ಕೋಲ್ಡ್ ಡ್ರಿಂಕ್ಸ್ ಅಥವಾ ಮಿನರಲ್ ವಾಟರಿನ ಖಾಲಿ ಬಾಟಲಿನಲ್ಲಿ ನೀರನ್ನು ಶೇಖರಿಸಿ ಕುಡಿಯುವುದರಿಂದ ಆಗುವಂತಹ ಭಯಾನಕ ಖಾಯಿಲೆಗಳನ್ನು ತಿಳಿದರೆ ಅದನ್ನು ನೀವು ಮುಟ್ಟುವುದೇ ಇಲ್ಲ. ಕೋಲ್ಡ್ ಡ್ರಿಂಕ್ಸ್ ಅಥವಾ ಮಿನರಲ್ ವಾಟರಿನ ಬಾಟಲ್ ಖಾಲಿ ಆದಲ್ಲಿ ಅದರಲ್ಲಿ ತುಂಬಾ ದಿನಗಳವರೆಗೆ ನೀರನ್ನು ಶೇಖರಿಸಿ ಕುಡಿಯುವುದು ತುಂಬಾ ಜನರ ಅಭ್ಯಾಸವಾಗಿದೆ. ಯು. ಎಸ. ನಲ್ಲಿ ಮಾಡಿದ ಒಂದು ಸಂಶೋಧನೆಯ ಪ್ರಕಾರ ಪ್ಲಾಸ್ಟಿಕ್ ನ ಬಾಟಲಿನಲ್ಲಿ ಇರುವಂತಕ ಕೆಮಿಕಲ್ ಗಳು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ಸಭೀತಾಗಿದೆ. ಮತ್ತು ಈ ಕೆಮಿಕಲ್ ಗಳು ಶರೀರದಲ್ಲಿ ಸೇರಿ ಆರೋಗ್ಯ ಹಾನಿಯನ್ನು ಉಂಟು ಮಾಡುತ್ತವೆ. ಇದರಲ್ಲಿ ಇರುವಂತಹ ಪಾಲಿಥಿಲಿನ್ ತೆಪೆಪತಾಲೆಟ್ ಕೆಮಿಕಲ್ ಶರೀರದಲ್ಲಿ ಸೇರಿ ಕ್ಯಾನ್ಸರ್ ನಂತಹ ಭಯಾನಕ ಖಾಯಿಲೆಗೆ ಕಾರಣವಾಗಬಲ್ಲದು. ಆದ್ದರಿಂದ ಪ್ಲಾಸ್ಟಿಕ್ ಬಾಟಲಿನಲ್ಲಿ ನೀರನ್ನು ತುಂಬಾ ದಿನಗಳವರೆಗೆ ಶೇಖರಿಸಿ ಕುಡಿಯುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ.

ಹೀಗೆ ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ಶೇಖರಿಸಿ ಕುಡಿಯುವುದರಿಂದ ಆಗಬಹುದಾದ ಆರೋಗ್ಯ ಭಾದೆಯ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ.

ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ಶೇಖರಿಸಿ ತುಂಬಾ ದಿನಗಳವರೆಗೆ ಕುಡಿಯುವುದರಿಂದ ಶರೀರದ ನರ್ವಸ್ ಸಿಸ್ಟಂ ಹಾನಿಯುಂಟಾಗಿ ನರ ದೌರ್ಭಲ್ಯ ದ ಸಮಸ್ಯೆ ಉಂಟಾಗಬಹುದು.

ಪ್ಲಾಸ್ಟಿಕ್ ಬಾಟಲಿನಲ್ಲಿ ಇರುವಂತಹ ಕೆಮಿಕಲ್ ಗಳು ನೀರಿನ ಜೊತೆ ಸೇರಿ ಶರೀರದಲ್ಲಿ ಟಾಕ್ಸಿನ್ ಉತ್ಪತ್ತಿ ಮಾಡುತ್ತವೆ.

ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ಶೇಖರಿಸಿ ತುಂಬಾ ದಿನಗಳವರೆಗೆ ಕುಡಿಯುವುದರಿಂದ ಲಿವರ್ ಕ್ಯಾನ್ಸರಿಗೆ ಕಾರಣವಾಗಬಹುದು.

ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ಶೇಖರಿಸಿ ತುಂಬಾ ದಿನಗಳವರೆಗೆ ಕುಡಿಯುವುದರಿಂದ ಮಹಿಳೆಯರಲ್ಲಿ ಪಿ.ಸಿ.ಓ.ಎಸ್ ಸಮಸ್ಯೆ ತಲೆದೋರಬಹುದು.

ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ಶೇಖರಿಸಿ ತುಂಬಾ ದಿನಗಳವರೆಗೆ ಕುಡಿಯುವುದರಿಂದ ಹಾರ್ಮೊನಲ್ ಇಂಬ್ಯಾಲೆನ್ಸ್ ನ ಸಮಸ್ಯೆ ಉಂಟಾಗಬಹುದು.

ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ಶೇಖರಿಸಿ ತುಂಬಾ ದಿನಗಳವರೆಗೆ ಕುಡಿಯುವುದರಿಂದ ಮಹಿಳೆಯರಲ್ಲಿ ಬ್ರೆಸ್ಟ್ ಕ್ಯಾನ್ಸರ್ ನಂತಹ ಗಂಭೀರ ಸಮಸ್ಯೆ ಆಗುವ ಸಂಭವ ಇರುತ್ತದೆ.

ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ಶೇಖರಿಸಿ ತುಂಬಾ ದಿನಗಳವರೆಗೆ ಕುಡಿಯುವುದು ಕೂದಲು ಉದುರುವ ಸಮಸ್ಯೆಗೂ ಕಾರಣವಾಗಬಹುದು.

ಪ್ಲಾಸ್ಟಿಕ್ ಬಾಟಲಿನಲ್ಲಿ ಬಿಸಿ ನೀರನ್ನು ಸಂಗ್ರಹಿಸಿ ಖಂಡಿತ ಕುಡಿಯಲೇಬಾರದು.ಯಾಕೆಂದರೆ ಇದರಲ್ಲಿ ಇರುವಂತಹ ಪಾಲಿಥಿಲಿನ್ ತೆಪೆಪತಾಲೆಟ್ ಕೆಮಿಕಲ್ ಬಾಟಲಿ ಬಿಸಿಯಾದಾಗ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ