ನಿಮಗೆ ಉರಿ ಮೂತ್ರ ಸಮಸ್ಯೆ ಇದ್ರೆ ಈ ಸೊಪ್ಪಿನ ಜ್ಯೂಸ್ ಕುಡಿಯಿರಿ ಸಾಕು

ಪುರುಷರಿಗಿಂತ ಮಹಿಳೆಯರಿಗೆ ಆರೋಗ್ಯ ಸಮಸ್ಯೆಗಳು ಬಹುಬೇಗ ಕಾಡುತ್ತದೆ. ಮೂತ್ರದ ಸೋಂಕು ಮುಖ್ಯವಾದದ್ದು. ಮೂತ್ರ ಪಿಂಡದ ಸಮಸ್ಯೆಯಿಂದ, ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಹಾಗೂ ಶುಚಿತ್ವ ಕಾಪಾಡಿಕೊಳ್ಳದಿದ್ದರೆ ಈ ಸಮಸ್ಯೆ ಬಹು ಬೇಗ ಕಾಡುತ್ತದೆ. ಮೂತ್ರದ ಸೋಂಕು ತಗುಲಿದಾಗ ಸಹಿಸಲಾಗದಷ್ಟು ನೋವುಂಟಾಗುವುದು, ಅಲ್ಲದೇ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕು ಎನ್ನುವ ಸಂವೇದನೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಮೂತ್ರ ಬರದೆ ಅಥವಾ ಸ್ವಲ್ಪ ಮೂತ್ರ ವಿಸರ್ಜನೆಗೊಂಡು ನೋವಿನ ಸೆಳೆತ ಕಾಣಿಸಿಕೊಳ್ಳುತ್ತದೆ.

ಕೆಲವರಿಗೆ ಇದರ ವಿಪರೀತ ಹೆಚ್ಚಾಗಿ ಮೂತ್ರದಲ್ಲಿ ರಕ್ತಸ್ರಾವ ಆಗುವ ಸಾಧ್ಯತೆಯೂ ಹೆಚ್ಚಾಗಿ ಇರುತ್ತದೆ . ಮೂತ್ರದ ಸೋಂಕು ಕಡಿಮೆ ಪ್ರಮಾಣದಲ್ಲಿ ಇದ್ದಾಗ ವಿವಿಧ ಬಗೆಯ ಪಾನೀಯ ಮತ್ತು ನೀರನ್ನು ಸೇವಿಸುವುದರಿಂದ ಗುಣಮುಖ ಹೊಂದಬಹುದು. ಆದರೆ ಆಸ್ಪತ್ರೆಗೆ ಹೋಗುವ ಮುಂಚೆ ಮೂತ್ರದ ಸೋಂಕಿಗೆ ಮನೆಯಲ್ಲೇ ತಯಾರಿಸಿಕೊಳ್ಳಬಹುದಾದ ನೈಸರ್ಗಿಕ ಚಿಕಿತ್ಸೆಯೆಂದರೆ ಪಾರ್ಸ್ಲಿ ಸೊಪ್ಪು. ಪಾರ್ಸ್ಲಿ ಮೂತ್ರದ ಸೋಂಕನ್ನು ನಿವಾರಿಸಿ, ಮೂತ್ರವರ್ಧಕದಂತೆ ಕಾರ್ಯ ನಿರ್ವಹಿಸುತ್ತದೆ.

ಮೂತ್ರ ಪಿಂಡದಲ್ಲಿ ಉತ್ಪತ್ತಿಯಾಗುವ ಸೋಡಿಯಂ ಮತ್ತು ಪೊಟ್ಯಾಸಿಯಂ ಉತ್ಪಾದನೆಯನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಮೂತ್ರದ ಬ್ಯಾಕ್ಟೀರಿಯಾಗಳು ಚದುರುವಿಕೆಗೆ ಒಳಗಾಗುತ್ತವೆ. ಮೂತ್ರದ ಸೋಂಕು ನಿವಾರಣೆಗೆ ಉತ್ತಮ ಔಷಧವೆಂದರೆ ಪಾರ್ಸ್ಲಿ ಚಹಾ. ಇದನ್ನು ಸುಲಭವಾಗಿ ಹೇಗೆ ಉಪಯೋಗಿಸುವುದು ಎನ್ನುವುದನ್ನು ತಿಳಿಯೋಣ ಬನ್ನಿ

ಬೇಕಾಗುವ ಪದಾರ್ಥಗಳು
1. ನಾಲ್ಕು ಕಪ್ ನೀರು 2. ನಾಲ್ಕು ಚಮಚ ಹೆಚ್ಚಿದ ಪಾರ್ಸ್ಲಿ ಸೊಪ್ಪುಮಾಡುವ ವಿಧಾನ  2. ಮೊದಲಿಗೆ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ, ಚೆನ್ನಾಗಿ ಕುದಿಸಿ.  3. ನೀರು ಚೆನ್ನಾಗಿ ಕುದಿಯಲಾರಂಭಿಸಿದ ಮೇಲೆ ಉರಿಯಿಂದ ಕೆಳಗಿಳಿಸಿ. 4. ಹೆಚ್ಚಿಕೊಂಡ ನಾಲ್ಕು ಚಮಚ ಪಾರ್ಸ್ಲಿ ಸೊಪ್ಪನ್ನು ಬಿಸಿ ನೀರಿಗೆ ಹಾಕಿ, 20 ನಿಮಿಷಗಳ ಕಾಲ ಮುಚ್ಚಿಸಿ. 5 . ನಂತರ ಸೊಪ್ಪನ್ನು ನೀರಿನಿಂದ ಸೋಸಿ  ಸವಿಯಿರಿ.

ಈ ಕಷಾಯ ಅಥವ ಚಹಾವನ್ನು ವಾರದಲ್ಲಿ ಕಡಿಮೆಯೆಂದರೂ ನಾಲ್ಕು ಬಾರಿ ಕುಡಿಯಬೇಕು. ಆಗ ರೋಗ ಲಕ್ಷಣವು ಕೇವಲ ಮೂರು ದಿನದಲ್ಲಿ ಗುಣವಾಗುವುದು. ರೋಗ ಲಕ್ಷಣ ಕಡಿಮೆಯಾಗಿದೆಯೆಂದು ಚಹಾ ಸೇವನೆಯನ್ನು ಬಿಡಬಾರದು, ಮುಂದುವರಿಸಬೇಕು. ಹೆಚ್ಚಿನ ಸಮಸ್ಯೆ ಇದ್ರೆ ವೈದ್ಯರ ನೆರವು ಪಡೆಯಬೇಕು.

1 thought on “ನಿಮಗೆ ಉರಿ ಮೂತ್ರ ಸಮಸ್ಯೆ ಇದ್ರೆ ಈ ಸೊಪ್ಪಿನ ಜ್ಯೂಸ್ ಕುಡಿಯಿರಿ ಸಾಕು

  1. ಪಾರ್ಸ್ಲಿ ಮೂತ್ರದ ಸೋಂಕನ್ನು ನಿವಾರಿಸಿ, ಮೂತ್ರವರ್ಧಕದಂತೆ ಕಾರ್ಯ ನಿರ್ವಹಿಸುತ್ತದೆ. Which is this leaves, where is it available

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ