ನಿಮ್ಮ ಎಲ್ಲ ಕಷ್ಟಗಳನ್ನು ದೂರ ಮಾಡುವ ಹನುಮಪ್ಪ

ಹನುಮ ಎಂದರೆ ಸಾಕು ಎಲ್ಲರೂ ಭಕ್ತಿಯಿಂದ ಪೂಜಿಸುತ್ತಾರೆ ನಾವು ಇರುವ ಸ್ಥಳದಿಂದಲೇ ಹನುಮನನ್ನು ಭಕ್ತಿಯಿಂದ ನೆನೆದರೆ ಸಾಕು ಹನುಮನ ಕೃಪೆ ನಮಗೆ ಸಿಗುತ್ತದೆ. ನಮ್ಮ ನಾಡಿನೆಲ್ಲೆಡೆ ಹನುಮನ ದೇವಾಲಯಗಳನ್ನು ಕಾಣಬಹುದು ಆದರೆ ತುಂಬಾ ವಿಶೇಷವಾದ ಹನುಮ ದೇಗುಲ ಗೋಕಾಕ ಮತ್ತು ಮೂಡಲಗಿಯ ಮಾರ್ಗ ಮಧ್ಯದಲ್ಲಿ ಬರುವ ಕಲ್ಲೋಳಿ ಹನುಮಪ್ಪ. ಈ ದೇಗುಲವನ್ನು ರಾಮದಾಸರು ಪ್ರತಿಷ್ಟಾಪನೆ ಮಾಡಿದರಂತೆ. ಹೀಗಾಗಿ ಮಹಾರಾಷ್ಟ್ರ ಪುಣೆ ಮುಂಬೈ ಪ್ರಾಂತಗಳ ಜನರೂ ಕೂಡ ಇಲ್ಲಿನ ಹನುಮನ ಭಕ್ತರಾಗಿದ್ದಾರೆ.

ಈ ಸಮರ್ಥ ರಾಮದಾಸರು ತುಂಬಾ ಪ್ರತಿಭಾವಂತರು ಇವರು ಮಹಾರಾಷ್ಟ್ರದಲ್ಲಿ ಬಾಳಿದ ಸಂತರು.ಶ್ರೀ ರಾಮನ ಭಕ್ತರಾಗಿ ಚಾಪಳದಲ್ಲಿ ಶ್ರೀ ರಾಮ ಮಂದಿರವನ್ನು ಸ್ಥಾಪನೆ ಮಾಡಿ . ಸಜ್ಜನಗಡದಲ್ಲಿ ನೆಲೆಸಿ ಜನರಲ್ಲಿ ಧರ್ಮ ಅಧ್ಯಾತ್ಮ ಚಿಂತನೆಯನ್ನು ಪರಿಹರಿಸಿದವರು.ಶಿವಾಜಿ ಮಹಾರಾಜನಿಗೆ ಅಧ್ಯಾತ್ಮಿಕ ಧರ್ಮ ಗುರುಗಳಾಗಿ ಧರ್ಮ ಬೋಧನೆ ಮಾಡಿದ ಇವರು ರಾಮನ ಆರಾಧಕ ಹನುಮನ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಿದರು. ಸವದತ್ತಿಯ ರಟ್ಟರ ಶಾಸನದಲ್ಲಿ ಇದನ್ನು ಸಿಂಧನಕಲ್ಲೋಳಿ ಎಂದು ಸಹ ಇದನ್ನು ಕರೆಯಲಾಗುತ್ತದೆ.

ಇದನ್ನು ಏಕೆ ಕಲ್ಲೋಳಿ ಎಂದು ಕರೆಯುತ್ತಾರೆ ಎಂದರೆ ಇದು ಘಟಪ್ರಭಾ ನದಿಯ ಉಪನದಿಯಾದ ಇಂದ್ರವೇಣಿ ನದಿ ದಂಡೆಯ ಮೇಲೆ ಈ ಊರು ಇರುವುದು.ಕರಿಕಲ್ಲು ಹಾಸಿನ ಮೇಲೆ ಈ ನದಿ ಹರಿಯುವುದರಿಂದ ಈ ಊರನ್ನು ಕಲ್ಲು ಹೊಳೆಯ ಊರು ಕಲ್ಲೋಳಿ ಎಂದು ಕರೆದಿರುವರು. ಈ ಊರಿನ ಜನ ಹನುಮಪ್ಪನನ್ನು ಮಾರುತೆಪ್ಪ ಕಲ್ಲೋಳೆಪ್ಪ ಎಂದು ಆರಾಧಿಸುವರು. ಈ ದೇವಸ್ಥಾನದ ಸುತ್ತಲೂ ಎತ್ತರದ ವಿಶಾಲವಾದ ಗೋಡೆಯನ್ನು ಹೊಂದಿದೆ. ಮಹಾದ್ವಾರವನ್ನು ಪ್ರವೇಶಿಸಿ ಒಳಬಂದರೆ ಅಲ್ಲಿ ಚಿಕ್ಕ ಜಿಡ್ಡಿ ಬಾಗಿಲು ಕಾಣುತ್ತದೆ.ಅದರ ಮುಂದೆ ಬೋರಗಲ್ ಇದೆ. ಈ ಚಿಕ್ಕ ಜಿಡ್ಡಿ ಬಾಗಿಲಿನಿಂದ ಒಳ ಪ್ರವೇಶಿಸಿದರೆ ವಿಶಾಲವಾದ ಪ್ರಾಂಗಣ ಶಿವನ ಮೂರ್ತಿ ಹೊಂದಿದ ಪುಟ್ಟ ದೇಗುಲ ಇಲ್ಲಿ ಎತ್ತರವಾದ ದೇವಾಲಯದ ಒಳಗೆ ನಿಂತಿರುವ ಹನುಮಪ್ಪನ ಮೂರ್ತಿ ಗಮನ ಸೆಳೆಯುತ್ತದೆ

ಈ ಹನುಮಪ್ಪನ ಪೂಜೆಯ ತೀರ್ಥಜಲವನ್ನು ಹಾಗೂ ಲಿಂಗದ ಪೂಜಾ ತೀರ್ಥದ ಜಲವನ್ನು ನಂಜು ನಿವಾರಕವಾಗಿ ಬಳಕೆ ಮಾಡುತ್ತರೆ. ಈ ತೀರ್ಥದಲ್ಲಿ ಅಂತಹ ಶಕ್ತಿಯಿದೆ ಅಷ್ಟೇ ಅಲ್ಲ ಚಿಕ್ಕ ಜಿಡ್ಡಿ ಬಾಗಿಲಿನ ಮುಂದಿರುವ ಬೋರಗಲ್‍ಗೆ ನಿಮ್ಮ ಶರೀರದ ತಲೆ ಬೆನ್ನು ಸೊಂಟ ಇತ್ಯಾದಿ ಭಾಗಕ್ಕೆ ಸ್ಪರ್ಶಿಸಿದರೆ ಅವುಗಳಲ್ಲಿರುವ ವಾಯುಕಾರಕ ನೋವು ಮಾಯವಾಗುವುದೆಂಬ ನಂಬಿಕೆ. ಹನುಮಪ್ಪ ದೇವರ ಬೃಹತ್ ಪಾದುಕೆಗಳನ್ನು ಭಕ್ತರು ತಲೆಯ ಮೇಲೆ ಇರಿಸಿಕೊಳ್ಳುವ ಮೂಲಕ ಹನುಮನ ಆರ್ಶಿವಾದವನ್ನು ಪಡೆಯುತ್ತಾರೆ.

ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಮಾರುತಿ ದೇವರ ಕಾರ್ತಿಕೋತ್ಸವ ಜರುಗುತ್ತದೆ.ಮಾರ್ಗಸಿರ ಮಾಸದಲ್ಲಿ ಪಲ್ಲಕ್ಕಿ ಉತ್ಸವ ಜರಗುತ್ತದೆ. ಎರಡು ವಾರಗಳ ಕಾಲ ಅದ್ದೂರಿ ಜಾತ್ರೆ ಕೂಡ ಹನುಮಪ್ಪನಿಗೆ ಜರಗುತ್ತದೆ. ಅಮವಾಸೆ ಮತ್ತು ಶನಿವಾರಗಳಂದು ಇಲ್ಲಿ ಅಪಾರ ಭಕ್ತ ಜನರು ಆಗಮಿಸಿ ಹನುಮಪ್ಪನ ದರ್ಶನ ಪಡೆಯುವರು. ಕಲ್ಲೋಳಿ ಇದು ಗೋಕಾಕದಿಂದ 11 ಕಿ.ಮೀ ಬೆಳಗಾವಿಯಿಂದ 70 ಕಿ.ಮೀ. ಬೆಂಗಳೂರಿನಿಂದ 550 ಕಿ.ಮೀ ಅಂತರದಲ್ಲಿರುವ ಸ್ಥಳ.

Check Also

ಕಲಶದಲ್ಲಿ ವೀಳ್ಯದೆಲೆ ಇಟ್ಟು ಪೂಜೆ ಮಾಡಿದ್ರೆ ಶುಭ ಫಲ ನಿಶ್ಚಿತ

ಎಲ್ಲರೂ ಮನೆಯಲ್ಲಿ ದೇವರನ್ನು ಪೂಜಿಸುತ್ತಾರೆ ದೇವರನ್ನು ಪೂಜಿಸಲು ಎಂದು ಪ್ರತ್ಯೇಕವಾಗಿ ಒಂದು ಕೊಠಡಿಯನ್ನು ಕೆಲವರು ನಿರ್ಮಾಣ ಮಾಡಿರುತ್ತಾರೆ ಆ ಕೊಠಡಿಯಲ್ಲಿ …

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ