ಕೆಲವು ಹಾವುಗಳು ಕಚ್ಚಿದರು ನಾವು ಸಾಯುವುದಿಲ್ಲ ಆದ್ರೆ ವಿಷಕಾರಿ ಹಾವುಗಳು ಕಚ್ಚಿದ ಕೂಡಲೇ ದೇಹದಲ್ಲಿ ವಿಷ ಹರಡಿ ಅಸುನೀಗುತ್ತೇವೆ ನಿಮಗಾಗಿ ಹಾವಿನ ಕಡಿತದ ಬಗ್ಗೆ ವಿಶೇಷ ಮಾಹಿತಿಯನ್ನು ಕೊಟ್ಟಿದೇವೆ ಓದಿ ಶೇರ್ ಮಾಡುವುದು ಮರೆಯಬೇಡಿ.

ಭಾರತದಲ್ಲಿ ಸುಮಾರು 2 ಲಕ್ಷ ಜನ ಹಾವು ಕಡಿತದಿಂದ ಸಾವನ್ನಪ್ಪುತ್ತಿದ್ದರೆ, ಅದರಲ್ಲಿ ಹೆಚ್ಚಿನ ಜನ ಹಾವಿನ ಕಡಿತಕ್ಕಿಂತ ಹಾವಿನ ಭಯಕ್ಕೆ ಹೆಚ್ಚು ಸಾವಿನ್ನಾಪ್ಪುತ್ತಿದ್ದಾರೆ.ಅದರಲ್ಲೂ ನಮ್ಮ ದೇಶದಲ್ಲಿ ತುಂಬಾ ವಿಧದ ಹಾವುಗಳಿವೆ ಅದರಲ್ಲಿ 5 ರೀತಿಯ ಹಾವು ತುಂಬಾ ವಿಷ ಹೊಂದಿದ ಹಾವುಗಳು,  ಹಾವು ಕಡಿತದಿಂದ ಮನುಷ್ಯನನ್ನು ಉಳಿಸುವುದು ಸ್ವಲ್ಪ ಕಷ್ಟ ಯಾಕೆಂದರೆ ಹಾವು ಕಚ್ಚಿದ 3 ಗಂಟೆಯಲ್ಲಿ ವ್ಯಕ್ತಿ ಸಾವನ್ನಪ್ಪುತ್ತಾರೆ. ಆ 3 ಗಂಟೆಯ ಒಳಗೆ ಮನುಷ್ಯನ ಪ್ರಾಣವನ್ನು ಉಳಿಸಿಕೊಳ್ಳುವುದು ಹೇಗೇ?

ಕಚ್ಚಿದ ಹಾವು ವಿಷಪೂರಿತ ಹಾವೋ ಅಥವಾ ವಿಷವಲ್ಲದ ಹಾವೋ ಎಂದು ತಿಳಿದುಕೊಳ್ಳಲು ಅದು ಕಚ್ಚಿದ ಜಾಗದಲ್ಲಿ ಒಂದು ಅಥವಾ ಎರಡು ಗುರುತು ಇದ್ದರೆ ಅದು ವಿಷಪೂರಿತ ಹಾವು. ಮೂರಕ್ಕಿಂತ ಹೆಚ್ಚಿದ್ದರೆ ಅದು ವಿಷವಲ್ಲದ ಹಾವು ಎಂದು ನೋಡಿಕೊಳ್ಳಬೇಕು.

ವಿಷಪೂರಿತ ಹಾವು ಕಚ್ಚಿದ್ದರೆ ಕಚ್ಚಿದ ಜಾಗದಿಂದ ವಿಷ ದೇಹಕ್ಕೆ ಆವರಿಸುತ್ತದೆ,ಅಲ್ಲಿಂದ ಹೃದಯ ಹೃದಯದಿಂದ ಶರೀರದ ಎಲ್ಲ ಭಾಗಗಳಿಗೂ ಸೇರುತ್ತದೆ, ಹೀಗೆ ವಿಷ ಶರೀರದ ಭಾಗಗಳಿಗೆ ಸೇರಲು 3 ಗಂಟೆ ಸಮಯ ತೆಗೆದುಕೊಳ್ಳುತ್ತದೆ,ಅಷ್ಟರ ಒಳಗೆ ಆ ವ್ಯಕ್ತಿಗೆ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂದರೇ.

ಹಾವು ಕಚ್ಚಿದ ಜಾಗದಿಂದ ಸ್ವಲ್ಪ ಮೇಲ್ಬಾಗಕ್ಕೆ ಒಂದು ದಾರದಿಂದ ಗಟ್ಟಿಯಾಗಿ ಕಟ್ಟಬೇಕು. ನಂತರ ಸೂಜಿ ಇಲ್ಲದ ಸಿರಂಜಿನಿಂದ ಹಾವು ಕಚ್ಚಿದ ಜಾಗದಲ್ಲಿ ಇಟ್ಟು ರಕ್ತವನ್ನು ಎಳೆಯಬೇಕು, ಮೊದಲು ರಕ್ತ ಕಪ್ಪು ಬಣ್ಣದಲ್ಲಿ ಇರುತ್ತದೆ. ಅದು ವಿಷಯುಕ್ತ ರಕ್ತವಾಗಿರುತ್ತದೆ, ಹೀಗೆ ಎರಡರಿಂದ ಮೂರು ಬಾರಿ ಎಳೆಯಬೇಕು. ನಂತರ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು.

ಹಾವು ಕಚ್ಚಿದಾಗ ಮಾಡುವ ಆಯ್ಯುರ್ವೇದ ಔಷಧಿಗಳೆಂದರೇ

ಈಶ್ವರಿ ಬೇರನ್ನು ನಿಂಬೆ ಉಳಿ ರಸದಲ್ಲಿ ತೇದು ಹಾವು ಕಚ್ಚಿದ ಜಾಗಕ್ಕೆ ಹಚ್ಚಬೇಕು

ಉತ್ತಾರಾಣಿ ಗಿಡವನ್ನು ತೇದು ಗಾಯದ ಮೇಲೆ ಹಚ್ಚಬೇಕು, ಹಾಗೆಯೇ ಉತ್ತಾರಾಣಿ ಗಿಡದ ಎಲೆಗಳನ್ನು ಜಗಿದು ತಿನ್ನಬೇಕು.

ನಂಜು ನಾರಾಯಣಿ ಸೊಪ್ಪನ್ನು ಅರೆದು ಹಚ್ಚಬೇಕು ನಂತರ ಅದನ್ನು ಜಗಿದು ತಿನ್ನಬೇಕು.

ಒಂದು ಹೋಳು ನಿಂಬೆ ಹಣ್ಣಿನ ಒಳಗೆ ತುಂಬೆ ರಸ ತುಂಬಿ ಸೇವಿಸಬೇಕು. ಜೊತೆಗೆ ಹಾವು ಕಚ್ಚಿದ ಜಾಗವನ್ನು ಅಲ್ಲಾಡಿಸಬಾರದು ಮತ್ತು ಓಡಾಡಲು ಬಾರದು.

ಇವುಗಳನ್ನು ಮಾಡುವ ಮೂಲಕ ಹಾವು ಕಚ್ಚಿದ ವ್ಯಕ್ತಿಯನ್ನು ಉಳಿಸಿಕೊಳ್ಳಬಹುದು. ನಂತರ ಹತ್ತಿರದ ವೈದ್ಯರ ನೆರವು ಪಡೆಯುವುದು ಮರೆಯಬೇಡಿ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ