ಬೇಸಿಗೆ ಬಂತು ಅಂತ ಸಿಕ್ಕ ಸಿಕ್ಕ  ತಂಪು ಪಾನೀಯಗಳು ಕುಡಿದರೆ ಆರೋಗ್ಯ ಹಾಳಾಗಿ ಹೋಗುತ್ತೆ ಎಚ್ಚರಿಕೆ, ನಿಮಗೆ ಗೊತ್ತಿರುವ ಹಾಗೇ ಕೆಲವು ವಿದೇಶಗಳಲ್ಲಿ ಈಗಾಗಲೇ ಪೆಪ್ಸಿ, ಕೊಕ್  ಇದೆಲ್ಲವನ್ನು ಬ್ಯಾಕ್ ಮಾಡಲಾಗಿದೆ ಆದರು ನಮ್ಮ ಜನ ಬಿಡದೆ ಸರದಿ ಸಾಲಲ್ಲಿ ನಿಂತು ಹಣ ಕೊಟ್ಟು ಆರೋಗ್ಯ ಹಾಳು ಮಾಡಿಕೊಳ್ಳುತ್ತಾ ಇದ್ದಾರೆ ಆದ್ರೆ ಇದು ಬೇಸಿಗೆಯಲ್ಲಿ ಹೆಚ್ಚು, ಈ ಕೆಳಗೆ ತಿಳಿಸಿರುವ ಪಾನೀಯ ಬೇಸಿಗೆ ಸಮಯದಲ್ಲಿ ದೇಹಕ್ಕೆ ತುಂಬಾ ಒಳ್ಳೇದು ನಾವು ಹೇಳಿರೋ ಪಾನೀಯ ಕುಡಿದು ನಂತರ ಬದಲಾವಣೆ ನೀವೇ ನೋಡಿ

ಸಿಹಿ ಲಸ್ಸಿ: ಸಿಹಿ ಮೊಸರಿಗೆ ಕಲ್ಲುಸಕ್ಕರೆ ಬೆರೆಸಿ ಮಿಕ್ಸರ್ ನಲ್ಲಿ ತಿರುವಿ ಲಸ್ಸಿ ತಯಾರಿಸಬೇಕು.

ಕಬ್ಬಿನ ಹಾಲು : ಇದಕ್ಕೆ ನಿಂಬೆರಸ ಬೆರೆಸಿ ಸೇವಿಸಬೇಕು. ಇದು ಬೇಸಿಗೆಯಲ್ಲಿ ಮಾತ್ರ. ಬೇರೆ ಕಾಲಗಳಲ್ಲಿ
ಬರೀ ಕಬ್ಬಿನ ರಸ ಸೇವಿಸಬೇಕು. ಅದಕ್ಕೆ ಸಕ್ಕರೆ, ಬೆಲ್ಲ, ಜೇನುತುಪ್ಪ ಇತ್ಯಾದಿಗಳನ್ನು ಬೆರೆಸಬಾರಾದು.

ಕಲ್ಲಂಗಡಿ ಜ್ಯೂಸ್: ಕಲ್ಲಂಗಡಿ ಹಣ್ಣಿನ ತಿರುಳಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕಾಳುಮೆಣಸಿನಪುಡಿ ಬೆರೆಸಿ ಮಿಕ್ಸಿ ಯಲ್ಲಿ ತಿರುವಬೇಕು.

ರಾಗಿ ಪಾನೀಯ: ಮೊಳಕೆ ಬರಿಸಿದ ರಾಗಿ ರುಬ್ಬಿ ಸೋಸಿ, ಅದಕ್ಕೆ ಬೆಲ್ಲ ಹಾಕಿ ತಣ್ಣಗೆ ಅಥವಾ ಬಿಸಿ ಮಾಡಿ ಸೇವಿಸಬಹುದು.

ಟೊಮೇಟೋ ಪಾನೀಯ: ಮೂರು ಟೋಮೇಟೋಗಳನ್ನು ಹೆಚ್ಚಿ ರುಬ್ಬಿ, ಅದಕ್ಕೆ ಕಿತ್ತಳೆ, ನಿಂಬೆ ಅಥವಾ ಮೋಸಂಬಿ ರಸ ಬೆರೆಸಿ.

ಹೆಸರಿನ ಪೇಯ: ಹೆಸರು ಕಾಳನ್ನು ಹುರಿದು ಪುಡಿ ಮಾಡಿ, ನೀರು ಹಾಗೂ ಬೆಲ್ಲ ಸೇರಿಸಿ ಸೇವಿಸಿ.

ಕಿತ್ತಳೆ ಲಸ್ಸಿ: ಸಿಹಿ ಮೊಸರು ೧ ಕಪ್, ಕಿತ್ತಳೆ ರಸ ೧ ಕಪ್, ಸ್ವಲ್ಪ ಸಕ್ಕರೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ.

ರಸಾಯನ: ಸಿಹಿ ಮಾವಿನಹಣ್ಣನ್ನು ಕತ್ತರಿಸಿ ಸಕ್ಕರೆ ಜೊತೆ ಬೆರೆಸಿ ಮಿಕ್ಸರ್ ನಲ್ಲಿ ರುಬ್ಬಿ ನೀರಿನ ಬದಲು ಹಾಲು ಬೆರೆಸಿದರೆ ಮಾವಿನ ರಸಾಯನ ಅಥವಾ ಮಿಲ್ಕ್ ಶೇಕ್ ಸಿದ್ಧ. ಮಾವಿನ ಹಣ್ಣಿನ ಬದಲು ಬಾಳೆಹಣ್ಣಿನಿಂದಲೂ ತಯಾರಿಸಬಹುದು.

ಎಳ್ಳಿನ ನೀರು: ಬಿಳಿ ಎಳ್ಳನ್ನು ಹುರಿದು ಪುಡಿ ಮಾಡಿ ಅದಕ್ಕೆ ನೀರು, ಬೆಲ್ಲ, ಚಿಟಿಕೆ ಏಲಕ್ಕಿ ಪುಡಿ ಬೆರೆಸಬೇಕು.

ಈ ಮೇಲಿನ ಪಾನೀಯಗಳು ದೇಹವನ್ನು ತಂಪಾಗಿಡುತ್ತವೆ. ಬಾಯಾರಿಕೆ, ಸುಸ್ತು ನೀಗಿಸುತ್ತದೆ. ಅಗತ್ಯ ಪೋಷಕಾಂಶಗಳು, ನೀರಿನ ಅಂಶವನ್ನು ದೇಹಕ್ಕೆ ಪೂರೈಸುತ್ತದೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿ ಇರಿಸುತ್ತದೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ