ಸೊಳ್ಳೆಗಳು ಎಂದರೆ ಎಲ್ಲರಿಗು ಕಿರಿ ಕಿರಿ ಆಗುತ್ತದೆ. ಇದು ರೋಗ ತರುವ ಕೀಟ. ಇದರಿಂದ ಮಹಾ ಮಾರಿಯಂತ ಡೆಂಗೀ ಜ್ವರವನ್ನೇ ತರಿಸುತ್ತದೆ. ಆದ್ದರಿಂದ ಸೊಳ್ಳೆಗಳ ಬಗ್ಗೆ ಹೆಚ್ಚು ಹುಷಾರಾಗಿರಬೇಕು. ಮಳೆಗಾಲದಲ್ಲಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿರುತ್ತದೆ. ನಿಂತ ನೀರು, ಚರಂಡಿ ನೀರು, ಮನೆ ಸುತ್ತ ಬೆಳೆಯುವ ಗಿಡಗಳು, ಕೆಸರು, ಇವುಗಳಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚಾಗುತ್ತದೆ. ಆದರಿಂದ ಮಳೆಗಾಲದಲ್ಲಿ ನಾವೂ ಮಾಮೂಲಿಗಿಂತ ಹೆಚ್ಚು ಹುಷಾರಾಗಿರಬೇಕು. ಹಾಗೆಂದು ಬರೀ ಮಳೆಕಾಲ ಮಾತ್ರ ಅಲ್ಲದೆ ಈಗ ಮಾಮೂಲಿ ದಿನದಲ್ಲೂ ಈ ಸೊಳ್ಳೆಗಳ ಕಾಟ ಅತೀ ಆಗಿದೆ. ಸೊಳ್ಳೆಗಳನ್ನು ಹೊಡೆದೊಡಿಸಲು ಮಾರ್ಕೆಟ್ ನಲ್ಲಿ ತುಂಬ ರೀತಿಯ ರಾಸಾಯನಿಕಗಳು ದೊರೆಯುತ್ತದೆ. ಆದರೆ ಅವುಗಳು ಉಂಟುಮಾಡುವ ಅಡ್ಡ ಪರಿಣಾಮಗಳು ಹೆಚ್ಚು. ಅವುಗಳಿಂದ ತಲೆನೋವು, ಉಸಿರಾಟದ ತೊಂದರೆ ಅಥವ ಇನ್ನಿತರ ಕಾಯಿಲೆಗಳು ಬರಬಹುದು. ಆದ್ದರಿಂದ ನೈಸರ್ಗಿಕವಾಗಿ ಮನೆಯಲ್ಲೇ ಸಿಗುವ ವಸ್ತುಗಳಿಂದ ಹೇಗೆ ಸೊಳ್ಳೆಗಳಿಂದ ಮುಕ್ತಿ ಪಡೆಯಬಹುದು ಎಂದು ನೋಡೋಣ ಬನ್ನಿ.
ಹೊರಗಡೆ ಸಿಗುವ ರಾಸಾಯನಿಕಗಳಿಗಿಂತ ಹೆಚ್ಚು ಪರಿಣಾಮ ಬಿರುವುದು ಎಂದರೆ ಅದು ಬೇವಿನ ಸೊಪ್ಪು. ಇದರಿಂದ ತಯಾರಾಗುವ ಬೇವಿನ ಎಣ್ಣೆಯಿಂದ ಸುಲಭವಾಗಿ ಸೂಳ್ಳೇಯನ್ನು ಹೋಡಿಸಬಹುದು. ಬೇವಿನ ಎಣ್ಣೆಯನ್ನು ಮೈ ಕೈಗೆ ಹಚ್ಚಿಕೊಳ್ಳಿ, ಇದರಿಂದ ಬರುವ ವಾಸನೆಗೆ ಸೊಳ್ಳೆಗಳು ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ. ಕರಿ ಮೆಣಸು, ಕರಿ ಮೆಣಸಿನಿಂದ ಬರುವ ಘಾಟು ಸೊಳ್ಳೆಗಳನ್ನು ಹೋಡಿಸುವಲ್ಲಿ ಅತ್ಯಂತ ಹೆಚ್ಚು ಪರಿಣಾಮಕಾರಿ, ಇದರಿಂದ ಬರುವ ಘಾಟಿಗೆ ಸೊಳ್ಳೆಗಳು ದೂರ ಹೋಗುತ್ತವೆ. ನೀಲಗಿರಿ ಎಣ್ಣೆಯನ್ನು ಮೈ ಕೈಗೆ ಹಚ್ಚಿ ಕೊಳ್ಳುವುದರಿಂದ ಸೊಳ್ಳೆಗಳಿಂದ ಮುಕ್ತಿ ಹೊಂದಬಹುದು. ಆದರೆ ಚಿಕ್ಕ ಮಕ್ಕಳಿಂದ ನೀಲಗಿರಿ ಎಣ್ಣೆಯನ್ನು ದೂರವಿಡಿ. ಮನೆಯ ಕಿಟಕಿ ಬಾಗಿಲುಗಳನ್ನು ತೆರೆದು 10-15 ನಿಮಿಷಗಳ ಕಾಲ ಕರ್ಪೂರವನ್ನು ಹಚ್ಚಿ, ಇದರಿಂದ ಬರುವ ವಾಸನೆಗೆ ಸೊಳ್ಳೆಗಳು ಆಚೆ ಹೋಗುತ್ತವೆ. ನಂತರ ಕಿಟಕಿ ಬಾಗಿಲುಗಳನ್ನು ಮುಚ್ಚಿ ಹಾಗು ಸೊಳ್ಳೆಗಳಿಂದ ಮುಕ್ತಿ ಹೊಂದಿರಿ.
ನಿಂಬೆ ಹಣ್ಣಿನಲ್ಲಿ ಸೊಳ್ಳೆಗಳನ್ನು ಹೊಡಿಸುವ ಶಕ್ತಿ ಇದೆ. ನಿಂಬೆ ಹಣ್ಣಿನ ರಸಕ್ಕೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ಮೈ ಕೈಗೆ ಹಚ್ಚಿಕೊಳ್ಳಿ, ಇದರಿಂದ ಸೊಳ್ಳೆಗಳು ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ. ಬೆಳ್ಳುಳ್ಳಿ ವಾಸನೆಗು ಸೊಳ್ಳೆಗಳಿಗೂ ದೂರ ದೂರ. ಯಾಕೆಂದರೆ ಸೊಳ್ಳೆಗಳಿಗೆ ಬೆಳ್ಳುಳ್ಳಿ ವಾಸನೆ ಆಗುವುದಿಲ್ಲ. ಆದರಿಂದ ಬೆಳ್ಳುಳ್ಳಿ ಯನ್ನು ಚೆನ್ನಾಗಿ ಜಜ್ಜಿ ನೀರಿನಲ್ಲಿ ಮಿಶ್ರಣ ಮಾಡಿ ಚೆನ್ನಾಗಿ ಕುದಿಸಿ. ಅದು ತಣ್ಣಗಾದ ಮೇಲೆ ಅದನ್ನು ಮನೆಯ ಪೂರ್ತಿ ಸಿಂಪಡಿಸಿ. ಇದರಿಂದ ಸೊಳ್ಳೆಗಳಿಂದ ಮುಕ್ತಿ ಪಡೆಯಬಹುದು. ತುಳಸಿ ರಸದಿಂದ ಕೂಡ ಸೊಳ್ಳೆಗಳನ್ನು ಹೋಡಿಸಬಹುದು. ತುಳಸಿ ರಸವನ್ನು ನೀರಿನಲ್ಲಿ ಮಿಶ್ರಣ ಮಾಡಿ ಅದನ್ನು ಮೈ ಕೈಗೆ ಹಚ್ಚಿ ಕೊಳ್ಳುವುದರಿಂದ ಸೊಳ್ಳೆಗಳು ದೂರ ಇರುತ್ತವೆ. ಪುದಿನ ಸೊಪ್ಪಿನ ವಾಸನೆಗೆ ಸೊಳ್ಳೆಗಳು ಬರುವುದಿಲ್ಲ. ಪುದಿನ ಸೊಪ್ಪನ್ನು ಪಾಟ್ ಗಳಲ್ಲಿ ಬೆಳೆದು ಅವುಗಳನ್ನು ಕಿಟಕಿಯ ಬಳಿ ಇಡಿ, ಇದರಿಂದ ಸೊಳ್ಳೆಗಳು ಮನೆ ಒಳಗಡೆ ಪ್ರವೇಶಿಸುವುದಿಲ್ಲ.
ಹೊಡಿಸುವ, ಹೋಡಿಸಬಹುದು, ಹೋಡಿಸಬಹುದು… ಏನಿದೆಲ್ಲಾ?
ಅಂದದ, ಚೆಂದದ ಕನ್ನಡವನ್ನು ಹೀಗೆ ಬರೆದು ಹಾಳುಮಾಡಬೇಡಿ … “ಓಡಿಸು” ಎಂದು ತಿದ್ದೀರಿ ದಯವಿಟ್ಟು!