ಧರ್ಮಸ್ಥಳ ಮಂಜುನಾಥ ಸ್ವಾಮಿ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ ಈತನ ಪವಾಡಗಳನ್ನು ಹೇಳುತ್ತಾ ಕುಳಿತರೇ ದಿನಗಳು ಸಾಲದು ಅಷ್ಟರ ಮಟ್ಟಿಗೆ ಈತ ಜಗ್ಗತ್ ಪ್ರಸಿದ್ದ. ಧರ್ಮಸ್ಥಳಕ್ಕೆ ಭೇಟಿ ನೀಡುವುದು ಒಂದು ಪುಣ್ಯದ ಕೆಲಸ ಎಂದರೆ ತಪ್ಪಾಗಲಾರದು ಏಕೆ ಅಂದ್ರೆ ನೇತ್ರಾವತಿ ನದಿಯಲ್ಲಿ ಮಿಂದು ನಮ್ಮ ಹಲವು ಜನ್ಮ ಜನ್ಮ ಗಳ ಪಾಪ ಕರ್ಮಗಳನ್ನು ಕಳೆಯುತ್ತಾ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರೆ ಭೂಮಿಯ ಮೇಲೆ ಸ್ವರ್ಗ ಕಂಡ ಹಾಗೇ ಎಂದರೆ ತಪ್ಪಾಗುವುದಿಲ್ಲ ಬಿಡಿ. ಧರ್ಮಸ್ಥಳಕ್ಕೆ ಪ್ರತಿ ನಿತ್ಯ ಸಾವಿರಾರು ಜನ ಭೇಟಿ ನೀಡುವರು ಬರುವ ಭಕ್ತರ ಹಲವು ರೀತಿಯ ಸಂಕಷ್ಟಗಳನ್ನು ಮಂಜುನಾಥ ಸ್ವಾಮಿಯು ತಪ್ಪದೇ ಪರಿಹಾರ ಮಾಡುವರು ಈಗಾಗಲೇ ಲಕ್ಷಾಂತರ ಜನ ತಮ್ಮ ಹಲವು ಸಮಸ್ಯೆಗಳಿಂದ ಮುಕ್ತಿ ಹೊಂದಿರುವುದು ಸುಳಲ್ಲ. ಪಕ್ಕದ ರಾಜ್ಯಗಳಾದ ತಮಿಳ್ನಾಡು ಅಂದ್ರ ಪ್ರದೇಶ ಕೇರಳ ಹೀಗೆ ದೇಶದ ಎಲ್ಲ ಭಾಗಗಳಿಂದ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.

ನಾವು ಕಂಡ ಹಾಗೇ ಇಲ್ಲಿ ಬರೀ ಒಂದೇ ಧರ್ಮದ ಜನಕ್ಕೆ ಸೀಮಿತವಾಗಿಲ ಶಿವ ಎಂದರೆ ಸರ್ವವ್ಯಾಪಿ ಆಗಿರುವುದರಿಂದ ಅನ್ಯ ಧರ್ಮದ ಜನರು ಇಲ್ಲಿಗೆ ಬಂದು ಪ್ರಾರ್ಥನೆ ಮಾಡುತ್ತಾರೆ. ಮಂಜುನಾಥ ಸ್ವಾಮಿಗೆ ಜಾತಿ ಧರ್ಮ ಬಡವ ಸಾಹುಕಾರ ಎಂಬುದು ತಿಳಿದಿಲ್ಲ ಯಾರು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾರೆ ಅವರಿಗೆ ಸಕಲವನ್ನು ನೀಡುತ್ತಾರೆ. ಈ ಸ್ಥಳದಲ್ಲಿ ಧರ್ಮ ದೇವತೆಗಳು ನೆಲೆಸಿರುವ ಕಾರಣ ಜನರು ತಪ್ಪುಗಳನ್ನು ಮಾಡುವುದಕ್ಕೆ ಹೆದರುತ್ತಾರೆ. ಸಾಕಷ್ಟು ವಿಷಯಗಳಿಗೆ ಇಲ್ಲಿ ನ್ಯಾಯ ತೀರ್ಮಾನ ಆಗಿರುವುದು ಸಹ ಉಂಟು. ಸುಳ್ಳು ಹೇಳಿದವರಿಗೆ ತಕ್ಷ ಶಿಕ್ಷೆ ಮಂಜುನಾಥ ಸ್ವಾಮಿ ಕೊಡದೆ ಬಿಡುವುದಿಲ್ಲ.

ಇಲ್ಲಿರುವ ಅನ್ನಪೂರ್ಣ ಭೋಜನಾಲಯಕ್ಕೆ ಸಾವಿರಾರು ಭಕ್ತರು ಒಮ್ಮೆ ಬಂದು ಅನ್ನ ಪ್ರಸಾದ ಸೇವನೆ ಮಾಡುತ್ತಾರೆ. ಧರ್ಮಸ್ಥಳದಲ್ಲಿ ಇರುವಷ್ಟು ರುಚಿ ಸೂಚಿ ನಾವು ಬೇರೆ ಎಲ್ಲಿಯೂ ಕಂಡಿಲ್ಲ ಎಂದು ಸಾಕಷ್ಟು ಜನರು ಹೇಳುತ್ತಾರೆ. ಈ ಕ್ಷೇತ್ರವು ಮಂಗಳೂರು ನಗರದಿಂದ ಕೇವಲ ೬೦ ಕಿಲೋಮೀಟರ್ ದೂರದಲ್ಲಿ ಇದೆ. ಇದನ್ನು ಭೂಕೈಲಾಸ ಎಂದರೆ ತಪ್ಪಾಗುವುದಿಲ್ಲ ಬಿಡಿ. ಇಲ್ಲಿ ಸಾಕ್ಷಾತ್ ಮಹಾ ಶಿವನೇ ನೆಲೆಸಿದ್ದಾನೆ. ಇಲ್ಲಿ ಧರ್ಮಕ್ಕೆ ಬೆಲೆ ಇಲ್ಲ ಭಕ್ತಿಗೆ ಮಾತ್ರ ಬೆಲೆ ಇರುವುದು ಹಾಗೇ ಹೇಳುತ್ತಾ ಹೋದರೆ ಇಲ್ಲಿ ನೆಲೆಸಿರುವುದು ಶೈವ ದೇವರು ಆದರೆ ಪೂಜೆ ಮಾಡುವುದು ಮಾತ್ರ ವೈಷ್ಣವ ಮತ ದವರು ಇಲ್ಲಿನ ಧರ್ಮ ದರ್ಶಿಗಳು ಜೈನ ಸಮುದಾಯದವರು ಹೀಗೆ ಮೂರು ಧರ್ಮಗಳ ಸಂಗಮ ಇಲ್ಲಿದೆ. ಧರ್ಮಸ್ಥಳ ಎಂದರೆ ಇದು ಸಮಾನ್ಯ ಕ್ಷೇತ್ರ ಅಂತು ಅಲ್ಲವೇ ಅಲ್ಲ ಇದು ಒಂದು ರೀತಿ ನ್ಯಾಯ ಪೀಠ ಸಾಹಿತ್ಯ ಸರಸ್ವತಿಯ ನೆಲೆಬೀಡು. ತಾಯಿ ಅನ್ನಪೂರ್ಣೆಶ್ವರಿ ಇರುವಂತಹ ಭವ್ಯ ನಾಡು ಎನ್ನಬಹುದು.

ಸರಿ ಸುಮಾರು ನಮಗೆ ತಿಳಿದ ಹಾಗೇ ೮೦೦ ಕ್ಕೂ ಹೆಚ್ಚು ವರ್ಷಗಳಿಂದ ಮಂಜುನಾಥ ಸ್ವಾಮಿಯು ಭಕ್ತರ ಕಷ್ಟ ದುಖಗಳಿಗೆ ಸ್ಪಂದನೆ ಮಾಡುತ್ತಾ ಇದ್ದಾರೆ. ಈ ಕಾರ್ತಿಕ ಸಮಯದಲ್ಲಿ ಮಂಜುನಾಥ ಸ್ವಾಮಿಯ ದರ್ಶನ ಪಡೆಯುವುದು ನಮ್ಮ ಪೂರ್ವ ಜನ್ಮದ ಪುಣ್ಯ. ನಿಮಗೆ ಸಮಯ ಸಿಕ್ಕರೆ ಖಂಡಿತ ಒಮ್ಮೆ ಮಂಜುನಾಥ ಸ್ವಾಮಿಯ ದರ್ಶನ ಪಡೆಯಿರಿ ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಖಂಡಿತ ಒಂದು ಪರಿಹಾರ ಸಿಕ್ಕೇ ಸಿಗುತ್ತದೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ