ಖಾಯಿಲೆ ಈ ಹೆಸರು ಕೇಳಿದ ಕೂಡಲೇ ನಮಗೆ ನೆನಪಿಗೆ ಬರುವುದು ನೋವು ಸಂಕಟ ಭಯ ಮನುಷ್ಯರಿಗೆ ತುಂಬಾ ರೀತಿಯ ಖಾಯಿಲೆಗಳು ಬರುತ್ತೆ ಅವುಗಳಿಂದ ಬರುವ ನೋವು ಸಂಕಟ ಅಷ್ಟೆ ಭಯಂಕರವಾಗಿ ಇರುತ್ತೆ. ಈ ಖಾಯಿಲೆಗಳ ನೋವು ಅನುಭವಿಸುವ ಸಂಕಟ ಹೇಗಿರುತ್ತೆ ಅಂದರೆ ಉದಾಹರಣೆ ಒಂದು ಚಿಕ್ಕ ತಲೆ ನೋವು ಬಂದರೆ ಇದಕ್ಕಿಂತ ದೊಡ್ಡ ಖಾಯಿಲೆ ಪ್ರಪಂಚದಲ್ಲಿ ಇಲ್ಲ ಎನ್ನುತ್ತಾನೆ ಈ ರೀತಿಯಾಗಿ ಒಂದೊಂದು ಖಾಯಿಲೆ ಒಂದೊಂದು ಸಂಕಟ ಕೊಡುತ್ತೆ. ಒಂದು ರೀಸರ್ಚ್ ಪ್ರಕಾರ ಕೇವಲ ಮಾನವನಿಗೆ ಮಾತ್ರ ಏಡ್ಸ್ ಕ್ಯಾನ್ಸರ್ ಡೆಂಗ್ಯೂ ನಂತಹ ಹೆಚ್ಚು ಖಾಯಿಲೆಗಳು ಬರುತ್ತಂತೆ ಆದರೆ ಸೂಪರ್ ಪವರ್ ಅಥವಾ ಹೈಪರ್ ಥೈಮಸಿ ಅನ್ನೋ ಖಾಯಿಲೆ ಬಂದರೆ ನೋವಿನ ಜೊತೆ ಅಧ್ಬುತ ಶಕ್ತಿ ಕೂಡಾ ಬರುತ್ತಂತೆ ಹೌದು ಇದು ನಿಜ ಈ ಖಾಯಿಲೆ ಬಂದರೆ ಅವರು ಸೂಪರ್ ಮ್ಯಾನ್ ಆಗಿ ಬದಲಾಗುತ್ತಾರೆ.

ನಮ್ಮ ಮೆದುಳು ಸಾಮಾನ್ಯವಾಗಿ ಒಂದು ದಿನಕ್ಕೆ 34 ಜಿಬಿ ಡೇಟಾವನ್ನು ಸ್ಟೋರ್ ಮಾಡೋ ಸಾಮರ್ಥ್ಯ ಹೊಂದಿರುತ್ತದೆ ಈ ಡೇಟಾವನ್ನ ಪ್ರೋಸೆಸ್ ಮಾಡುತ್ತಾ ಅದರಲ್ಲಿರುವ 80ರಷ್ಟು ಡೇಟಾವನ್ನು ದಿನ ಕಳೆದಂತೆ ಡಿಲೀಟ್ ಮಾಡುತ್ತೆ ಈ ಡಿಲೀಟ್ ಮಾಡುವ ಪ್ರಕ್ರಿಯೆ ನಾವು ರಾತ್ರಿ ಮಲಗಿರುವಾಗ ಅಂದರೆ ಡೀಪ್ ಸ್ಲೀಪ್ ನಲ್ಲಿ ಇರುವಾಗ ನಮಗೆ ತಿಳಿಯದೇ ನಮ್ಮ ಮೆದುಳಿನಲ್ಲಿ ನಡೆದು ಹೋಗುತ್ತೆ ಆದರೆ ಈ ಹೈಪರ್ ಥೈಮಸೀ ಎನ್ನುವ ಖಾಯಿಲೆ ಯಾರಿಗೆ ಇರುತ್ತೋ ಅವರ ಮೆದುಳು ಡೇಟಾ ವನ್ನೂ ಡಿಲೀಟ್ ಮಾಡುವುದು ನಿಲ್ಲಿಸಿ ಬಿಡುತ್ತೆ. ಈ ಖಾಯಿಲೆ ಅವರ ಬ್ರೈನ್ ಸೆಲ್ ಮೇಲೆ ಪರಿಣಾಮ ಬೀರುತ್ತೆ ಇದರಿಂದ ಈ ವ್ಯಕ್ತಿಯ ಜೀವನದಲ್ಲಿ ನಡೆಯುವ ಪ್ರತಿಯೊಂದು ವಿಷಯವನ್ನು ಅವರ ಮೆದುಳು ಸ್ಟೋರ್ ಮಾಡಿಕೊಳ್ಳುತ್ತಾ ಇರುತ್ತೆ ಯಾರಿಗೆ ಈ ಖಾಯಿಲೆ ಇರುತ್ತೋ ಅವರಿಗೆ ಅವರ ಜೀವನದಲ್ಲಿ ನಡಿಯೋ ಪ್ರತೀ ಘಟನೆ ನೆನಪಿರುತ್ತದೆ ಇವರು ಕೆಲವು ವರ್ಷಗಳಿಂದ ಕೇಳಿದ ಮಾತುಗಳನ್ನು ಪುಸ್ತಕದಲ್ಲಿ ಓದಿದ್ದನ್ನು ಒಂದು ಅಕ್ಷರವು ತಪ್ಪಿಲ್ಲದೆ ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಇವರಿಗೆ ಇರುತ್ತೆ.

ಕೆಲವು ವರ್ಷಗಳಿಂದ ನಡೆದ ಚಿಕ್ಕ ಚಿಕ್ಕ ಘಟನೆಗಳು ಕೂಡಾ ಇವರಿಗೆ ನೆನಪಿರುತ್ತದೆ. ಇವರು ಒಂದು ರೀತಿ ಸೂಪರ್ ಕಂಪ್ಯೂಟರ್ ಇದ್ದ ಹಾಗೆ ಇವರಿಗೆ ಮರೆತು ಹೋಗುವುದು ಅಂದರೇನೆ ಗೊತ್ತಿಲ್ಲ ಈಗ ನೀವು ನಮಗೆ ಸೂಪರ್ ಪವರ್ ಇದ್ದಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದುಕೊಳ್ಳುತ್ತ ಇದ್ದೀರಾ ಅಲ್ವಾ ಹಾಗಾದ್ರೆ ಈ ವಿಷಯವನ್ನು ತಿಳಿದುಕೊಳ್ಳಿ ಪ್ರತೀ ಒಂದು ವಿಷಯದಲ್ಲಿ ಲಾಭ ನಷ್ಟ ಹೆಗಿರುತ್ತೋ ಅದೇ ರೀತಿ ಇದರಲ್ಲೂ ಇದೆ ಏನೆಂದರೆ ಯಾರಿಗೆ ಈ ಖಾಯಿಲೆ ಇರುತ್ತೋ ಅವರಿಗೆ ನಿರಂತರವಾಗಿ ಡೇಟಾ ಅನ್ನು ಸ್ಟೋರ್ ಮಾಡಿಕೊಳ್ಳುವುದರಿಂದ ಅವರ ಮೆದುಳಲ್ಲಿ ಇಪ್ಪತ್ತು ನಾಲ್ಕು ಗಂಟೆ ನಿರಂತರ ತಲೆ ನೋವು ಸ್ವಲ್ಪ ಆದರು ಇದ್ದೆ ಇರುತ್ತೆ. ಈ ಖಾಯಿಲೆ ಇರುವವರು ಇನ್ಸೋಮ್ನಿಯಾ ಸಮಸ್ಯೆಯಿಂದ ಸಂಕಟ ಪಡುತಿರುತ್ತಾರೆ ಅಂದರೆ ನಿದ್ದೆ ಇಲ್ಲದಿರುವುದು ಇವರ ಮೆದುಳು ನಿರಂತರ ಕೆಲಸ ಮಾಡುವುದರಿಂದ ಸಾಮಾನ್ಯ್ ಜನರಿಗಿಂತ ಬೇಗ ದಣಿದು ಹೋಗುತ್ತಾರೆ ಸಂತೋಷದ ವಿಷಯವನ್ನು ನೆನಪಿಟ್ಟು ಕೊಳ್ಳುವುದು ಪರವಾಗಿಲ್ಲ ಆದರೆ ಸಂಕಟ ವಿಷಯ ನೆನಪಿಟ್ಟುಕೊಳ್ಳುವ ದರಿಂದ ಇವರು ಬೇಗ ಡಿಪ್ರೆಶನ್ ಹೋಗುತ್ತಾರೆ. ನಮ್ಮ ಪ್ರಪಂಚದಲ್ಲಿ ಇರುವ 700 ಕೋಟಿ ಜನಸಂಖ್ಯೆ ಯಲ್ಲಿ ಸಾಕಷ್ಟು ಜನಕ್ಕೆ ಈ ಸಮಸ್ಯೆ ಇದೆ ಎಂದು ಸಂಶೋಧನೆ ಹೇಳುತ್ತೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ
%d bloggers like this: