ವಯಸ್ಸಿಗೆ ತಕ್ಕಂತೆ ಎಷ್ಟು ಸಮಯ ನೀವು ನಿದ್ರೆ ಮಾಡಿದ್ರೆ ಆರೋಗ್ಯಕ್ಕೆ ಒಳ್ಳೆಯದು?

ಇಂದಿನ ಕೆಲಸಗಳ ಒತ್ತಡ. ಯೋಚನೆ. ತೊಂದರೆ. ಜಾಂಜಾಟ ಇವುಗಳ ಮದ್ಯ ಮನುಷ್ಯನ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತಿ ಮುಖ್ಯವಾಗಿ ಬೇಕಾಗಿರುವುದು ನಿದ್ರೆ . ಈ ನಿದ್ರೆ ಮಾಡದ ಮನುಷ್ಯ ಯಾವುದೇ ಕೆಲಸಗಳನ್ನು ಮಾಡಲು ಆಸಕ್ತಿ ಇರುವುದಿಲ್ಲ. ಮನುಷ್ಯನಿಗೆ ಆಹಾರ. ಗಾಳಿ. ನೀರು. ಎಷ್ಟು ಅವಶ್ಯಕತೆ ಇದಿಯೋ ನಿದ್ರೆ ಸಹ ಅಷ್ಟೇ ಅವಶ್ಯಕತೆ ಆಗಿದೆ. ನಾವು ನಮ್ಮ ಒತ್ತಡದ  ಜೀವನದಲ್ಲಿ ಸರಿಯಾಗಿ ನಿದ್ರೆ ಮಾಡ್ತಾ ಇಲ್ಲ. ನಮ್ಮ ವಯಸ್ಸಿಗೆ ತಕ್ಕಂತೆ ಎಷ್ಟು ಸಮಯ ನಿದ್ರೆ ಮಾಡ್ಬೇಕು ಅದು ಸಹ ಎಷ್ಟೋ ಜನಕ್ಕೆ ತಿಳಿದಿಲ್ಲ. ನಿಮಗೆ ಗೊತ್ತಿರಲಿ ನಿದ್ರೆ ಹೆಚ್ಚಾದರು ಸಮಸ್ಯೆ ಉಂಟು ಮಾಡುತ್ತೆ ಹಾಗೆಯೇ ನಿದ್ರೆ ಕಡಿಮೆ ಆದರು ಸಮಸ್ಯೆ ತಪ್ಪಿದಲ್ಲ ಅದಕ್ಕಾಗಿ ನಿಮ್ಮ ವಯಸ್ಸಿಗೆ ತಕ್ಕಂತೆ ನಿರ್ದಿಷ್ಟ ಸಮಯ ನಿದ್ರೆ ಮಾಡಿ.

ನಿದ್ದೆ ಮಾಡಬೇಕು ನಿಜ ಆದರೆ ಹಾಗೆಂದು ಎಲ್ಲ ಸಮಯದಲ್ಲೂ ನಿದ್ದೆ ಮಾಡುವುದಲ್ಲ. ತಮ್ಮ ವಯಸ್ಸಿಗೆ ಎಷ್ಟು ನಿದ್ದೆ ಬೇಕೋ ಅಷ್ಟು ಮಾತ್ರ ಮಾಡಬೇಕು. ಅಗದರೇ ಯಾವ ವಯಸ್ಸಿಗೆ ಎಷ್ಟು ನಿದ್ದೆ ಮಾಡಬೇಕು ತಿಳಿದುಕೊಳ್ಳೋಣ ಬನ್ನಿ.

ನವಜಾತ ಶಿಶುವಿಂದ ಮೂರು ತಿಂಗಳವರೆಗೂ ದಿನಕ್ಕೆ 14 ರಿಂದ 17 ಗಂಟೆಗಳ ಕಾಲ ನಿದ್ದೆ ಅತ್ಯವಶ್ಯಕವಾಗಿದೆ.

4 ರಿಂದ 11 ತಿಂಗಳ ಮಕ್ಕಳು 12 ರಿಂದ 15 ಗಂಟೆಗಳ ಕಾಲ ನಿದ್ದೆ ಮಾಡಬೇಕು.

1 ರಿಂದ 2 ವರ್ಷದ ಒಳಗಿನ ಮಕ್ಕಳು 11 ರಿಂದ 14 ಗಂಟೆಗಳ ಕಾಲ ನಿದ್ದೆ ಮಾಡಬೇಕು.

3 ರಿಂದ 5 ವರ್ಷದ ಮಕ್ಕಳು 10 ರಿಂದ 14 ಗಂಟೆಗಳ ಕಾಲ ನಿದ್ದೆಯ ಅವಶ್ಯಕತೆ ಇದೆ.

6 ರಿಂದ 13 ವರ್ಷ ಒಳಗಿನ ಮಕ್ಕಳು 9 ರಿಂದ 11 ಗಂಟೆ ನಿದ್ದೆ ಬೇಕು.

14 ರಿಂದ 17 ವರ್ಷದ ಮಕ್ಕಳಿಗೆ 8 ರಿಂದ 10 ಗಂಟೆ ನಿದ್ದೆ ಮಾಡಬೇಕು.

18 ರಿಂದ 25 ವರ್ಷದ ಯುವಕ ಯುವತಿಯರಿಗೆ 7 ರಿಂದ 9 ಗಂಟೆಗಳ ಕಾಲ ನಿದ್ದೆ ಮಾಡಬೇಕು.

26 ರಿಂದ 64 ವರ್ಷ ವಯಸ್ಸಿನವರಿಗೆ 7 ರಿಂದ 9 ಗಂಟೆ ನಿದ್ದೆ ಬೇಕು.

65 ವರ್ಷ ಮೇಲ್ಪಟ್ಟವರು ದಿನಕ್ಕೆ 7 ರಿಂದ 8 ಗಂಟೆ ಕಾಲ ನಿದ್ದೆ ಮಾಡಬೇಕು.

ಈ ವಯಸ್ಸಿಗೆ ತಕ್ಕ ನಿದ್ದೆಯ ಕಾಲಾವಧಿಯನ್ನು ಎಲ್ಲರೂ ಅನುಸರಿಸಿದರೆ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು. ತಮ್ಮ ಮನಸ್ಸಿಗೆ. ದೇಹಕ್ಕೆ ವಿಶ್ರಾಂತಿಯನ್ನು ಕೊಡಬಹುದು.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ