ಮನೆಯ ಮುಂದೆ ರಂಗೋಲಿ ಏಕೆ ಇಡುತ್ತಾರೆ ಗೊತ್ತಾ?

ಮನೆಯ ಮುಂದೆ ರಂಗೋಲಿ ಇಡುವುದು ಹಿಂದೂ ಸಂಪ್ರದಾಯದಲ್ಲಿ ಒಂದು ಪದ್ದತಿಯಾಗಿದೆ. ಮಲೆನಾಡಿನಲ್ಲಂತೂ ಪ್ರತಿಯೊಂದು ಮನೆಯಲ್ಲೂ ರಂಗೋಲಿ ಹಾಕದೆ ಇರುವುದೇ ಇಲ್ಲ. ರಂಗೋಲಿಯನ್ನು ಸ್ತ್ರೀಯರೇ ಹಾಕುತ್ತಾರೆ. ಕಾರಣ ಏನೆಂದರೆ ಸ್ತ್ರೀಯರು ದೇವತೆಯ ಸೂಕ್ಷ್ಮ ತತ್ವಗಲೆಂದು ನಂಬಿಕೆ ಇದೆ. ಅಲ್ಲದೇ ರಂಗೋಲಿಯನ್ನು ಬಿಳಿ ಬಣ್ಣದಲ್ಲೇ ಬಿಡಿಸುತ್ತಾರೆ. ಏಕಂದರೆ ಬಿಳಿ ಬಣ್ಣದಲ್ಲಿ ಈಶ್ವರೀ ತತ್ವದ ಲಹರಿಯನ್ನು ಆಕರ್ಷಿಸುವ ಕ್ಷಮತೆ ಇರುತ್ತದೆ. ಇದು ಮಹಿಳೆಯರ ಕಲಾಕೃತಿಗೆ ಒಂದು ಉದಾಹರಣೆಯೂ ಆಗಿದೆ.  

ಹಬ್ಬ ಬಂತೆಂದರೆ ಮಹಿಳೆಯರು ತಮ್ಮ ತಮ್ಮ ಮನೆಯ ಮುಂದೆ ಗುಡಿಸಿ ಸಾರಿಸಿ ಚುಕ್ಕಿ ರಂಗೋಲಿ, ಬಳ್ಳಿ ರಂಗೋಲಿಗಳನ್ನು ಹಾಕುತ್ತಾರೆ. ನಂತರ ರಂಗೋಲಿಯ ಸುತ್ತಲೂ ಅಥವಾ ನಡುವೆ ದೀಪಗಳನ್ನು ಇತ್ತು ಅಲಂಕಾರ ಮಾಡುತ್ತಾರೆ. ಹಿಂದಿನ ಕಾಲದವರ ಪ್ರಕಾರ ಮನೆಯ ಮುಂದೆ ರಂಗೋಲಿಯನ್ನು ಹಾಕಿದರೆ ಮನೆಯಲ್ಲಿ ಎಲ್ಲರೂ ಕ್ಷೇಮದಿಂದ ಇದ್ದಾರೆ ಎಂದರ್ಥ. ಯಾರ ಮನೆಯಾ ಮುಂದೆ ರಂಗೋಲಿ ಇಲ್ಲವೋ ಆ ಮನೆಯಲ್ಲಿ ಆಕಸ್ಸ್ಮಿಕವೋ ಅನಾಹುತವೋ ನಡೆದಿದೆ ಎಂದು ತಿಳಿಯಲ್ಪಡುತ್ತದೆ. ಯಾರೋ ತೀರಿಕೊಂಡಿದ್ದಾರೆ, ನೆರವಿಗೆ ದ್ಧಾವಿಸಿ ಎಂಬ ಆಹ್ವಾನ ಕೊಡುವ ಅರ್ಥವನ್ನು ಸೂಚಿಸುತ್ತದೆ. ಅಂತಹ ಮನೆಗೆ ಭಿಕ್ಷುಕರು ಕೂಡ ಬರುವುದಿಲ್ಲ. ಯಾಕೆಂದರೆ ಆ ಮನೆಯಲ್ಲಿ ಇರುವ ಜನರು ಸಂಕಷ್ಟದಲ್ಲಿದ್ದಾರೆ ಎಂಬ ಅರ್ಥವಾಗುತ್ತದೆ.

ಅಲ್ಲದೇ ಮನೆಯ ಮುಂದೆ ರಂಗೊಲಿಯಿದ್ದರೆ ಅದು ಅಥಿತಿಗಳಿಗೆ ಆಹ್ವಾನವಿದ್ದಂತೆ. ಒಳಗೆ ಬರಬಹುದು ಅನ್ನುವುದಕ್ಕೆ ಸೂಚನೆಯಾಗಿರುತ್ತದೆ. ಅಲ್ಲದೇ ಇದು ಸೌಂಧರ್ಯದ ಪ್ರತೀಕವೂ ಹೌದು.

ಮದುವೆಯ ಸಂಧರ್ಭದಲ್ಲಿ ಬೀಗರು ಮತ್ತು ಅವರ ಸಂಬಂಧಿಗಳ ಎಲೆ ಮುಂದೆ ರಂಗೋಲಿಯನ್ನು ಹಾಕುತ್ತಾರೆ. ಅವರೇ ಬೀಗರು ಎಂದು ಎಲ್ಲರಿಗೂ ತಿಳಿಯುವಂತೆ ಮಾಡುವುದೇ ಅದರ ಉದ್ದೇಶ. ಯಾಕೆಂದರೆ ಮದುವೆಗೆ ಬರುವ ಹೆಚ್ಚು ಮಂದಿ ಜನರಿಗೆ ಬೀಗರು ಯಾರು ಎಂದು ಗೊತ್ತಗದೆಯೂ ಉಳಿಯಬಹುದು. ಊಟ ಬಡಿಸುವವರಿಗೂ ಬೀಗರು ಯಾರೆಂದು ಸುಲಭವಾಗಿ ತಿಳಿಯುವುದು. ಖಳಜಿಯಿಂದ ಬಡಿಸಲು ಉತ್ತಮ ಮಾರ್ಗ ಇದಾಗಿದೆ.

ಬೆಳಿಗ್ಗೆ ಎದ್ದ ತಕ್ಷಣ ಮನೆಯ ಮುಂದೆ ರಂಗೋಲಿ ಹಾಕುವುದರಿಂದ  ಆ ರಂಗೋಲಿಯ ಮೇಲೆ ಬಿದ್ದ ಸೂರ್ಯನ ಕಿರಣಗಳು ಮನೆಯ ಒಳಗೆ ಬರುವ ಸಮಯದಲ್ಲಿ ರೋಗ ನಿರೋಧಕ ಶಕ್ತಿಯನ್ನೂ ಹೊತ್ತು ತರುತ್ತದೆ.ಅದು ನಮ್ಮ ಶರೀರದ ಮೇಲೆ ಪರಿಣಾಮ ಉಂಟಾಗಿ ನಮ್ಮ ದೇಹದಲ್ಲಿ ಇರುವ ರೋಗ ರುಜಿನಗಳನ್ನು ದೂರ ಮಾಡುತ್ತದೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ