ಕಣ್ಣಿನ ಸುತ್ತಲಿನ ಕಪ್ಪು ವರ್ತುಲಕ್ಕೆ ಇಲ್ಲಿದೆ ಶಾಶ್ವತ ಪರಿಹಾರ 

ನಾವು ಎಸ್ಟೇ ಸುಂದರವಾಗಿದ್ದರೂ ನಮ್ಮ  ಕಣ್ಣಿನ ಸುತ್ತಲೂ ಕಪ್ಪು ವರ್ತುಲವಿದ್ದರೆ ನಮ್ಮ ಅಂದವನ್ನು ಕೆಡಿಸುತ್ತದೆ. ಇಂದಿನ ಯುವತಿಯರಿಗೆ ಕಪ್ಪು ವರ್ತುಲ ಒಂದು ದೊಡ್ಡ ಸಮಸ್ಯೆಯಾಗಿದೆ. ಮೇಕಪ್ ಗಳಿಂದ ಇದನ್ನು ಮುಚ್ಚಿದರೆ ಅದು ತಾತ್ಕಾಲಿಕ. ಆದ್ದರಿಂದ ಇದಕ್ಕೆ ಶಾಶ್ವತ ಪರಿಹಾರ ಮಾಡಿಕೊಳ್ಳಬೇಕೆಂದಿದ್ದರೆ ಈ ಕೆಳಗಿನ ಸಲಹೆಗಳನ್ನು ಅನುಸರಿಸಿ.

ನೀರು: ಕಣ್ಣಿನ ಸುತ್ತ ಕಪ್ಪು ಕಲೆಗಳು ಉಂಟಾಗಿದ್ದರೆ ದಿನಕ್ಕೆ 10 ಲೋಟ ನೀರು ಕುಡಿಯಬೇಕು. ಹಣ್ಣುಗಳ ಜ್ಯೂಸ್ ಕುಡಿಯಿರಿ. ಅದರಲ್ಲೂ ಪೈನಾಪಲ್ ಹಣ್ಣಿನ ಜ್ಯೂಸ್ ತುಂಬಾ ಒಳ್ಳೆಯದು.

ಕಣ್ಣಿಗೆ ಆರೋಗ್ಯಕ್ಕೆ ಆಹಾರ: ಕಣ್ಣಿನ ಆರೋಗ್ಯಕ್ಕೆ ಕೆಲವೊಂದು ಆಹಾರ ತುಂಬಾ ಪ್ರಯೋಜನಕಾರಿ. ಅದರಲ್ಲೂ ಟೊಮೆಟೊ, ಪುದೀನ, ನಿಂಬೆರಸ ಮತ್ತು ಸ್ವಲ್ಪ ಉಪ್ಪು ಹಾಕಿ ಜ್ಯೂಸ್ ಮಾಡಿ ಕುಡಿಯುವುದರಿಂದ ಕಣ್ಣಿಗೆ ಬೇಕಾದ ನ್ಯೂಟ್ರಿಷಿಯಸ್ ಸಿಗುವುದು. ಇವು ಇಂತಹ ಕಪ್ಪು ವರ್ತುಲವನ್ನು ಕಡಿಮೆ ಮಾಡುತ್ತದೆ.

ಕಣ್ಣಿನ ಆರೈಕೆ: ಟೊಮೆಟೊ ಮತ್ತು ನಿಂಬೆರಸ ಮಿಶ್ರ ಮಾಡಿ ದಿನಕ್ಕೆ ಎರಡು ಬಾರಿ ಕಣ್ಣಿನ ಸುತ್ತ ಉಜ್ಜ ಬೇಕು. ಇವುಗಳಲ್ಲಿರುವ ಬ್ಲೀಚ್ ಅಂಶ ಕಣ್ಣಿನ ಸುತ್ತಲಿನ ಕಲೆಯನ್ನು ಹೀಗಲಾಡಿಸಲು ಸಹಾಯ ಮಾಡುತ್ತದೆ.

ಕಣ್ಣಿಗೆ ಪ್ಯಾಕ್: ಸೌತೆಕಾಯಿ ಮತ್ತು ಟೊಮೆಟೊವನ್ನು ಪೇಸ್ಟ್ ರೀತಿ ಮಾಡಿ ಅದನ್ನು ಲೆನೊಲಿನ್ ಕ್ರೀಮ್ ಜೊತೆ ಮಿಶ್ರ ಮಾಡಿ ಕಣ್ಣಿನ ಸುತ್ತ ಹಚ್ಚಿದರೆ ಅದರ ಪ್ರಯೋಜನವನ್ನು ನೀವೇ ಕಾಣಬಹುದು.

ನೈಸರ್ಗಿಕವಾದ ಔಷಧಿ : ಕಣ್ಣಿನ ಅಲರ್ಜಿಯಿಂದ ಈ ರೀತಿಯ ಸಮಸ್ಯೆ ಉಂಟಾಗಿದ್ದರೆ ಅನಾನಸ್ ಜ್ಯೂಸ್ ಗೆ ಅರಿಶಿಣ ಹಾಕಿ ಪೇಸ್ಟ್ ರೀತಿ ಮಾಡಿ ಕಣ್ಣಿನ ಸುತ್ತ ಹಚ್ಚುವುದರಿಂದ ಕಣ್ಣಿನ ಅಲರ್ಜಿ ಸಮಸ್ಯೆ ನಿವಾರಣೆ ಆಗಿ ಕಣ್ಣಿನ ಸುತ್ತ ಕಪ್ಪು ವರ್ತುಲ ಮಾಯವಾಗುತ್ತದೆ.

ಆದಷ್ಟು ಹೆಚ್ಚು ಹಸಿ ತರಕಾರಿಗಳನ್ನು ಸೇವಿಸಿ.ಸೊಪ್ಪಿನಿಂದ ತಯಾರಿಸಲಾದ ಪದಾರ್ಥಗಳನ್ನು ಸೇವಿಸುವುದು ಸಹ ಒಳ್ಳೆಯದು.ಆಯಾ ಕಾಲದಲ್ಲಿ ಸಿಗುವ ಹಣ್ಣುಗಳನ್ನು ಸೇವಿಸಿ.
ಪ್ರತಿದಿನವೂ ರಾತ್ರಿ ಮಲಗುವ ಮೊದಲು 2 ರಿಂದ 4 ಬಾದಾಮಿ ಬೀಜವನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಸೇವಿಸಿ. ಬಾದಾಮಿಯಲ್ಲಿ ಹೆಚ್ಚು ಪೋಷಕಾಶವಿರುವುದರಿಂದ ಇದು ಕಪ್ಪು ವರ್ತುಲವನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ, ಚರ್ಮಕ್ಕೂ ಹೊಳಪು ನೀಡುತ್ತದೆ.

ದೇಹದಲ್ಲಿ ಬಿಳಿ ರಕ್ತಕಣವನ್ನು ಹೆಚ್ಚಿಸುವಂಥ ಆಹಾರ ಸೇವಿಸಿ. ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣವೂ ಕಡಿಮೆಯಿದ್ದರೆ ಕಪ್ಪುವರ್ತುಲ ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿ ಯಾವುದೇ ರೀತಿಯ ವೈದ್ಯಕೀಯ ಉಪಚಾರಗಳ ಅಗತ್ಯವಿಲ್ಲ. ಪ್ರತಿದಿನವೂ ತಿನ್ನುವ ಆಹಾರದ ಪ್ರಮಾಣವನ್ನೇ ಹೆಚ್ಚಿಸಿ. ನಾಲಿಗೆಗೆ ರುಚಿ ಅನ್ನಿಸುವ ಆರೋಗ್ಯಕ್ಕಿಂತ ಯಾವುದು ದೇಹಕ್ಕೆ ಹಿತವೋ ಅದನ್ನೇ ಸೇವಿಸಿ.

ಕಪ್ಪು ವರ್ತಲ ಹೋಗಲಾಡಿಸುವುದಕ್ಕಾಗಿ ದುಬಾರಿ ಕ್ರೀಮುಗಳನ್ನು ಬಳಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದೂ ಅಲ್ಲದೆ, ಇದರಿಂದ ಅಡ್ಡಪರಿಣಾಮ ಉಂಟಾಗಬಹುದು. ಒಣಹಣ್ಣುಗಳಾದ ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ ಮುಂತಾದವುಗಳ ಸೇವನೆಯಿಂದ ದೇಹ ಶಕ್ತಿಯುತವಾಗುತ್ತದೆ. ಇವು ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುವುದಕ್ಕೆ ಸಹಕಾರಿಯಾಗಿವೆ.

ನಿಮಗೆ ಚರ್ಮದ ಸಮಸ್ಯೆಯಿಂದಲೇ ಕಪ್ಪು ವರ್ತುಲ ಆರಂಭವಾಗಿದೆ ಅನ್ನಿಸಿದರೆ ಹಸಿ ಸೌತೆ ಕಾಯಿ ಅಥವಾ ಆಲೂಗಡ್ಡೆಯನ್ನು ವೃತ್ತಾಕಾರದಲ್ಲಿ ಹೆಚ್ಚಿಕೊಂಡು ಹದಿನೈದು ನಿಮಿಷ ದಿನವೂ ಕಣ್ಣಿನ ಮೇಲೆ ಇಟ್ಟುಕೊಳ್ಳಿ.

ದಿನವೂ ರೋಜ್ ವಾಟರ್ ನ್ನು ಕಣ್ಣಿನ ಸುತ್ತಲೂ ಹಚ್ಚಿಕೊಂಡು ಅರ್ದ ಘಂಟೆಯ ನಂತರ ತೊಳೆದರೆ ಕಪ್ಪು ವರ್ತುಲ ಮಾಯವಾಗುತ್ತದೆ.

ತಣ್ಣಗಿರುವ ಹಾಲಿನಲ್ಲಿ ಹತ್ತಿಯ ಬಾಲನ್ನು ಅದ್ದಿ ಅದನ್ನು ಕಣ್ಣಿನ ಮೇಲೆ ಇಟ್ಟುಕೊಂಡು ಅರ್ದ ಗಂಟೆ ನಂತರ ಕಣ್ಣು ತೊಳೆದುಕೊಳ್ಳಿ.

ಪ್ರತಿದಿನ ಮಲಗುವ ಮೊದಲು ಬಾದಾಮಿ ಎಣ್ಣೆಗೆ ನಿಂಬೆರಸವನ್ನು ಸೇರಿಸಿ ಕಣ್ಣಿನ ಸುತ್ತಲೂ ಹಚ್ಚಿಕೊಂಡು ಮಲಗಿದರೆ ಕಣ್ಣಿನ ಕೆಳಗಿನ ಕಪ್ಪು ವರ್ತುಲ ಕಡಿಮೆಯಾಗುತ್ತಾ ಹೋಗುತ್ತದೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ