ಮಾಡಿದ ಅಡುಗೆಗಳನ್ನು 40 ನಿಮಿಷದ ಒಳಗೆ ತಿನ್ನಬೇಕು ಇಲ್ಲ ಅಂದ್ರೆ ಏನಾಗುತ್ತೆ ಅಂತ ನಿಮಗೆ ಗೊತ್ತೇ ?
ಬೇಯಿಸಿದ ಅಡುಗೆಯನ್ನು ಎಷ್ಟು ಸಮಯದ ಒಳಗೆ ತಿನ್ನಬೇಕು? ಯಾವ ಪಾತ್ರೆಗಳಲ್ಲಿ ಬೇಯಿಸಿದ ಪದಾರ್ಥಗಳಲ್ಲಿ ಆರೋಗ್ಯಕ್ಕೆ ಒಳ್ಳೆಯದು.
ಅಂಗಡಿಯಿಂದ ತೆಗೆದುಕೊಂಡು ಬಂದ ವಸ್ತುಗಳು ಎಷ್ಟು ದಿನಗಳವರೆಗೂ ಉಪಯೋಗಿಸಬಹುದು, ಈ ರೀತಿಯ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಈಗ ತಿಳಿದುಕೊಳ್ಳೋಣ. ಅಡುಗೆ ಮಾಡಿದ 40 ನಿಮಷಗಳ ಒಳಗೆ ತಿನ್ನಬೇಕು. ಯಾಕೆಂದರೆ 40 ನಿಮಿಷಗಳ ನಂತರ ಪದಾರ್ಥಗಳಲ್ಲಿನ ಪೋಷಕಾಂಶಗಳ ಮಟ್ಟ ಕ್ರಮವಾಗಿ ಕುಗ್ಗುತ್ತ ಹೋಗುತ್ತದೆ, ಸಮಯ ಕಳೆದಂತೆ ನಾವು ತಿನ್ನುವ ಆಹಾರದಲ್ಲಿ ಪೋಷಕಾಂಶಗಳ ಸತ್ವ 35 ರಷ್ಟು ಕಡಿಮೆಯಾಗುತ್ತದೆ ಆದ್ದರಿಂದ ಆಹಾರವನ್ನು ಬೇಯಿಸಿದ ನಂತರ 40 ನಿಮಿಷಗಳ ಒಳಗೆ ತಿಂದರೆ ಆರೋಗ್ಯಕ್ಕೆ ಪೂರ್ತಿ ಪೋಷಕಾಂಶಗಳು ದೇಹಕ್ಕೆ ಸಿಗುವ ಅವಕಾಶವಿದೆ.

* ಬೇಯಿಸಿದ ಆಹಾರ 40 ನಿಮಿಷಗಳು ಒಳಗೆ ತಿಂದರೆ ಶೇಕಡ 100ರಷ್ಟು ಪೋಷಕಾಂಶಗಳು ನಿಮ್ಮ ದೇಹಕ್ಕೆ ಸೇರುತ್ತದೆ.
* ಬೇಯಿಸಿದ ಆಹಾರ 2 ಗಂಟೆಗಳು ನಂತರ ತಿಂದರೆ ಶೇಕಡ 70 ಪೋಷಕಾಂಶಗಳು ಮಾತ್ರ ನಿಮ್ಮ ದೇಹಕ್ಕೆ ಸೇರುತ್ತದೆ.
*ಬೇಯಿಸಿದ ಆಹಾರ 5 ಗಂಟೆಗಳ ನಂತರ ತಿಂದರೆ 50ಪ್ರತಿಶತ ಪೋಷಕಾಂಶಗಳ ಮಟ್ಟ ಕಳೆದುಕೊಂಡು ಅರ್ಥದಷ್ಟು ಮಾತ್ರ ನಿಮ್ಮ ದೇಹಕ್ಕೆ ಸೇರುತ್ತದೆ.
* ಅಂಗಡಿಯಿಂದ ತೆಗೆದುಕೊಂಡು ಬರುವಾಗ ಸಹ ನಿಮಗೆ ಎಷ್ಟೋ ಬೇಕು ಅಷ್ಟು ಮಾತ್ರ ಖರೀದಿಸಿ. ಯಾಕೆಂದರೆ ಗೋಧಿ ಹಿಟ್ಟು, 15 ದಿನಗಳಲ್ಲಿ, ಜೋಳ, ರಾಗಿ, ಸಜ್ಜಿಗೆ 7 ದಿನಗಳ ಒಳಗೆ ಉಪಯೋಗ ಮಾಡಬೇಕು ಇಲ್ಲ ಅಂದ್ರೆ ಅದ್ರಲ್ಲಿ ಇರುವ ಪೋಷಕಾಂಶಗಳನ್ನುಕಡಿಮೆ ಆಗಿರುತ್ತೆ. ಆನಂತರ ಅವುಗಳ ಪೋಷಕಾಂಶಗಳ ಮಟ್ಟ ಕ್ರಮವಾಗಿ ಕುಗ್ಗಿರುವುದರಿಂದ ಅದನ್ನ ತಿಂದರು ನಿಮಗೆ ಪ್ರಯೋಜನ ಇಲ್ಲ. ಆದ್ದರಿಂದ ಹಿಟ್ಟುಗಳನ್ನು ಆ ನಿರ್ದಿಷ್ಟ ಕಾಲದಲ್ಲಿಯೇ ಉಪಯೋಗಿಸಿದರೆ ಒಳ್ಳೆಯದು. ಯಾವಾಗ ಬೇಕೋ ಆಗ ತೆಗೆದುಕೊಂಡರೆ ಇನ್ನೂ ಒಳ್ಳೆಯದು.

ಈಗಂತೂ ಮಾರ್ಕೆಟ್ ನಲ್ಲಿ ಅನೇಕ ರೀತಿಯ ಪಾತ್ರೆಗಳು ಸಿಗುತ್ತೆ ಆದ್ರೆ ಯಾವ ಪಾತ್ರೆಯಲ್ಲಿ ಬೇಯಿಸಿದರೆ ಅಡುಗೆಯಲ್ಲಿನ ಪೋಷಕಾಂಶಗಳು ಹೇಗಿರುತ್ತದೆಂದು ನೋಡೋಣ.
ಮಣ್ಣಿನ ಮಡಿಕೆಯಲ್ಲಿ ಮಾಡಿದರೆ ಶೇಕಡ 100 ಗುಣ ಮಟ್ಟ ಹಾಗೆಯೇ ಇರುತ್ತದೆ.
ಕಂಚಿನ ಪಾತ್ರೆಯಲ್ಲಿ ಶೇಕಡ 97
ಹಿತ್ತಾಳೆ ಪಾತ್ರೆಯಲ್ಲಿ ಶೇಕಡ 93
ಅಲ್ಯೂಮಿನಿಯಂ, ಪ್ರೆಜೆರ್ ಕುಕ್ಕರ್ ರೀತಿಯ ಪಾತ್ರೆಗಳಲ್ಲಿ ಬೇಯಿಸಿದ ಪದಾರ್ಥಗಳಲ್ಲಿ ಬೇಯಿಸಿದ ಆಹಾರವನ್ನು ತಿನ್ನುವುದರಿಂದ ಶುಗರ್, ಕೀಲು ನೋವು, ಉದರ ಸಂಬಂಧಿತ ವ್ಯಾಧಿಗಳು, ಬೇಗನೇ ಮುಪ್ಪು ಬರುವ ರೀತಿಯ ಸಾಧ್ಯತೆಗಳಿರುತ್ತದೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ