ಸೋಡಾ ಕುಡಿಯುವುದರಿಂದ ದೇಹಕ್ಕೆ ಹಾನಿಕಾರಕ ಅಂತಾ ನಾವು ಬಹಳಷ್ಟು ಸಾರಿ ಕೇಳಿರುತ್ತೇವೆ. ಇದನ್ನ ಹೆಚ್ಚಾಗಿ ನಾವು ಕೂಲ್ ಡ್ರಿಂಕ್ಸ್ ರೂಪದಲ್ಲಿ ಕುಡಿಯುತ್ತೇವೆ. ಕೆಲವರು ಮದ್ಯಪಾನಕ್ಕೆ ಬೆರೆಸಿಕೊಂಡು ಕುಡಿಯುತ್ತಾರೆ. ಇದು ದೇಹಕ್ಕೆ ತಂಪು ಎಂದು ತಪ್ಪು ಕಲ್ಪನೆಯಿಂದ ಕುಡಿಯುತ್ತೇವೆ ಆದರೆ ಇದರಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ಯಾವುದೇ ಪೋಷಕಾಂಶಗಳು ಇರುವುದಿಲ್ಲ. ಇತ್ತೇಚೆಗೆ ಅರ್ದಲ್ಲೂ ನಕಲಿ ಸೋಡಾ ಹಾವಳಿ ಹೆಚ್ಚಾಗಿದೆ. ಸಿಕ್ಕ ಸಿಕ್ಕ ಜಾಗದಲ್ಲಿ ನೀರು ತುಂಬಿಸಿ ಸೋಡಾ ಮಾಡುವವರು ಹೆಚ್ಚಾಗಿದ್ದರೆ ಇಂತಹ ಆರೋಗ್ಯಕ್ಕೆ ಹಾನಿ ಮಾಡುವ ಸೋಡಾ ಕುಡಿದರೆ ಮುಗಿಯಿತು ಕಥೆ ಬಿಡಿ.

ಈಗಲೂ ನಮ್ಮಲ್ಲಿ ಕೆಲವು ಜನರು ಗ್ಯಾಸ್ಟ್ರಿಕ್ ಸಮಸ್ಯೆ ಆದ್ರೆ ಒಂದು ಸೋಡಾ ಕುಡಿ ಸರಿ ಹೋಗುತ್ತೆ ಎನ್ನುವವರು ಹೆಚ್ಚಾಗಿದ್ದಾರೆ ಅಥವ ಒಂದು ಪೆಪ್ಸಿ ಕುಡಿ ಎನ್ನುವವರೇ ಹೆಚ್ಚು ಇದರಿಂದ ನಮಗೆ ತಾತ್ಕಾಲಿಕ ಪರಿಹಾರ ಸಿಕ್ಕರೂ ಮುಂದೆ ನಮಗೆ ದೊಡ್ಡ ಸಂಕಟ ಮಾಡುತ್ತದೆ. ನಾವು ಚಿತ್ರಮಂದಿರದಲ್ಲಿ ತೆರಳಿದಾಗ ಬ್ರೇಕ್ ಮದ್ಯೆ ಇಂತಹ ಪಾನೀಯ ಕುಡಿಯುವುದು ಸಾಮಾನ್ಯ ಆಗೋಗಿದೆ. ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಹೆಚ್ಚಿನ ಸಮಸ್ಯೆ ಉದ್ಭವ ಆಗುತ್ತದೆ.

ಅಮೆರಿಕದ ವೈದ್ಯರ ಒಂದು ಸಮೀಕ್ಷೆ ಪ್ರಕಾರ ಹೆಚ್ಚಾಗಿ ಸೋಡಾ ಬಳಕೆ ಮಾಡುವ ವ್ಯಕ್ತಿಗೆ ಮೂಳೆ ಬೇಗನೆ ಸವೆಯುತ್ತದೆ ಎಂದು ಅಧ್ಯಯನ ತಿಳಿಸಿದೆ. ಜೊತೆಗೆ ಸೋಡಾ ಮಿಶ್ರಿತ ಕೂಲ್ ಡ್ರಿಂಕ್ಸ್ ಕುಡಿಯುವುದರಿಂದ ನಮ್ಮ ದೇಹದ ತೂಕ ಹೆಚ್ಚಾಗುವುದರ ಜೊತೆಗೆ ಬಿಪಿ ಮತ್ತು ಡಯಾಬಿಟೀಸ್ ಹಾಗೂ ಇನ್ನಿತರ ಸಮಸ್ಯೆಗಳು ಬೇಗನೆ ಉತ್ಪತ್ತಿ ಆಗುತ್ತವೆ. ಹಾಗಾದರೆ ಅದು ಏನು ನೋಡೋಣ ಬನ್ನಿ

ಸೋಡಾ ಕುಡಿಯುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಕೆಲವು ಜನಕ್ಕೆ ಎದೆ ಉರಿಯುವ ಸಂಭವ ಹೆಚ್ಚಿರುತ್ತದೆ. ಸೋಡಾ ಕುಡಿಯುವುದರಿಂದ ಸ್ಥೂಲಕಾಯಕ್ಕೆ ಹೆಚ್ಚಾಗಿ ತುತ್ತಾಗುತ್ತಿವಿ ಸಕ್ಕರೆ ಕಾರ್ಬೋನೇಟೆಡ್ ಪಾನೀಯವು ರಕ್ತದಲ್ಲಿನ ಸಕ್ಕರೆಯ ಕುಸಿತಕ್ಕೆ ಕಾರಣವಾಗುತ್ತದೆ. ಸೋಡ ಕುಡಿಯೋದ್ರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗುತ್ತದೆ. ಸೋಡಾ ಕುಡಿದ ಬಳಿಕ ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಅನ್ನು ಹೆಚ್ಚಾಗಿ ಉತ್ಪಾದಿಸಲು ಪ್ರಾರಂಭಿಸುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಏರಿಕೆಯಾಗುತ್ತದೆ ಮತ್ತು ಲಿವರ್ ಇನ್ಸುಲಿನ್ ಅನ್ನು ಕೊಬ್ಬು ಅಂಶವಾಗಿ ಪ್ರತಿಕ್ರಿಯಿಸುತ್ತದೆ.

ಸೋಡದಲ್ಲಿ ಫಾಸ್ಪರಿಕ್ ಆಸಿಡ್ ಹೆಚ್ಚಾಗಿದ್ದು ಇದನ್ನು ಕುಡಿಯುವುದರಿಂದ ಮೂಳೆಗಳಲ್ಲಿರುವ ಕ್ಯಾಲ್ಸಿಯಂ ಅನ್ನು ಹೀರಿಕೊಂಡು ಮೂಳೆಯನ್ನ ಮೃದುವಾಗಿಸುತ್ತದೆ. ಇದರಿಂದ ಆಸ್ಟಿಯೊಪೊರೋಸಿಸ್ ಹಲ್ಲಿನ ಕುಳಿಗಳು ಮತ್ತು ಮೂಳೆ ಮೃದು ಗೊಳಿಸುವಿಕೆಯಂತಹ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ. ಸೋಡಾ ಕುಡಿಯುವುದರಿಂದ ಆಹಾರದ ಜೀರ್ಣಕ್ರಿಯೆಗೆ ಅಗತ್ಯವಿರುವ ಯಾವುದೇ ಪೋಷಕಾಂಶಗಳನ್ನು ನೀಡುವುದಿಲ್ಲ. ಸೋಡಾ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಪೌಷ್ಟಿಕಾಂಶದ ಹೀರಿಕೊಳ್ಳುವಿಕೆಯನ್ನು ನಿರ್ಬಂಧಿಸುತ್ತದೆ. ಸೋಡಾದಲ್ಲಿ ಇರುವ ಹೆಚ್ಚಿನ ಸಕ್ಕರೆ ಅಂಶ ಸೋಡಿಯಂ ಮತ್ತು ಕೆಫೀನ್ ಅಂಶಗಳು ದೇಹದ ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ. ಸೋಡಾಗಳಲ್ಲಿನ ಕ್ಯಾರಮೆಲ್ ಬಣ್ಣ ಕ್ಯಾನ್ಸರ್ ಅಪಾಯ ತರುತ್ತದೆ ನೋಡಿದರಲ್ಲ ಸೋಡಾ ಕುಡಿಯುವುದರಿಂದ ಆರೋಗ್ಯವು ಕೆಡುತ್ತದೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ