ಬೀಸಿಗೆಕಾಲದಲ್ಲಿ ಕಲ್ಲಂಗಡಿ ಹಣ್ಣು ದೇಹಕ್ಕೆ ಮನೆಮದ್ದಿನಂತೆ ಕೆಲಸ ಮಾಡುತ್ತದೆ.

ಬೇಸಿಗೆಯ ಬಾಯಾರಿಕೆ ನೀಗಿಸಲು ಹೆಸರಾಗಿದ್ದ ಕಲ್ಲಂಗಡಿ ಹಣ್ಣು ಹೃದಯ ಸಂಬಂಧಿ ಕಾಯಿಲೆಗಳನ್ನೂ ದೂರ ಇಡುವುದರ ಜೊತೆಗೆ ದೇಹದ ತೂಕ ಮತ್ತು ಕೊಬ್ಬನ್ನೂ ಕಡಿಮೆ ಮಾಡುತ್ತದೆ. ಅನೇಕ ಪ್ರಯೋಗಗಳ ನಂತರ ಇದು ಸಾಬೀತಾಗಿದೆ ಎಂದು ವೈದ್ಯ ಲೋಕ ಧೃಡೀಕರಿಸಿದೆ.

ಪ್ರತಿದಿನ ಕಲ್ಲಂಗಡಿ ಹಣ್ಣು ಸೇವಿಸುವುದರಿಂದ ಕೊಬ್ಬು ಕಡಿಮೆಯಾಗಿ, ಹೃದಯಾಘಾತ, ಅಧಿಕ ರಕ್ತದೊತ್ತಡ ಮೊದಲಾದ ಹೃದಯ ಸಂಬಂಧಿ ಕಾಯಿಲೆಗಳು ಬರುವುದನ್ನು ನಿಯಂತ್ರಿಸುತ್ತದೆ ಎಂದು ಅಮೆರಿಕದ ಪುರ್ಡ್ಯು ವಿವಿ ನಡೆಸಿದ ಸಂಶೋಧನೆ ತಿಳಿಸಿದೆ.

ಕಲ್ಲಂಗಡಿ ಹಣ್ಣಿನ ರಸ ಕುಡಿಯುವ ಬದಲು ಹೋಳುಗಳ ರೂಪದಲ್ಲಿ ಸೇವಿಸುವುದು ಹೆಚ್ಚು ಪರಿಣಾಮಕಾರಿ. ಅಲ್ಲದೇ ರಕ್ತದೊತ್ತಡವನ್ನು ಇದು ಕೂಡಲೇ ಶಮನ ಮಾಡುವಂತಹ ಗುಣವನ್ನು ಹೊಂದಿದೆ. ನೀರಿಗಿಂತ ಈ ಹಣ್ಣು ಹೆಚ್ಚು ಪರಿಣಾಮಕಾರಿ ಎನ್ನಲಾಗಿದೆ.

ಸಂಶೋಧನೆಗೆ ಒಂದಷ್ಟು ಜನರನ್ನು ಎರಡು ಗುಂಪುಗಳಾಗಿ ವಿಂಗಡಿಸಿ, ಕೆಲವು ತಿಂಗಳಕಾಲ ಒಂದು ಗುಂಪಿಗೆ ನೀರನ್ನೂ, ಇನ್ನೊಂದು ಗುಂಪಿಗೆ ಕಲ್ಲಂಗಡಿ ರಸವನ್ನು ಸೇವಿಸಲು ಕೊಡಲಾಯಿತು. ಕಲ್ಲಂಗಡಿ ರಸ ಸೇವಿಸಿದ ಗುಂಪಿನವರ ದೇಹಸ್ಥಿತಿ, ನೀರು ಸೇವಿಸಿದವರಿಗಿಂತ ಶೇ 50 ರಷ್ಟು ಸಮತೋಲನ ಕಾಯ್ದುಕೊಂಡಿತ್ತು  ಎಂದು ತಮ್ಮ ಸಂಶೋಧನೆ ಕುರಿತು ವಿವರಿಸುತ್ತಾರೆ ಡಾ. ಶುಬಿನ್ ಶಾಹ ಅವರು ತಿಳಿಸಿದ್ದಾರೆ.

ಇತೀಚೆಗೆ ಮಾರುಕಟ್ಟೆಯಲ್ಲಿ ಸಿಗುವ ಕಲ್ಲಂಗಡಿ ಅಂದ ಚಂದ ಹೆಚ್ಚಿಸಲು ನಾನಾ ವಿಧ ವಿಧವಾದ ರಾಸಾಯನಿಕ ಇಂಜೆಕ್ಷನ್ ಚುಚ್ಚಿ ಬಣ್ಣ ಬದಲು ಮಾಡುವ ಜಾಲ ಹೆಚ್ಚಾಗಿದೆ, ಹಣ್ಣು ಖರೀದಿಸುವಾಗ ಮಾಲ್ ಗಳನ್ನೂ ಬಿಟ್ಟು ಸಣ್ಣ ಪುಟ್ಟ ರೈತರ ಬಳಿ ಖರೀದಿಸಿ ನೈಸರ್ಗಿಕವಾದ ಹಣ್ಣು ನಿಮಗೆ ಸಿಗಲಿ ಎಂಬುದು ನಮ್ಮ ಮನವಿ. ಒಟ್ಟಾರೆ ಕಲ್ಲಂಗಡಿಯಲ್ಲಿನ ಸಿಟ್ರುಲಿನ್ ಅಂಶ ದೇಹ ಸಮಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ ಎನ್ನುತ್ತದೆ ನೂತನ ಸಂಶೋಧನೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ