ನಾವು ದೇವರನ್ನು ಹೇಗೆ ನಂಬುತ್ತೇವೆ ಹಾಗೆಯೇ ದೆವ್ವಗಳು. ಭೂತಗಳು ಸಹ ಇದೆ ಎಂದು ನಂಬುತ್ತೇವೆ. ಕೆಲವರು ಯಾವುದನ್ನೂ ನಂಬೋದಿಲ್ಲ ಭೂತ ದೆವ್ವಗಳು ಇದೆಲ್ಲ ಕಟ್ಟು ಕಥೆ ಎಂದು ವಾದ ಮಾಡುತ್ತಾ ಇರುತ್ತಾರೆ. ಯಾವಾಗ ಅವರ ಸ್ವಂತ ಅನುಭವಕ್ಕೆ ಬರುತ್ತದೆಯೋ ಆ ಸಮಸ್ಯೆ ಎಂದು ಎಂಬುದು ಅವರಿಗೆ ಅರ್ಥ ಆಗುತ್ತದೆ. ಆದರೆ ಈ ದುಷ್ಟ ಶಕ್ತಿಗಳಿಂದ ಬರಿ ತೊಂದರೆಗಳು ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲ ಇದರಿಂದ ಬರಿ ಕಷ್ಟಗಳನ್ನು ಅನುಭವಿಸುತ್ತಲೇ ಇರುತ್ತೇವೆ ಹಾಗಾಗಿ ಈ ದುಸ್ತಶಕ್ತಿಗಳು ನಮ್ಮ ಬಳಿ ಬರದೆ ಇರಲಿ ಎಂದು ತಾಯಿತ ಕೆಟ್ಟಿಕೊಳ್ಳುತ್ತೇವೆ. ದೇವರ ಫೋಟೋಗಳನ್ನು ಇಟ್ಟುಕೊಳ್ಳುತ್ತೇವೆ. ಆದರೆ ದುಷ್ಟಶಕ್ತಿಗಳ ಕಾಟಕ್ಕೆ ಸಿಗದೆ ಇರಬೇಕೆಂದರೆ ಇವಿಷ್ಟೇ ಅಲ್ಲ, ಇನ್ನೂ ಕೆಲವು ಕೆಲಸಗಳನ್ನು ಮಾಡಬೇಕು ಇವುಗಳನ್ನು ಮಾಡಿದರೆ ಯಾವುದೇ ದುಷ್ಟಶಕ್ತಿಗಳು ನಮ್ಮ ಹತ್ತಿರ ಸಹ ಬರುವುದಿಲ್ಲ ಹಾಗಾದ್ರೆ ಅವುಗಳು ಏನು ನೋಡೋಣ ಬನ್ನಿ.

ಮನೆಯ ಮುಖ್ಯ ದ್ವಾರದ ಹೊಸ್ತಿಲಿಗೆ ನಿತ್ಯ ಅರಿಶಿನ ಕುಂಕುಮ ಹೂ ಹಚ್ಚಿ ಪೂಜೆ ಮಾಡಿದರೆ ಮನೆಗೆ ರಕ್ಷಾ ಕವಚ ಇದ್ದಂತೆ ಪಾಸಿಟಿವ್ ಎನರ್ಜಿ ಹೆಚ್ಚು ಆಗಿ ದುಷ್ಟ ಶಕ್ತಿಗಳು ಬರುವುದಿಲ್ಲ. ತುಳಸಿ ಎಲೆಯ ರಸವನ್ನು ತೆಗೆದುಕೊಂಡು ಅದನ್ನು ಶುದ್ಧವಾದ ನೀರಿನಲ್ಲಿ ಕಲೆಸಬೇಕು. ಆ ಬಳಿಕ ದೇವರನ್ನು ಪ್ರಾರ್ಥಿಸಿ ಆ ದ್ರವವನ್ನು ಮನೆಯಲ್ಲಿ ಚೆಲ್ಲಬೇಕು. ಇದರಿಂದ ದುಷ್ಟ ಶಕ್ತಿಗಳು ಬರದಂತೆ ಇರುತ್ತವೆ.

ವರ್ಷಕ್ಕೊಮ್ಮೆ ಮನೆಯಲ್ಲಿ ಪಂಡಿತರ ಕೈಯಲ್ಲಿ ಯಜ್ಞ ಮಾಡಿಸಬೇಕು. ಇದರಿಂದ ಅವರು ಓದುವ ಮಂತ್ರಗಳು, ಯಜ್ಞದಿಂದ ಬರುವ ಹೊಗೆಗೆ ದುಷ್ಟಶಕ್ತಿಗಳು ಓಡಿಹೋಗುತ್ತವೆ. ಮನೆಯಲ್ಲಿ ಹೆಚ್ಚಿನ ಪಾಸಿಟಿವ್ ಎನರ್ಜಿ ತುಂಬಿರುತ್ತದೆ. ಚೆನ್ನಾಗಿ ಉರಿಯುತ್ತಿರುವ ಕೆಂಡವನ್ನು ಒಂದು ಲೋಹದ ಪ್ಲೇಟ್ ಮೇಲೆ ತೆಗೆದುಕೊಂಡು ಅದರ ಮೇಲೆ ಸ್ವಲ್ಪ ಇಂಗು ಹಾಕಬೇಕು. ಇದರಿಂದ ಹೊಗೆ ಬರುತ್ತದೆ. ಅದನ್ನು ಮನೆಯಲ್ಲೆಲ್ಲಾ ಹರಡಿಸಬೇಕು ಈ ರೀತಿ ಮಾಡಿದರೆ ದುಷ್ಟಶಕ್ತಿಗಳು ಬರಲ್ಲ. ಅಕಸ್ಮಾತ್ ನಿಮಗೆ ಗೊತಿಲ್ಲದ ಹಾಗೇ ನಿಮ್ಮ ಮನೆಯಲ್ಲಿ ಯಾವುದಾದರು ನೆಗಟಿವ್ ಎನರ್ಜಿ ಅಂದರೆ ದುಷ್ಟ ಶಕ್ತಿಗಳು ಇದ್ದರೆ ಅವುಗಳು ಕೊಡಲೇ ಕಡಿಮೆ ಆಗುತ್ತದೆ. ಮನೆಯ ಮುಖ್ಯ ದ್ವಾರಕ್ಕೆ ಸ್ವಲ್ಪ ಜೀರಿಗೆ ಪುಡಿ ಹಾಗೂ ಉಪ್ಪನ್ನು ಮಿಶ್ರಣ ಮಾಡಿ ಚೆಲ್ಲಬೇಕು. ಬಳಿಕ ಉಳಿದದ್ದನ್ನು ಬಾಗಿಲು, ಕಿಟಕಿ ಬಳಿ ಸಹ ಚೆಲ್ಲಿದರೆ ದುಷ್ಟಶಕ್ತಿಗಳು ಬರದಂತೆ ಇರುತ್ತವೆ.

ಸ್ವಲ್ಪ ಸೌಂಡ್ ಇಟ್ಟುಕೊಂಡು ದೇವರ ಹಾಗೂ ಮನಸ್ಸಿಗೆ ಸಂತೋಷ ನೀಡುವ ಸಂಗೀತವನ್ನು ಕೇಳುವುದು, ಮನೆಯೊಳಗೆ ಗಾಳಿ, ಸೂರ್ಯನ ಬೆಳಕು ಹೆಚ್ಚು ಬೀಳುವಂತೆ ನೋಡಿಕೊಳ್ಳಬೇಕು. ಯಾವಾಗಲೂ ಮನೆಯಲ್ಲಿ ಸಂತೋಷವಾಗಿರುವುದು, ಮನರಂಜನಾ ಕಾರ್ಯಕ್ರಮಗಳನ್ನು ಮನೆಯಲ್ಲಿ ಮಾಡುತ್ತಿದ್ದರೆ ಮನೆಯಲ್ಲಿ ದುಷ್ಟಶಕ್ತಿಗಳು ಇರಲ್ಲ. ಸಿಲಿಕಾ ಸ್ಫಟಿಕ, ಟೈಗರ್ ಐರನ್ ಸ್ಪಟಿಕ, ಪುಷ್ಯರಾಗ, ಗೋಮೇಧಿಕ ತದಿತರೆ ಸ್ಫಟಿಕಗಳನ್ನು, ಕಲ್ಲಿನಲ್ಲಿ ಯಾವುದಾದರೂ ಸ್ವಲ್ಪ ತೆಗೆದುಕೊಂಡು ಮನೆಯಲ್ಲಿನ ಪ್ರತಿ ಮೂಲೆ, ಪ್ರತಿ ಕೊಠಡಿಯಲ್ಲಿಡಬೇಕು. ಇದರಿಂದ ಯಾವುದೇ ರೀತಿಯ ದುಷ್ಟಶಕ್ತಿಗಳು ಹತ್ತಿರ ಸುಳಿಯಲ್ಲ. ಬೇರೆಯವರಿಗೆ ಸಹಾಯ ಮಾಡುವುದು, ದಾನ, ಧರ್ಮಗಳನ್ನು ಮಾಡುವುದು, ದೈವ ಪ್ರಾರ್ಥನೆಗಳನ್ನು ಮಾಡುವಂತಹ ಕೆಲಸಗಳನ್ನು ಮಾಡುವವರಿಗೆ ದುಷ್ಟ ಶಕ್ತಿಗಳು ಹತ್ತಿರ ಸಹ ಸುಳಿಯುವುದಿಲ್ಲ. ಇವುಗಳನ್ನು ಮಾಡಿದರೆ ಯಾವುದೇ ದುಷ್ಟ ಶಕ್ತಿಗಳು ಹತ್ತಿರ ಸಹ ಸುಳಿಯುವುದಿಲ್ಲ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ
%d bloggers like this: