ಬದನೆಕಾಯಿ ಪ್ರಯೋಜನಗಳು.

ಅಡುಗೆ ರುಚಿ ಹೆಚ್ಚಿಸುವ, ಹಾಗೂ ಭಾರತದಲ್ಲಿ ಕಾಯಿಪಲ್ಯಗಳ ರಾಜ ಎಂದು ಹೆಸರುವಾಸಿಯಾಗಿರುವ ಬದನೆಕಾಯಿ ಯಾರಿಗೆ ಇಷ್ಟ ಇಲ್ಲ ಹೇಳಿ ನೆನಪಿಸಿಕೊಂಡರೆ ಸಾಕು ಬಾಯಲ್ಲಿ ನೀರು ಬರುತ್ತೆ ಅಲ್ವಾ..? ಅದೇ ಬದನೆಕಾಯಿಯಲ್ಲಿ ಇರುವ ಆರೋಗ್ಯವರ್ಧಕ ಗುಣಗಳ ಬಗ್ಗೆ ಗೊತ್ತಿದಿಯ?

ಹೆಚ್ಚು ವಿಟಮಿನ್ ಸಿ. ವಿಟಮಿನ್ ಬಿ. ಥಯಾಮಿನ್. ನಿಯಾಸಿಸ್. ಮೆಗ್ನಿಸಿಯಂ. ಫಾಸ್ಪರಸ್. ಕಾಫರ್. ಫೈಬರ್. ಪೊಟ್ಯಾಸಿಯಂ. ಮ್ಯಾಂಗನೀಸ್ ಗಳಿಂದ ಆವೃತವಾಗಿರುವ ಬದನೆಕಾಯಿ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ.
ಬದನೆಕಾಯಿ ರೋಗ ನಿರೋಧಕ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಮತ್ತು ಶರೀರದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಬದನೆಕಾಯಿಯಲ್ಲಿ ಆಟೋ ಸಯನಿನ್ ಎಂಬ ಪದಾರ್ಥವಿರುವುದರಿಂದ ದೇಹದ ನಿಶಕ್ತಿಯನ್ನು ದೂರ ಮಾಡುತ್ತದೆ.

ಬದನೆಕಾಯಿಯಲ್ಲಿರುವ ನೀರು ಮತ್ತು ಪೊಟ್ಯಾಸಿಯಂ ರಕ್ತದಲ್ಲಿ ಸೇರಿ ಕೊಬ್ಬನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಹಸಿವನ್ನು ನಿಯಂತ್ರಿಸಿ ತೂಕ ಕಡಿಮೆ ಮಾಡುತ್ತದೆ.

ಬದನೆಕಾಯಿಯಲ್ಲಿ ನಿಕೋಟಿನ್ ಎಂಬ ಪದಾರ್ಥವಿದೆ ಇದು ಧೂಮಪಾನದ ಅಭ್ಯಾಸವನ್ನು ನಿಯಂತ್ರಿಸುತ್ತದೆ. ಹಾಗೂ ಹೃದಯ, ರಕ್ತನಾಲಗಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಯುತ್ತದೆ.

ಬದನೆಕಾಯಿಯಲ್ಲಿ ವಿಟಮಿನ್ ಸಿ ಅಂಶವಿದ್ದು ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಬದನೆಕಾಯಿಯಲ್ಲಿರುವ ಕೆಲವು ಕಿಣ್ವಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ತ್ವಚೆಯ ಹೊಳಪಿಗೆ ಅಗತ್ಯವಿರುವ ಖನಿಜ. ಜೀವಸತ್ವಗಳು. ಮತ್ತು ನಾರಿನಾಂಶ ಬದನೆಕಾಯಿಯಲ್ಲಿ ಇದ್ದು ಇದು ತ್ವಚೆಯನ್ನು ಉತ್ತಮ ಪಡಿಸುತ್ತದೆ.

ಬದನೆಕಾಯಿಯನ್ನು ಬೇಯಿಸಿ ಸ್ವಲ್ಪ ಬೆಲ್ಲ ಸೇರಿಸಿ ಬೆಳಗ್ಗೆ ಸಲ ಸೇವಿಸುತ್ತಾ ಬಂದರೆ ಮುಲವ್ಯಾದಿ ಕಡಿಮೆಯಾಗುತ್ತದೆ.

ಎಳೆಯ ಬದನೆಕಾಯಿಯನ್ನು ಹಸುವಿನ ತುಪ್ಪದಲ್ಲಿ ಹುರಿದು ಸೇವಿಸಿದರೆ ಕಣ್ಣಿನ ತೊಂದರೆ ದೂರವಾಗುತ್ತದೆ.

ಬದನೆಕಾಯಿ ಸ್ಮರಣ ಶಕ್ತಿಯನ್ನು ಹೆಚ್ಚಿಸುವ ತರಕಾರಿಯಾಗಿದೆ. ಹಾಗೂ ದೇಹದ ಕೆಂಪು ರಕ್ತಕಣಗಳನ್ನು ವೃದ್ಧಿಸುತ್ತದೆ.

ಮಲಬದ್ಧತೆ. ಭೇದಿಯಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ರೋಗಗಳನ್ನು ಬಾರದಂತೆ ತಡೆಯುತ್ತದೆ.

ಬದನೆಯಲ್ಲಿ ನೀರನ ಅಂಶ ಅಧಿಕವಾಗಿದೆ. ಇದು ತ್ವಚೆಯನ್ನು ಅಗತ್ಯದಷ್ಟು ತೇವಾಂಶಯುಕ್ತವಾಗಿಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಶುಷ್ಕ ತ್ವಚೆಯಿಂದ ಮುಕ್ತಿ ಹೊಂದಬಹುದು ಮತ್ತು ನಿಮ್ಮ ದೇಹದ ಸಹವರ್ತಿಯಂತೆ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ತಿಳಿದಿರಲ್ಲ ಬದನೆಕಾಯಿಯಲ್ಲಿ ಎಷ್ಟೆಲ್ಲ ಉಪಯೋಗ ಇದೇ ಎಂದು ಒಮ್ಮೆ ನೀವು ಪ್ರಯತ್ನಿಸಿ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ