ಇತ್ತೀಚೆಗೆ ಜನಸಂಖ್ಯೆ ಎಂಬುದು ಹೆಚ್ಚುತ್ತಲೇ ಇದೆ ಈ ಜನಸಂಖ್ಯೆ ಹೆಚ್ಚುವ ಹಾಗೆ ವಾಹನಗಳ ಸಂಖ್ಯೆಯು ಹೆಚ್ಚುತ್ತಿದೆ ಒಂದು ಮನೆಯಲ್ಲಿ ಎಷ್ಟು ಮಂದಿ ಇರುತ್ತಾರೋ ಅಷ್ಟು ಮಂದಿಗಳ ಬಳಿಯಲ್ಲೂ ಒಂದು ಒಂದು ವಾಹನ ಇರುತ್ತದೆ. ಮಹಾ ನಗರಗಳಲ್ಲಿ ಅಂತೂ ಗಾಡಿ ನಿಲ್ಲಿಸಲು ಸಹ ಸ್ಥಳ ಇರೋದಿಲ್ಲ ಅಷ್ಟರ ಮಟ್ಟಿಗೆ ವಾಹನಗಳ ಸಂಖ್ಯೆ ಮಿತಿ ಮೀರಿದೆ. ಹೀಗಿರುವ ವಾಹನಗಳನ್ನು ನಿಲ್ಲಿಸಲು ಸರಿಯಾದ ಜಾಗ ಇರಬೇಕು ಹೊರಗಡೆ ಹೋದಾಗ ವಾಹನಗಳನ್ನು ನಿಲ್ಲಿಸಲು ಸರಿಯಾದ ಸ್ಥಳ ಇಲ್ಲದೆ ನೋ ಪಾರ್ಕಿಂಗ್ ಎಂದು ಹಾಕಿರುವ ಜಾಗದಲ್ಲೇ ವಾಹನಗಳನ್ನು ನಿಲ್ಲಿಸಿ ಹೋಗುತ್ತಾರೆ ಆದರೆ ಪೊಲೀಸರು ಈ ವಾಹನಗಳನ್ನು ತೆಗೆದುಕೊಂಡು ಹೋಗಿ ದಂಡ ಕಟ್ಟಿಸಿಕೊಳ್ಳುತ್ತಾರೆ.

ಆದರೆ ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿದರು ಪೊಲೀಸರು ಬಂದು ತಕ್ಷಣ ಎತ್ತಿಕೊಂಡು ಹೋಗುವ ಹಾಗಿಲ್ಲ ಪೊಲೀಸರು ಯಾವುದೇ ವಾಹನಗಳನ್ನು ಎತ್ತಿಕೊಂಡು ಹೋಗುವ ಮೊದಲು ಕೆಲವು ನಿಯಮಗಳನ್ನು ಪಾಲಿಸಬೇಕು ಹಾಗಾದರೆ ಆ ನಿಯಮಗಳು ಯಾವುವು ಎಂದು ತಿಳಿಯೋಣ ಬನ್ನಿ.

ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿರುವ ವಾಹನಗಳನ್ನು ಪೊಲೀಸರು ಎತ್ತುಕೊಂಡು ಹೋಗುವ ಮೊದಲು ಆ ಗಾಡಿಯ ನಂಬರ್ ಅನ್ನು ಮೈಕಿನಲ್ಲಿ ಜೋರಾಗಿ ಕೂಗಿ ಹೇಳಬೇಕು. ಜೊತೆಗೆ ಆ ಜಾಗದಲ್ಲಿ 5 ನಿಮಿಷ ಕಾಯಬೇಕು. ಸಂಚಾರಿ ಪೊಲೀಸರು ತಮ್ಮ ಟೂಯಿಂಗ್ ವಾಹನದಲ್ಲಿ ಮೈಕ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು. ಅದರಲ್ಲಿ ಕೂಗಿ ಜೋರಾಗಿ ಹೇಳಬೇಕು. ನೋ ಪಾರ್ಕಿಂಗ್ ಅಲ್ಲಿ ನಿಲ್ಲಿಸಿರುವ ಎಲ್ಲ ರೀತಿಯ ವಾಹನಗಳ ಮೇಲೆ ಒಂದೇ ರೀತಿಯ ದಂಡವನ್ನು ಕಟ್ಟುವ ಹಾಗಿಲ್ಲ.

ದ್ವಿ ಚಕ್ರ ವಾಹನಕ್ಕೆ ಆದರೆ 750 ರೂ ಗಳು ಹಾಗು ಕಾರ್ ಗಳಿಗೆ ಆದರೆ 1100 ರೂ ಗಳು ದಂಡ ಕಟ್ಟಬೇಕಾಗುತ್ತದೆ ಇದು ಅಲ್ಲಿನ ಸ್ಥಳೀಯ ಜಿಲ್ಲೆ ಅಥವ ಸಿಟಿ ಅನುಗುಣವಾಗಿ ದಂಡ ಇರುತ್ತದೆ. ಹೀಗೆ ಕಟ್ಟುವ ದುಡ್ಡಲ್ಲಿ ಕೇವಲ 100 ರೂ ಮಾತ್ರ ನೋ ಪಾರ್ಕಿಂಗ್ ದಂಡವಾಗಿರುತ್ತದೆ. ಮಿಕ್ಕ ಹಣವೆಲ್ಲ ಟೂಯಿಂಗ್ ಶುಲ್ಕವಾಗಿರುತ್ತದೆ. ನೋ ಪಾರ್ಕಿಂಗ್ ಅಲ್ಲಿ ನಿಲ್ಲಿಸಿರುವ ವಾಹನದ ಮಾಲೀಕರು ಪೊಲೀಸರು ಕೂಗಿದ ತಕ್ಷಣ ಬರಬೇಕು ಅವರು ಅಲ್ಲಿಗೆ ಬರದೆ ಇದ್ದಾಗ, ಪೋಲಿಸ್ ಆ ವಾಹನವನ್ನು ತೆಗೆದುಕೊಂಡು ಹೋಗಬಹುದು.

5 ನಿಮಿಷದ ಒಳಗೆ ಆ ವಾಹನದ ಮಾಲೀಕರು ಬಂದರೆ ಅವರ ಬಳಿ ಅಲ್ಲಿಯೇ 100 ರೂ ದಂಡ ಕಟ್ಟಿಸಿಕೊಂಡು ವಾಹನವನ್ನು ನೀಡಬೇಕು ಹಾಗು ಯಾವುದೇ ಟೂಯಿಂಗ್ ಶುಲ್ಕ ಪಾವತಿಸಿ ಕೊಳ್ಳುವಂತಿಲ್ಲ. ಇಷ್ಟು ನಿಯಮಗಳನ್ನು ಪಾಲಿಸದೆ ಇದ್ದರೆ ಪೊಲೀಸ್ ಮೇಲೆ ಪೊಲೀಸ್ ಕಮಿಷನರ್ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳಬಹುದು. ನಾವು ಟ್ರಾಫಿಕ್ ಬಗ್ಗೆ ನೀಡಿರುವ ಉಪಯುಕ್ತ ಮಾಹಿತಿ ಶೇರ್ ಮಾಡಿ. ನಮ್ಮ ವೆಬ್ಸೈಟ್ ಎಲ್ಲ ಬರಹಗಳಿಗೆ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡುವ ಪ್ರಯತ್ನ ಮಾಡಿದ್ರೆ ಅಂತಹ ಜನರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ