ಊಟ ಆದ ತಕ್ಷಣ ಸಿಗರೇಟ್ ಸೇದುವವರು ತಪ್ಪದೇ ತಿಳಿಯಿರಿ

ಇತ್ತೀಚಿನ ದಿನಗಳಲ್ಲಿ ಸಿಗರೇಟ್ ಸೇದುವುದು ಒಂದು ಶೋಕಿಯಾಗಿದೆ ಚಿಕ್ಕ ಮಕ್ಕಳಿಂದ ವಯಸ್ಸಾದವರು ಸಿಗರೇಟು ಸೇದುವ ಸ್ತಿತಿಗೆ ಬಂದಿದೆ. ಈಗಂತೂ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಸಿಗರೇಟು ಸೇದುತ್ತಾ ಇದ್ದಾರೆ ಎಂದು ಅಮೇರಿಕನ್ ಟೈಮ್ಸ್ ವರದಿ ನೀಡಿದೆ ಏಕೆ ಅಂದ್ರೆ ಅಮೇರಿಕದಲ್ಲಿರುವ ಎಂಬತ್ತು ಪಟ್ಟು ಹೆಂಗಸರು ಸಿಗರೆಟ್ ಸೇದುತ್ತಾರೆ ಎಂದು ವರದಿ ಹೇಳುತ್ತದೆ, ಕೆಲವರು ಶೋಕಿಗಾಗಿ ಸೇರಿದರೆ ಇನ್ನು ಕೆಲವರು ಅದನ್ನೇ ಅಭ್ಯಾಸ ಮಾಡಿಕೊಂಡಿರುತ್ತಾರೆ ಎಷ್ಟು ಪ್ರಯತ್ನಪಟ್ಟರೂ ಬಿಡಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಹೀಗಂತೂ ನಮ್ಮ ದೇಶದಲ್ಲಿ ಊಟದ ನಂತರ ಸಿಗರೇಟ್ ಸೇದುವುದು ಒಂದು ಶೋಕಿ ಆಗೋಗಿದೆ ಬಿಡಿ.

ಸಿಗರೇಟ್ ಸೇದುವ ಅಭ್ಯಾಸ ಇರುವವರು. ದಿನ ಕಳೆಯುವುದರೊಳಗೆ ಒಂದರಿಂದ ಎರಡು ಪ್ಯಾಕ್ ಕಾಲಿ ಮಾಡಿ ಬಿಡುತ್ತಾರೆ. ಸಿಗರೇಟ್ ಸೇದಿದರೆ ಸಾವು ಸಂಭವಿಸುತ್ತದೆ ಎಂದು ಗೊತ್ತಿದ್ದರೂ ಅದನ್ನು ಸೇದುತ್ತಾರೆ. ಸಿಗರೇಟ್ ಸೇವನೆ ಡ್ರಗ್ಸ್ ಸೇವನೆ ಅಷ್ಟೇ ಅಪಾಯಕಾರಿ . ಡ್ರಗ್ಸ್ ತೆಗೆದುಕೊಳ್ಳುವುದು ಒಂದೇ ಸಿಗರೇಟ್ ಸೇದುವುದು ಒಂದೇ. ಸಿಗರೇಟನ್ನು ಮನೆಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸೇದುವುದರಿಂದ ಸಿಗರೇಟ್ ಸೇದುವವರ ಆರೋಗ್ಯವು ಹಾಳಾಗುವುದಲ್ಲದೆ ಅದರಿಂದ ಬರುವ ಹೊಗೆಯನ್ನು ಕುಡಿಯುವುದರಿಂದ ಬೇರೆಯವರ ಆರೋಗ್ಯವೂ ಕೂಡ ಹಾಳಾಗುತ್ತದೆ.

ಮಧುಮೇಹದ ಸಮಸ್ಯೆಯಿಂದ ಬಳಲುತ್ತಿರುವವರು ಸಿಗರೇಟ್ ಸೇವನೆ ಮಾಡುವುದು ತುಂಬಾ ಅಪಾಯ. ಇದರಿಂದ ಅವರ ದೇಹದಲ್ಲಿರುವ ಸಕ್ಕರೆ ಅಂಶ ಇನ್ನೂ ಹೆಚ್ಚಾಗಿ ಅದರಿಂದ ಕೂಡ ಸಾವು ಸಂಭವಿಸಬಹುದು.ಮಹಿಳೆಯರು ಸಿಗರೇಟನ್ನು ಹೆಚ್ಚಾಗಿ ಸೇದುವುದರಿಂದ ಅವರ ಋತು ಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಅವರಿಗೆ ಮುಂದೆ ಮಕ್ಕಳಾಗುವ ಸಮಸ್ಯೆ ಉಂಟಾಗಬಹುದು ಅಥವಾ ಮಕ್ಕಳಾದರೂ ಹುಟ್ಟಿದ ಮಗು ಅನಾರೋಗ್ಯದಿಂದ ಹುಟ್ಟಬಹುದು ಅಥವಾ ಯಾವುದಾದರೂ ಸಮಸ್ಯೆಯಿಂದ ಹುಟ್ಟಬಹುದು. ಕಾಲೇಜು ವಿದ್ಯಾರ್ಥಿಗಳು ಸಿಗರೇಟ್ ಸೇದುವುದರಿಂದ ಅವರ ಮೆದುಳಿನ ಮೇಲೆ ಪರಿಣಾಮ ಬೀರಿ ನೆನಪಿನ ಶಕ್ತಿ ಕೂಡ ಕಡಿಮೆಯಾಗಬಹುದು. ಇದರಿಂದ ಆ ಚಿಕ್ಕ ವಯಸ್ಸಿನಲ್ಲಿ ಶ್ವಾಸ ಕೋಶ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಾರೆ.

ಸಿಗರೇಟ್ ಸೇವನೆಯಿಂದ ರಕ್ತದೊತ್ತಡ ಹೆಚ್ಚುತ್ತದೆ. ಇದರಿಂದ ಹೃದಯಾಘಾತ ಆಗುವ ಸಂಭವ ಹೆಚ್ಚಾಗಿರುತ್ತದೆ. ಅತಿಯಾದ ಸಿಗರೇಟ್ ಸೇವನೆಯಿಂದ ನಮ್ಮ ಚರ್ಮ ಮುಪ್ಪಾಗುತ್ತದೆ. ಕಣ್ಣಿನ ಸುತ್ತಲು ಚರ್ಮ ಕಪ್ಪಾಗುತ್ತದೆ ಮತ್ತು ಕಣ್ಣುಗಳು ಯಾವಾಗಲೂ ಕೆಂಪಾಗಿರುತ್ತದೆ. ಸಿಗರೇಟ್ ಸೇದುವುದು ಮೊದಲೇ ದೇಹಕ್ಕೆ ಅಪಾಯಕಾರಿ. ಅದರಲ್ಲೂ ಊಟದ ನಂತರ ಸಿಗರೇಟ್ ಸೇದುವುದು ಇನ್ನಷ್ಟು ಅಪಾಯಕಾರಿ. ಸಿಗರೇಟ್ ನಲ್ಲಿ ನಿಕೋಟಿನ್ ಅಂಶ ಹೆಚ್ಚಾಗಿರುತ್ತದೆ. ಊಟ ಆದ ನಂತರ ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಪ್ರಾರಂಭವಾಗುತ್ತದೆ ಆ ಸಮಯದಲ್ಲಿ ನಮ್ಮ ದೇಹದಲ್ಲಿ ರಕ್ತದ ಚಲನವಲನಗಳು ಹೆಚ್ಚಾಗಿರುತ್ತದೆ.

ಇಂತಹ ಸಮಯದಲ್ಲಿ ಸಿಗರೇಟನ್ನು ಸೇರಿದಾಗ ಅದರಲ್ಲಿರುವ ನಿಕೋಟಿನ್ ಅಂಶ ರಕ್ತದ ಜೊತೆ ಬೇಗ ಬೆರೆಯುತ್ತದೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್ ಬೇಗ ಬರುತ್ತದೆ. ಅತಿಯಾದ ಸಿಗರೇಟ್ ಸೇವನೆ ನಿಮ್ಮ ಪುರುಷತ್ವದ ಮೇಲೂ ಪರಿಣಾಮ ಬೀರಬಹುದು. ಸಿಗರೇಟ್ ಸೇವನೆಯಿಂದ ಆರೋಗ್ಯವು ಹಾಳು ಮತ್ತು ದುಡ್ಡು ಹಾಳು. ಅದರಿಂದ ಆ ಸಿಗರೇಟ್ ಸೇವನೆಯನ್ನು ಕಡಿಮೆ ಮಾಡಿ ಇದರಿಂದ ನಿಮ್ಮ ಆರೋಗ್ಯವನ್ನು ಉಳಿಸಿಕೊಳ್ಳಿ ಮತ್ತು ನಿಮ್ಮ ಪ್ರೀತಿಪಾತ್ರರು ಹಾಗೂ ನೆರೆಹೊರೆಯವರ ಆರೋಗ್ಯ ವನ್ನು ಉಳಿಸಿ.

Check Also

ಊಟದ ನಂತರ ನೀವು ಈ ತಪ್ಪುಗಳನ್ನು ದಯವಿಟ್ಟು ಮಾಡಲೇ ಬೇಡಿ

ಊಟ ಆದ ತಕ್ಷಣ ನೀವು ಸಾಮಾನ್ಯವಾಗಿ ಮಾಡುವ ತಪ್ಪುಗಳ ಬಗ್ಗೆ ನಿಮಗೆ ಅರಿವಿದೆಯೇ. ಹಾಗಾದರೆ ಬನ್ನಿ ನಾವು ಅದನ್ನು ನಿಮಗೆ …

Leave a Reply

Your email address will not be published. Required fields are marked *