ಒಮ್ಮೊಮ್ಮೆ ಮೊಬೈಲ್ ಇದಕ್ಕಿದ್ದಂತೆ ಪಟಾಕಿಯಂತೆ ಸಿಡಿಯುತ್ತೆ ಏಕೆ ಗೊತ್ತೇ ?

ಈ ಕಾಲದಲ್ಲಿ ಹೆಚ್ಚು ಸ್ಸ್ಮಾರ್ಟ್ ಫೋನ್ಸ್ ಬ್ಲಾಸ್ಟ್ ಆಗುತ್ತಿವೆ. ಸ್ಯಾಮ್ಸಂಗ್ ನೋಟ್ 7 ಮತ್ತು ಶಿಯೋಮಿ ನೋಟ್ 4 ಫೋನ್ಗಳಿಗೆ ವಿಮಾನದಲ್ಲಿ ಅನುಮತಿ ಇಲ್ಲ ಎನ್ನುವ ಪರಿಸ್ಥಿತಿಯೂ ಬಂದಿದೆ. ಹೀಗೆ ಏಕೆ ಆಗುತ್ತಿದೆ ಎಂಬುದ್ದಕ್ಕೆ ಬಹಳಷ್ಟು ಕಾರಣಗಳಿವೆ. ಎರಡು ಮಾತುಗಳಲ್ಲಿ ಹೇಳುವುದಾದರೆ, ಓವರ್ ಹೀಟಿಂಗ್ ಮೂಲಕ, ಬ್ಯಾಟರಿ ಸರಿಯಾಗಿ ಇಲ್ಲದಿರುವುದು. ನಮ್ಮ ಪೋನ್ ಗಳು ಸಹ ಹೀಟ್ ಆಗುವುದನ್ನು ನೋಡುತ್ತೇವೆ. ಏನು ಮಾಡಬೇಕು? ಫೋನ್ ಹೀಟ್ ಆಗಬಾರದೆಂದರೆ ಏನು ಮಾಡಬೇಕು?

ಎಲ್ಲದಕ್ಕೆ ಮೊದಲು ಮೊಬೈಲ್ ಆಯ್ಕೆ ಸರಿಯಾಗಿ ಮಾಡಬೇಕು. ಒಂದು ಸ್ಮಾರ್ಟ್ ಫೋನ್ ಕೊಳ್ಳುವ ಮುಂದು ಅದರ ಬಗ್ಗೆ ಪೂರ್ಣ ವಿವರಗಳನ್ನು ಸಂಗ್ರಹಿಸಿ. ಹೀಟಿಂಗ್ ಪ್ರೊಬ್ಲಮ್ ಇದೆಯಾ, ಯಾವ ರೀತಿಯ ಬ್ಯಾಟರಿ ಬಳಸುತ್ತಿದೆ, RAM ಎಷ್ಟು, ಯಾವುದಾದರೂ ಪ್ರೊಸೆಸರ್ನೊಂದಿಗೆ ಆ ಫೋನ್ ಮರ್ಕೆಟ್ಗೆ ಬಂದಿದೆ, ಇವೆಲ್ಲ ತಿಳಿದುಕೊಳ್ಳಬೇಕು. ಎಲ್ಲಾ ಸರಿಯಾಗಿದೆ ಎಂದರೆ ಮಾತ್ರ ಖರೀದಿಸಬೇಕು.

ಮೊಬೈಲ್ ಗಂಟೆಗಳ ಕಾಲ ಯಾವುದೇ ವಿರಾಮವಿಲ್ಲದೆ ಬಳಸಿದರೆ ಯಾವುದೇ ಮೊಬೈಲ್ ಆದರೂ ಹೀಟ್ ಆಗುತ್ತದೆ. ಇನ್ ಬಿಲ್ಟ್ ಆಗಿ ಫೋನ್ ಅಲ್ಲಿ ಟೆಂಪರೇಚರ್ ಚೆಕ್ ಮಾಡಬಹುದು ಇಲ್ಲವೇ ಟೆಂಪರೇಚರ್ ಚೆಕ್ ಮಾಡುವ ಅಪ್ಲಿಕೇಶನ್ಗಳು ಇರುತ್ತವೆ. ಫೋನ್ ಟೆಂಪರೇಚರ್ ಹೆಚ್ಚಿದಂತೆ ಕೆಲ ಸಮಯ ಫೋನ್ ಅನ್ನು ಪಕ್ಕದಲ್ಲೆ ವಿಶ್ರಾಂತಿಗೆ ಇಟ್ಟುಬಿಡಿ.

ಯಾವಾಗಲು ದಿನಕ್ಕೆ ಒಮ್ಮೆ ಆದರು ಮೊಬೈಲ್ ಅನ್ನು ರೀಬೂಟ್ ಅಥವಾ ಸ್ವಿಚ್ ಆಫ್ ಮತ್ತು ಆನ್ ಮಾಡುತಿರಬೇಕು. ಹೀಗೆ ಮಾಡಿದರೆ ಹೀಟಿಂಗ್ ಕಡಿಮೆಯಾಗುತ್ತದೆ.

ಬ್ಯಾಟರಿ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಫೋನ್ ಹೀಟ್ ಆಗುತ್ತದೆ. ಈಗ ಸ್ಯಾಮ್ಸಂಗ್ ನೋಟ್ 7 ಮತ್ತುಶಿಯೋಮಿ ನಲ್ಲಿ ಬಂದಿರುವ ಸಮಸ್ಯೆ ಇದೆ. ಬ್ಯಾಟರಿ ಸರಿಯಾಗಿ ಇಲ್ಲದೆ ಅವು ಸ್ಫೋಟವಾಗುತಿವೆ‌

ಫೋನ್ ಹೆಚ್ಚು ಹೀಟ್ ಗೆ ಕಾರಣ ಗೇಮಿಂಗ್. ಕೆಲವರು ನೀಡ್ ಫಾರ್ ಸ್ಪೀಡ್, ಬ್ಯಾಟ್ ಮೆನ್ ತರಹದ ದೊಡ್ಡ ದೊಡ್ಡ ಆಟಗಳನ್ನ ವಿರಾಮ ಕೊಡದೆ ಗಂಟೆಗಟ್ಟಲೆ ಆಡಿದ್ರೆ ಮೊಬೈಲ್ ಮೇಲೆ ಹೆಚ್ಚು ಒತ್ತಡ ಬಿದ್ದು . ಶೀಘ್ರವಾಗಿ, ಹೆಚ್ಚು ಹೀಟ್ ಆಗುತ್ತದೆ.

ಅದೇ ಕೆಲಸವಾಗಿ ಆನ್ ಲೈನ್ ಸ್ಟ್ರೀಮಿಂಗ್ ಮಾಡಿದರೆ ಸಹ ಫೋನ್ ಹಿಟ್ ಆಗುತ್ತದೆ. ಆದ್ದರಿಂದ ಅಗತ್ಯವಿದ್ದರೆ, ನಿಮ್ಮ ಬ್ಯಾಟರಿ ಲೈಫ್ ಅನ್ನು ನೋಡಿ ಸ್ಟ್ರೀಮಿಂಗ್ ಮಾಡುವುದು ಉತ್ತಮ.

ಫೋನ್ ಬ್ಯಾಟರಿ 20 ಕಡಿಮೆಯಿದ್ದರೆ, ಅದನ್ನು ಹೆಚ್ಚಾಗಿ ಬಳಸಬಾರದು, ವಿಶೇಷವಾಗಿ ಕರೆಗಳು ಮಾಡುವುದು, ಕರೆ ತೆಗೆಯುವುದು ಮಾಡಬಾರದು.
ಮಲ್ಟಿ ಟಾಸ್ಕಿಂಗ್ ಮಾಡವುದು ತಪ್ಪಲ್ಲ ಆದರೆ, ಒಂದು ಅಪ್ಲಿಕೇಶನ್ ನಲ್ಲಿ ಕೆಲಸ ಮುಗಿದಿದ್ದರೆ ಅದನ್ನು ಮಿನಿಮೀಜ್ ಮಾಡುವ ಬದಲಾಗಿ ಕ್ಲೋಜ್ ಮಾಡಿ. RAM ಮೇಲೆ ಒತ್ತಡ ತರಬೇಡಿ.

ಕೊನೆಯದಾಗಿ, ದೂರವಾಣಿ ಮಾತನಾಡುವ ಸಮಯದಲ್ಲಿ ಫೋನ್ ಚಾಟ್ ಮಾಡುವಾಗ, ಫೋನ್ ಮೇಲೆ ಯಾವುದೇ ಮೀಡಿಯಾ ಫೈಲ್ ಪ್ಲೇ ಮಾಡಬೇಡಿ. ಮತ್ತು ಫೋನ್ ಚಾರ್ಜಿಂಗ್ ಗೆ ಹಾಕಿ ಫೋನ್ ಕರೆ ಮಾಡುವುದು ಮತ್ತು ಚಾಟ್ ಮಾಡುವುದು ಅಪಾಯಕಾರಿ ಎಚ್ಚರಿಕೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ