ಊಟ ಆದ ತಕ್ಷಣ ನೀವು ಸಾಮಾನ್ಯವಾಗಿ ಮಾಡುವ ತಪ್ಪುಗಳ ಬಗ್ಗೆ ನಿಮಗೆ ಅರಿವಿದೆಯೇ. ಹಾಗಾದರೆ ಬನ್ನಿ ನಾವು ಅದನ್ನು ನಿಮಗೆ ತಿಳಿಸುತ್ತೇವೆ. ಈಗಿನ ಕಾಲದಲ್ಲಿ ಎಲ್ಲರೂ ಸಿಗರೇಟ್ ಸೇದುವುದು ಸಾಮಾನ್ಯ ವಾಗಿದೆ. ಅದರಲ್ಲಿ ಕೆಲವರು ಸಿಗರೇಟ್ ಸೇದಲು ಕೆಲ ಸಮಯಗಳನ್ನು ನಿಗದಿಪಡಿಸಿಕೊಂಡಿರುತ್ತಾರೆ. ಬೆಳಗ್ಗೆ ಎದ್ದ ತಕ್ಷಣ, ಊಟ ಆದ ನಂತರ, ಕಾಫಿ ಅಥವಾ ಟೀ ಕುಡಿಯುವಾಗ, ರಾತ್ರಿ ಮಲಗುವ ಮುನ್ನ ಹೀಗೆ ಹಲವಾರು ಸಮಯಗಳನ್ನು ನಿಗದಿಪಡಿಸಿ ಕೊಂಡಿರುತ್ತಾರೆ. ಕೆಲವರು ಊಟ ಆದ ತಕ್ಷಣ ಆ ಸಿಗರೇಟ್ ಸೇದುತ್ತಾ ರೆ ಇದು ತುಂಬಾ ಅಪಾಯಕಾರಿ. ಮೊದಲೇ ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕಾರಿ ಅದರಲ್ಲೂ ಊಟ ಆದ ತಕ್ಷಣ ಸಿಗರೇಟ್ ಸೇದಿದರೆ ಮಾಮೂಲಿಗಿಂತ ಶೇಕಡ 25 ರಷ್ಟು ಹೆಚ್ಚು ಪ್ರಮಾಣದಲ್ಲಿ ಆರೋಗ್ಯ ಬೇಗ ಹಾಳಾಗುತ್ತದೆ ಇದರಿಂದ ಬೇಗ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.

ಇನ್ನು ಕೆಲವರು ಊಟ ಆದ ತಕ್ಷಣ ಸ್ನಾನವನ್ನು ಮಾಡುತ್ತಾರೆ. ಊಟ ಆದ ತಕ್ಷಣ ಸ್ನಾನ ಮಾಡುವುದು ಅಷ್ಟು ಒಳ್ಳೆಯದಲ್ಲ ಏಕೆಂದರೆ ಊಟ ಆದ ತಕ್ಷಣ ಸ್ನಾನ ಮಾಡುವುದರಿಂದ ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ದೇಹದ ಕೆಲವು ಭಾಗಗಳಿಗೆ ಮಾತ್ರ ರಕ್ತ ಸಂಚಾರವಾಗುತ್ತದೆ ಅಂದರೆ ಕೇವಲ ಕೈ ಕಾಲುಗಳಿಗೆ ಮಾತ್ರ ರಕ್ತ ಸಂಚಾರವಾಗುತ್ತದೆ. ಇದರಿಂದ ಜೀರ್ಣಕ್ರಿಯೆಗೆ ತುಂಬಾ ಅನಾನುಕೂಲ ಉಂಟಾಗುತ್ತದೆ. ಇದು ಕಾಲ ಕಳೆದಂತೆ ನಮ್ಮ ಜೀರ್ಣಾಂಗದ ವ್ಯವಸ್ಥೆ ಮೇಲೆ ದೊಡ್ಡ ಪರಿಣಾಮ ಬೀರಬಹುದು ಆದ್ದರಿಂದ ಊಟ ಆದ ತಕ್ಷಣ ಸ್ನಾನ ಮಾಡುವುದನ್ನು ಕಡಿಮೆ ಮಾಡಿ.

ಊಟ ಮಾಡಿದ ತಕ್ಷಣ ಹಣ್ಣುಗಳನ್ನು ತಿನ್ನುವುದು ಸರ್ವೇ ಸಾಮಾನ್ಯ. ವೈದ್ಯರು ಕೂಡ ಹಣ್ಣುಗಳನ್ನು ಹೆಚ್ಚಾಗಿ ತಿನ್ನಿರಿ ಎಂದು ಹೇಳುತ್ತಾರೆ ಆದರೆ ಊಟ ಆದ ತಕ್ಷಣ ಹಣ್ಣುಗಳನ್ನು ತಿನ್ನುವುದು ಒಳ್ಳೆಯದಲ್ಲ. ಏಕೆಂದರೆ ಹಣ್ಣುಗಳಲ್ಲಿ ವಿಟಮಿನ್ ಮತ್ತು ಗ್ಲೂಕೋಸ್ ಅಂಶವು ಹೆಚ್ಚಾಗಿರುತ್ತದೆ. ಊಟ ಆದ ತಕ್ಷಣ ಹಣ್ಣುಗಳನ್ನು ತಿಂದಾಗ ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಹಣ್ಣುಗಳು ಜೀರ್ಣವಾಗಲು ಎನ್ಜೈಮ್ ಅವಶ್ಯಕತೆ ಹೆಚ್ಚಾಗಿ ಬೇಕಾಗುತ್ತದೆ. ಒಂದು ವೇಳೆ ಎನ್ಜೈಮ್ ಗಳ ಕೊರತೆ ಕಂಡುಬಂದರೆ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುತ್ತದೆ. ಇದರಿಂದ ನಮ್ಮ ಹೊಟ್ಟೆಯ ಭಾಗದಲ್ಲಿ ಕೊಬ್ಬಿನಂಶ ಹೆಚ್ಚಾಗಬಹುದು.

ಕೆಲವರು ಊಟ ಆದ ತಕ್ಷಣ ಮಲಗುತ್ತಾರೆ. ಇದು ಒಳ್ಳೆಯದಲ್ಲ ಏಕೆಂದರೆ ಊಟ ಆದ ತಕ್ಷಣ ಮಲಗಿದರೆ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಆದ್ದರಿಂದ ಊಟ ಆದ ತಕ್ಷಣ ಸ್ವಲ್ಪ ಹೊತ್ತು ವಾಕ್ ಮಾಡಿ ಮಲಗುವುದು ಒಳ್ಳೆಯದು. ಮಲಗುವ ಮುನ್ನ ಚೆನ್ನಾಗಿ ನೀರು ಕುಡಿಯಬೇಕು. ಊಟ ಆದ ತಕ್ಷಣ ಟೀ ಕುಡಿಯಬೇಡಿ ಏಕೆಂದರೆ ಟೀ ನಲ್ಲಿರುವ ಅಂಶ ನಮ್ಮ ದೇಹಕ್ಕೆ ಸರಿಯಾಗಿ ಐರನ್ ಅಂಶ ಸೇರಿದಂತೆ ಮಾಡುತ್ತದೆ. ಇದರಿಂದ ನಮ್ಮ ದೇಹದಲ್ಲಿ ರಕ್ತ ಸರಿಯಾಗಿ ಉತ್ಪತ್ತಿಯಾಗುವುದಿಲ್ಲ ಇದರಿಂದ ನಮ್ಮ ದೇಹದಲ್ಲಿ ರಕ್ತದ ಕೊರತೆ ಉಂಟಾಗಬಹುದು.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ
%d bloggers like this: