಕೆಲ ಸಲಹೆಗಳು

ಅಸ್ತಮಾ ಕಾಯಿಲೆ ಇರುವವರು ತಣ್ಣನೆಯ ಹವಾಮಾನ ಇರುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಥಂಡಿಯಲ್ಲಿ ಹೋಡಾಡುತ್ತಿದ್ದರೆ ಕಾಯಿಲೆ ಹೆಚ್ಚಿ ಉಸಿರಾಟದ ತೊಂದರೆ ಉಂಟಾಗುವುದು. ಆದ್ದರಿಂದ ಅಸ್ತಮಾ ಕಾಯಿಲೆ ಇರುವವರು ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು: 

1. ಬಿಸಿಲಿನಲ್ಲಿ ನಿಲ್ಲುವುದು: ವಿಟಮಿನ್ ಡಿ ಅಸ್ತಮಾ ಕಾಯಿಲೆಯನ್ನು ಗುಣ ಪಡಿಸಲು ಸಹಕಾರಿಯಾಗಿದೆ. ಆದ್ದರಿಂದ ಬಿಸಿಲು ಬಂದಾಗ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಹೋಗಿ ನಿಲ್ಲಬೇಕು. ತಣ್ಣನೆ ಹವಾಮಾನ ಇರುವಾಗ ಸ್ವೆಟರ್ ಅಥವಾ ಬೆಚ್ಚಗಿನ ಉಡುಪು ಧರಿಸಿ ಮೈಯನ್ನು ಬೆಚ್ಚಗೆ ಇಟ್ಟುಕೊಳ್ಳಬೇಕು.

2. ವಿಟಮಿನ್ ಡಿ ಇರುವ ಆಹಾರ ಸೇವನೆ: ವಿಟಮಿನ್ ಡಿ ಕೊರತೆಯಿದ್ದರೆ ಅಸ್ತಮಾ ಕಾಯಿಲೆ ಹೆಚ್ಚಾಗುವುದು. ಆದ್ದರಿಂದ ವಿಟಮಿನ್ ಡಿ ಇರುವ ಆಹಾರ ಪದಾರ್ಥಗಳನ್ನು ತಿನ್ನುವುದು ಒಳ್ಳೆಯದು. ಮೀನು, ಅಣಬೆ, ಮೊಟ್ಟೆ, ತುನಾ ಫಿಶ್ ನಲ್ಲಿ ವಿಟಮಿನ್ ಡಿ ಅಧಿಕವಾಗಿ ಇರುತ್ತದೆ.

3. ಒಮೆಗಾ 3 ಇರುವ ಆಹಾರ ಸೇವನೆ: ಒಮೆಗಾ 3 ಮೀನಿನಲ್ಲಿ ಅಧಿಕವಿರುವುದರಿಂದ ಈ ಆಹಾರ ಸೇವನೆ ಒಳ್ಳೆಯದು. ಆದರೆ ಮಳೆಗಾಲದಲ್ಲಿ ಮೀನು ಕೊಳ್ಳುವಾಗ ತಾಜಾ ಮೀನನ್ನು ನೋಡಿ ಕೊಳ್ಳಬೇಕು. ಇದಲ್ಲದೆ ನಾಟಿ ಕೋಳಿ, ಮೊಟ್ಟೆ ಇವುಗಳನ್ನು ತಿನ್ನುವುದು ಒಳ್ಳೆಯದು.

4. ವನಸ್ಪತಿ ಎಣ್ಣೆ ಬಳಸಬಾರದು: ಅಸ್ತಮಾ ಕಾಯಿಲೆ ಇರುವವರಿಗೆ ಕೊಡುವ ಆಹಾರದಲ್ಲಿ ವನಸ್ಪತಿ ಎಣ್ಣೆ ಬಳಸಬಾರದು.

5. ವ್ಯಾಯಾಮ: ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಜಾಸ್ತಿಯಾಗುತ್ತದೆ. ಉತ್ತಮ ಗಾಳಿ ಸೇವನೆ ಮಾಡಿದರೆ ಅಸ್ತಮಾ ರೋಗ ಹೆಚ್ಚಾಗುವುದನ್ನು ತಡೆಯಬಹುದು. ತುಂಬಾ ತಂಪಾದ ವಾತಾವರಣವಿರುವಾಗ ಮನೆಯಲ್ಲಿಯೇ ವ್ಯಾಯಾಮ ಮಾಡುವುದು ಒಳ್ಳೆಯದು.

6. ಒತ್ತಡ: ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಂಗೀತ ಕೇಳುವುದು, ಪ್ರಾಣಾಯಾಮ ಮಾಡುವುದು ಒಳ್ಳೆಯದು.

7. ತರಕಾರಿ: ಅರಿಶಿಣ ಹಾಕಿದ ಹಾಲಿನ ಸೇವನೆ , ಹಾಗಲಕಾಯಿ, ಮೆಂತೆ ಇವುಗಳನ್ನು ತಿನ್ನುವುದು ಒಳ್ಳೆಯದು.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ