ಚಂದದ ನಗುವಿಗೆ ಇಲ್ಲಿದೆ ಟಿಪ್ಸ್

ಸುಂದರ ಹಲ್ಲುಗಳು ಸೌಂಧರ್ಯದ ಪ್ರತೀಕ. ನಮ್ಮ ಹಲ್ಲುಗಳು ಸುಂದರವಾಗಿದ್ದರೆ ನಮ್ಮ ಮುಖದ ಸೌಂಧರ್ಯ ಕೂಡ ಹೆಚ್ಚಾಗಿರುತ್ತದೆ. ಸುಂದರವಾದ ಹಲ್ಲುಗಳನ್ನು ಯಾರು ತಾನೇ ಇಷ್ಟ ಪಡುವುದಿಲ್ಲ ಹೇಳಿ. ನೀವೂ ಕೂಡ ಈ ಕೆಳಗೆ ತಿಳಿಸಿದ ಸಲಹೆಗಳನ್ನು ಅನುಸರಿಸಿ. ನಿಮ್ಮ ಹಲ್ಲುಗಳನ್ನು ಸುಂದರವಾಗಿಸಿಕೊಳ್ಳಿ.

  1. ಲವಂಗ: ನಿಮ್ಮ  ಬಾಯಿಯಲ್ಲಿರುವ ಬ್ಯಾಕ್ಟಿರಿಯಾ ಹೊಡೆದೊಡಿಸಿ ಹಲ್ಲನ್ನು ಸುರಕ್ಷಿತವಾಗಿಡಲು ಲವಂಗ ಬಳಸಿ. ಇದು ಆಂಟಿ-ಬ್ಯಾಕ್ಟಿರಿಯಾ ಗುಣಹೊಂದಿದ್ದು ಬಾಯಿಯ ಕೆಟ್ಟ ವಾಸನೆಯನ್ನೂ ಹೋಗಲಾಡಿಸುತ್ತದೆ. ಪ್ರತಿ ಬಾರಿ ಊಟ ಮಾಡಿದ ನಂತರ ಒಂದು ಲವಂಗವನ್ನು ಬಾಯಿಯೊಳಗೆ ಇಟ್ಟುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಿ. ಹಲ್ಲು ನೋವಿಗೆ ಲವಂಗದ ಎಣ್ಣೆ ಉತ್ತಮ ಔಷಧಿ.
  2. ಟೂಥ್ ಪೇಸ್ಟ್ : ಮನೆಯಲ್ಲಿಯೇ ಟೂಥ್ ಪೇಸ್ಟ್ ತಯಾರಿಸಿ. ಹೇಗೆ ಮಾಡುವುದೆಂದು ಕೇಳುತ್ತಿದ್ದೀರಾ? ಅಡುಗೆ ಸೋಡಾ 6 ಚಮಚ, ಮುಕ್ಕಾಲು ಚಮಚ ಉಪ್ಪು, ನಾಲ್ಕು ಚಮಚ ಗ್ಲಿಸರಿನ್ ಮತ್ತು ಹದಿನೈದು ಹನಿ ಪೆಪ್ಪರ್ ಮಿಂಟ್ ಎಣ್ಣೆಯನ್ನು ಸರಿಯಾಗಿ ಪೇಸ್ಟ್ ಆಗುವರೆಗೆ ಮಿಕ್ಸ್ ಮಾಡಿಟ್ಟುಕೊಳ್ಳಿ. ಪೇಸ್ಟ್ ರೆಡಿ. ಇದನ್ನು ದಿನಾ ಬಳಸುತ್ತಿದ್ದರೆ ನಿಮಗೆ ಆಶ್ಚರ್ಯವಾಗುವಂತೆ ಹಲ್ಲು ಶುಭ್ರವಾಗುತ್ತದೆ. ಇದು ಬಾಯಿಯೊಳಗಿನ ಕ್ರಿಮಿಗಳನ್ನೂ ನಾಶಪಡಿಸುತ್ತದೆ. ಪ್ರತಿದಿನ ಎರಡು ಬಾರಿ ಹಲ್ಲು ಉಜ್ಜುವುದನ್ನು ಮಾತ್ರ ಮರೆಯಬೇಡಿ.
  3. ಉಪ್ಪು ಮತ್ತು ಬೆಳ್ಳುಳ್ಳಿ ಪೇಸ್ಟ್ : ದಿನಕ್ಕೊಮ್ಮೆ ಉಪ್ಪು ಮತ್ತು ಬೆಳ್ಳುಳ್ಳಿ ಪೇಸ್ಟ್ ನಿಂದ ಬಾಯಿ ಮುಕ್ಕಳಿಸಿ. ಇದರಿಂದ ಒಸಡಿನ ತೊಂದರೆಗಳು ನಿವಾರಣೆಯಾಗುತ್ತದೆ. ಹಲ್ಲು ಕೂಡ ಬಲಿಷ್ಠವಾಗುತ್ತವೆ.

  1. ಬೇವಿನ ಕಡ್ಡಿ : ಬಾಯಿಯೊಳಗಿನ ಬ್ಯಾಕ್ಟಿರಿಯಾ ಹೋಗಲಾಡಿಸಲು ಬೇವಿನ ಕಡ್ಡಿಯಿಂದ ಹಲ್ಲುಜ್ಜಿ. ಬೇವಿನ ಕಡ್ಡಿ ಜಗಿಯುವುದರಿಂದ ಹಲ್ಲು ಸದೃಢವಾಗುತ್ತವೆ. ಇದರಿಂದ ಹಲ್ಲು ಹುಳುಕಾಗುವುದು ಕೂಡ ತಪ್ಪುತ್ತದೆ. ಆರಂಭದಲ್ಲಿ ಕಹಿ ಎನಿಸಬಹುದು. ಆದರೆ ರೂಢಿಯಾಗುವವರೆಗೆ ಅಷ್ಟೆ.
  2. ಮೂಲಂಗಿ ಎಲೆ : ಮೂಲಂಗಿ ಎಲೆ ಕೂಡ ಹಲ್ಲಿನ ಆರೋಗ್ಯಕ್ಕೆ ಸಹಕಾರಿ. ಮೂಲಂಗಿ ಎಲೆ ಜಗಿಯುವುದು ಅಥವಾ ಅದರ ಜ್ಯೂಸ್ ಮಾಡಿ ಕುಡಿಯುವುದು ಹಲ್ಲಿಗೆ ಒಳ್ಳೆಯದು. ಮಾರುಕಟ್ಟೆಗೆ ಹೋದಾಗ ಮೂಲಂಗಿ ಜೊತೆಗಿರುವ ಎಲೆಯನ್ನು ಎಸೆಯಬೇಡಿ. ಎಲೆಯನ್ನು ಹಸಿ ಈರುಳ್ಳಿ ಜೊತೆ ಸಣ್ಣಗೆ ಹೆಚ್ಚಿ ಉಪ್ಪು, ನಿಂಬೆರಸ ಬೆರೆಸಿ ಪಚಡಿ ಮಾಡಿ ತಿನ್ನಬಹುದು. ಹೊಟ್ಟೆಗೂ ಇದು ಒಳ್ಳೆಯದು.
  3. ಕ್ಯಾಲ್ಸಿಯಂ: ಕ್ಯಾಲ್ಸಿಯಂ ಜಾಸ್ತಿಯಿರುವ ಆಹಾರದಿಂದ ಹಲ್ಲು ಮತ್ತು ಒಸಡು ಹೆಚ್ಚು ಆರೋಗ್ಯ ಪೂರ್ಣವಾಗುತ್ತದೆ. ಅದಕ್ಕಾಗಿ ಕಾಳು, ಹಣ್ಣು ತರಕಾರಿಗಳು, ಕೋಳಿ ಮೊಟ್ಟೆ ಮತ್ತು ಡೈರಿ ಉತ್ಪನ್ನಳು ಇತ್ಯಾದಿ ಕ್ಯಾಲ್ಸಿಯಂ ಅತ್ಯಧಿಕವಿರುವ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು.
  4. ಈ ಆರು ಟಿಪ್ಸ್ ಮೂಲಕ ನೀವು ಮನೆಯಲ್ಲಿಯೇ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ. ನಿಮಗೆ ನೀವೇ ಡೆಂಟಿಸ್ಟ್ ಆಗಿ. ಇನ್ನೊಂದು ಮಾತು ನೆನಪಿಡಿ. ಆರೋಗ್ಯಕರ ಹಲ್ಲುಗಳು ಹೃದಯಬೇನೆ ಮುಂತಾದ ಅನಾರೋಗ್ಯದಿಂದಲೂ ಕಾಪಾಡುತ್ತವೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ