ಶ್ರೀ ಸ್ಕಂದ ಪುರಾಣದ ಸನತ್ಕುಮಾರ ಸಂಹಿತೆಯಲ್ಲಿ ಸಹ್ಯಾದ್ರಿ ಖಂಡದ ತೀರ್ಥಕ್ಷೇತ್ರ ಮಹಿಮಾ ನಿರೂಪಣದೊಳಗೆ ಕ್ಷೇತ್ರ ವರ್ಣನೆಯು ಪ್ರಸಿದ್ಧವಾಗಿದೆ. ಅಷ್ಟೊಂದು ಪ್ರಸಿದ್ದಿ ಪಡೆದ ದೇಗುಲ ಇದು ಮತ್ತು ಕರ್ನಾಟಕದ ಶ್ರೀಮಂತ ದೇವಾಲಯದಲ್ಲಿ ಮೊದಲ ಸ್ಥಾನದಲ್ಲಿದೆ. ಈ ಕ್ಷೇತ್ರವು ಕುಮಾರಧಾರಾ ನದಿಯ ತೀರದಲ್ಲಿದೇ ಈ ಕುಮಾರಧಾರ ನದಿಯು ಕುಮಾರಪರ್ವತದಲ್ಲಿ ಹುಟ್ಟಿ ಸಮುದ್ರ ಗಾಮಿನಿಯಾಗಿರುವುದು.ಇದಕ್ಕೆ ಕುಮಾರಧಾರ ಎಂತಲೂ ರೂಢಿಯಾಗಿದೆ. ಈ ದಿವ್ಯ ಕ್ಷೇತ್ರದಲ್ಲಿ ಷಣ್ಮುಖ ಸ್ವಾಮಿಯು ವಾಸ ಮಾಡುವುದಕ್ಕೆ ಈ ತೀರ್ಥವನ್ನು ನಿರ್ಮಿಸಿದನೆಂದು ಪ್ರಸಿದ್ದಿಯಿದೆ.

ಈ ಕ್ಷೇತ್ರದಲ್ಲಿ ಅನೇಕರು ಮಂತ್ರಸಿದ್ದಿ ತಪಸ್ಸಿದ್ದಿಗಳನ್ನು ಹೊಂದಿರುವುದೂ, ಕ್ಷೇತ್ರ ದರ್ಶನದಿಂದಲೇ ಅಸಾಧ್ಯ ರೋಗ ಪೀಡಿತರಾದವರು ಆರೋಗ್ಯ ದೃಢಕಾರ್ಯರಾಗಿರುವುದು ಕುಮಾರ ಸ್ವಾಮಿಯ ಸೇವೆಯಿಂದ ಸಕಲಾಭೀಷ್ಟ ಸಿದ್ಧಿಯನ್ನು ಹೊಂದಿರುವುದು. ಶಾಪ ಪೀಡಿತರಾದವರು ಈ ಕ್ಷೇತ್ರ ಯಾತ್ರೆಯಿಂದ ಮುಕ್ತ ಶಾಪರಾದ ವಿಷಯಗಳೂ ಸಹ್ಯಾದ್ರಿ ಖಂಡದಲ್ಲಿ ಬಹುವಾಗಿ ವರ್ಣಿಸಲ್ಪಟ್ಟಿವೆ. ಪಿಶಿತಾಶಿನಿಯು ದುಃಖಿತಳಾಗಿ ಅಲ್ಲಲ್ಲಿ ತಿರುಗಿತ್ತಾ ದಾರಾನದಿಯ ದಡಕ್ಕೆ ಬಂದಳು. ಆ ದಿವ್ಯ ಕ್ಷೇತ್ರವನ್ನು ನೋಡಿದ ಕ್ಷಣವೇ ಜನ್ಮಾಂತರ ಸ್ಮೃತಿಯುಂಟಾಯಿತು ದಾರಾತೀರ್ಥದಲ್ಲಿ ಸ್ನಾನಮಾಡಿ ರಾಕ್ಷಸ ದೇಹವನ್ನು ಬಿಟ್ಟು ದಿವ್ಯ ರೂಪವನ್ನು ಧರಿಸಿ ಸ್ಕಂದಾಂಶ ಸಮೇತವಾದ ವಾಸುಕಿಯನ್ನು ಭಕ್ತಿಯಿಂದ ಆರಾಧಿಸಿ ಮೂರು ದಿವಸವಿದ್ದು ಕ್ಷೇತ್ರ ಮಹಿಮೆಯನ್ನು ಕೊಂಡಾಡುತ್ತಾ ಸುರಲೋಕವನ್ನು ಸೇರಿ ಕಶ್ಯಪರಿಗೆ ನಮಸ್ಕರಿಸಿದಳು. ಅವರು ಪ್ರೀತಿಯಿಂದ ಉಪಚರಿಸಲು,ಅದಿತಿಯು ಕುತೂಹಲದಿಂದ ನುಡಿದಳು.

ತ್ರೇತಾಯುಗದಲ್ಲಿ ಕ್ಷತ್ರಿಯಾತಂಕನಾದ ಪರುಶುರಾಮನು ಈ ತೀರ್ಥಸ್ನಾನದಿಂದ ಮಾತೃಹತ್ಯಾ ಪಾಪವನ್ನು ಕಳೆದುಕೊಂಡನು.ದ್ವಾಪರದಲ್ಲಿ ಶ್ರೀ ಕೃಷ್ಣ ಕುಮಾರನಾದ ಸಾಂಬನು ಮುನಿಗಳ ಆಶ್ರಮದಲ್ಲಿ ಸಂಚರಿಸುತ್ತಿದ್ದನು. ಇವರ ಅನುಪಮ ಸೌಂದರ್ಯವನ್ನು ನೋಡಿ ಮುನಿ ಪತ್ನಿಯರು ಮನೋ ವಿಕಾರವನ್ನು ಹೊಂದಲು ಮುನಿಗಳು ಕುಪಿತರಾಗಿ. ಎಲೈ ದುರಾತ್ಮನೇ ಯಾವ ರೂಪ ಮದದಿಂದ ಆಶ್ರಮವಾಸಿಗಳಾದ ಸ್ತ್ರೀಯರ ಮೇಲೆ ಮನೋವಿಕಾರವನ್ನು ಉಂಟು ಮಾಡಿದೆಯೋ ಅಂತಹ ನಿನ್ನ ರೂಪ ಕುಷ್ಟರೂಪದಿಂದ ಜಿಗುಪ್ಸಿತವಾಗಲಿ ಎಂದು ಶಾಪವನ್ನು ಕೊಟ್ಟರು. ಕುಷ್ಠರೋಗದಿಂದ ದುಃಖಿತನಾದ ಸಾಂಬಾನನ್ನು ನೋಡಿ ನಾರದನು ಈ ಜಿಗುಪ್ಸಿತವಾದ ವ್ಯಾಧಿ ನಿವಾರಣೆಗೆ ನೀನು ಕೌಮಾರ ಕ್ಷೇತ್ರಕ್ಕೆ ಹೋಗಿ ಧಾರಾ ನದಿಯಲ್ಲಿ ಸ್ನಾನ ಮಾಡಿ ಮೂಲ ಮೃತ್ತಿಕೆಯನ್ನು ಮೈಗೆ ಲೇಪಿಸಿಕೊಂಡು ಧಾರಾತೀರ್ಥದಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಿಪರ್ಯಂತವಾಗಿ ಉಚ್ಚಿಷ್ಟವಿದ್ದ ಮಾರ್ಗದಲ್ಲಿ ಹೊರಳುತ್ತಾ ಹೋಗಿ ವಾಸುಕಿಯನ್ನು ದರ್ಶನ ಮಾಡಿದರೆ ರೋಗ ನಿವೃತ್ತಿಯಾಗುವುದು ಎಂದು ಕ್ಷೇತ್ರ ಮಹಾತ್ಮೆಯನ್ನು ಉಪದೇಶಿಸಿದರು.

ಸಾಂಬನು ಕುಮಾರಧಾರಾ ತೀರ್ಥದಲ್ಲಿ ಸ್ನಾನ ಮಾಡಿ ಪರಮ ಭಕ್ತಿಯಿಂದ ಮೂಲ ಮೃತ್ತಿಕೆಯನ್ನು ಮೈಗೆ ಲೇಪಿಸಿಕೊಂಡು,ಅಂಗ ಪ್ರದಕ್ಷಿಣೆಯನ್ನು ಮಾಡುತ್ತಿರಲು ಸ್ವಾಮಿಯ ಅನುಗ್ರಹದಿಂದ ರೋಗ ನಿವೃತ್ತಿಯಾಗಿ,ಮೊದಲಿನ ಸೌಂದರ್ಯವನ್ನು ಹೊಂದಿ ಪರಮಾನಂದದಿಂದ ಲಕ್ಷ ಬ್ರಾಹ್ಮಣ ಸಂತರ್ಪಣೆಯನ್ನು ಮಾಡಿಸಿ ಆ ವಿಪ್ರೋಚ್ಚಿಷ್ಟದಲ್ಲಿ ಹೊರಳಿದನು.ನಾಗರಾಜನು ಸುಪ್ರೀತನಾಗಿ ಅಭಿಮತವಾದ ವರವನ್ನು ಕೊಡಲು ಪರಮ ಪ್ರಮೋಧದಿಂದ ದ್ವಾರಕೆಗೆ ಬಂದನು. ಆ ಕಾಲದಿಂದಲೂ ಈ ಕ್ಷೇತ್ರವೂ ಅಪರಿಹಾರ್ಯಗಳಾದ ರೋಗಗಳಿಗೆ ಸಿದ್ದೌಷಧವೆಂದು ಜಗತ್ಪ್ರಸ್ಸಿದ್ದವಾಯಿತು. ಮಹಾಪಾತಕಿಗಳಾಗಲಿ,ಉಪಪಾತಕಿಗಳಾಗಲೀ, ಈ ಕ್ಷೇತ್ರ ದರ್ಶನದ ಸ್ನಾನ ಮಾಡಿ ಸ್ವಾಮಿ ಸೇವಾಧಿಗಳನ್ನು ಮಾಡಿದರೆ ಇಪ್ಪತ್ತೆಂಟು ತರಹಗಳಾದ ನರಕ ಭಾದೆಗಳು ತಪ್ಪಿ, ದಿವ್ಯಕಲ್ಪ ಪರ್ಯಂತವಾಗಿ ಸ್ವರ್ಗದಲ್ಲಿ ವಾಸ ಮಾಡುತ್ತಾರೆ. ಈ ಬರಹ ತಪ್ಪದೇ ಶೇರ್ ಮಾಡಿರಿ ಸುಬ್ರಮಣ್ಯನ ಕೃಪೆಗೆ ಪಾತ್ರರಾಗಿರಿ. ಈ ಕಾರಣದಿಂದಲೇ ಈ ಕ್ಷೇತ್ರಕ್ಕೆ ಲಕ್ಷಾಂತರ ಜನರು ಆಗಮಿಸಿ ದೇವರ ದರ್ಶನ ಮಾಡುತ್ತಾರೆ.

1 thought on “ಎಲ್ಲ ರೀತಿಯ ಚರ್ಮ ರೋಗವನ್ನು ಗುಣಪಡಿಸುವ ಶಕ್ತಿ ಈ ದೇವರಿಗೆ ಇದೆ

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ