ರಾಘವೇಂದ್ರ ಸ್ವಾಮಿಯ ಮಹಿಮೆ ಅದ್ಬುತವಾದದ್ದು

ಪವಾಡ ಪುರುಷ ಶ್ರೀ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಜನಿಸಿದ್ದು ೧೫೯೯ ಇಸವಿ ತಮಿಳುನಾಡಿನ ಭುವನಗಿರಿ ಎಂಬ ಸಣ್ಣ ಗ್ರಾಮದಲ್ಲಿ. ತಾಯಿಯ ಹೆಸರು ಗೋಪಿಕಾಂಬ ತಂದೆ ಹೆಸರೇ ತಿಮ್ಮಣ್ಣ ಭಟ್ಟರು. ಬಾಲ್ಯದಲ್ಲೇ ಬೇರೆ ಹುಡುಗರಿಗಿಂತ ಅತ್ಯಂತ್ಯ ವಿಭಿನ್ನ ಮತ್ತು ಅತೀಯಾದ ಬುದ್ದಿ ಶಕ್ತಿ ಹೊಂದಿದ್ದ ವೆಂಕಣ್ಣ ತನ್ನ ಸಂಪೂರ್ಣ ವಿಧ್ಯಾಭ್ಯಾಸವನ್ನು ತನ್ನ ಸೋದರ ಮಾವನಾದ ಶ್ರೀ ಲಕ್ಷ್ಮಿ ನರಸಿಂಹ ಚಾರ್ ಅವರ ಬಳಿ ಮಧುರೈ ನಲ್ಲಿ ಸಂಪೂರ್ಣಗೊಂಡಿತು. ಸಣ್ಣ ವಯಸ್ಸಿನಲ್ಲೇ ಪ್ರವಚನ, ಸಂಸ್ಕೃತ ಸ್ಲೋಖ ಎಲ್ಲವನು ಸುಲಲಿತವಾಗಿ ವೆಂಕಣ್ಣ ಹೇಳುತ್ತಿದ್ದು ಎಲ್ಲರಿಗು ಅಚ್ಚರಿ ಉಂಟು ಮಾಡಿತ್ತು. ಮುಂದೆ ಈ ವ್ಯಕ್ತಿ ಮಹಾನ್ ಸಾಧನೆ ಮಾಡುತ್ತಾನೆ ಎಂದು ಹಲವಾರು ಜನ ಭವಿಷ್ಯ ನುಡಿದಿದ್ದರು.

ವೆಂಕಣ್ಣನಿಗೆ ತನ್ನ ಸಣ್ಣ ವಯಸ್ಸಿನಲ್ಲೇ ತಂದೆಯವರಾದ ತಿಮ್ಮಣ್ಣ ಭಟ್ಟರು ಸತ್ತು ಹೋಗಿದ್ದರಿಂದ ಮನೆಯ ಸಂಪೂರ್ಣ ಜವಾಬ್ದಾರಿ. ವೆಂಕಣ್ಣನ ಮೇಲೆ ಬಿತ್ತು. ಅಲ್ಪ ಸಮಯದಲ್ಲೇ ಕುಂಭ ಕೋಣದಲ್ಲಿರುವ ಶ್ರೀ ಶ್ರೀ ಸುದೀಂದ್ರ ತೀರ್ಥರ ಬಳಿ ಮೀಮಾಂಸ ದ್ವೈತ್ವ ವೇದಾಂತ ಪಾರಾಯಣ ಮಾಡಿದರು. ನಂತರ ಇವರಿಗೆ ಸರಸ್ವತಿ ಎಂಬಾಕೆಯೊಂದಿಗೆ ವಿವಾಹವು ಆಯಿತು. ಕುಂಭ ಕೋಣದಲ್ಲಿರುವ ಮಕ್ಕಳಿಗೆ ಯಾವುದೇ ರೀತಿ ಹಣ ಪಡೆಯುತ್ತಿರಲಿಲ್ಲ ಅಲ್ಲಿನ ಮಕ್ಕಳು ಏನಾದರು ಕಾಣಿಕೆ ನೀಡಿದರೆ ಅದೇ ಜೀವನೋಪಾಯಕ್ಕೆ ಆಗುತ್ತಾ ಇತ್ತು. ಸಾಂಸಾರಿಕ ಜೀವನ ಹೆಗಲಿಗೆ ಬಿದ್ದು ಊಟಕ್ಕೂ ಹೆಚ್ಚಿನ ಕಷ್ಟ ಪಡುವ ಸಮಸ್ಯೆ ಬಂದಿತು. ಜೀವನ ನಡೆಸುವುದು ಎಷ್ಟು ಕಷ್ಟ ಆಗಿತ್ತು ಅಂದ್ರೆ ಮನೆಯಲ್ಲಿದ್ದ ಪಾತ್ರೆ ಪಗಡೆಗಳು ಸಹ ಕಳುವಾದವು.

ಎಲ್ಲವು ಶ್ರೀ ಹರಿ ಇಚ್ಛೆ ಎಂದು ಪ್ರಾರ್ಥಿಸುತ್ತಾ ಜೀವನ ನಡೆಸಿಕೊಂಡು ಹೋದರು. ಅವರ ಭಕ್ತಿಯ ತೀವ್ರತೆ ಎಷ್ಟಿತ್ತು ಎಂಬುದಕ್ಕೆ ಒಂದು ಉದಾಹರಣೆ ಇದೆ ಕೇಳಿ. ಒಮ್ಮೆ ವೆಂಕಟನಾಥರಿಗೆ ಸಮಾರಂಭವೊಂದರಲ್ಲಿ ಪಾಲ್ಗೊಳುವ ಆಹ್ವಾನ ಸಿಕ್ಕಿತು. ಆದರೆ ಅಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡದೆ ಅವರನ್ನು ಗಂಧ ಅರೆಯುವ ಕೆಲಸಕ್ಕೆ ನೇಮಿಸಲಾಯಿತು. ಅವರು ಬೇಸರಿಸಿಕೊಳ್ಳದೆ ಗಂಧದ ಕೊರಡನ್ನು ತೇಯ್ದರು. ತೇಯುವಾಗ ಪದ್ಧತಿಯ ಪ್ರಕಾರ ಅಗ್ನಿಸೂಕ್ತವನ್ನು ಪಠಿಸುತ್ತಿದ್ದರು.

ವೆಂಕಟನಾಥರ ಭಕ್ತಿ ಎಷ್ಟರ ಮಟ್ಟಿಗ್ಗೆ ಇತ್ತು ಅಂದ್ರೆ ಒಮ್ಮೆ ವೆಂಕಟನಾಥರು ಒಂದು ಸಮಾರಂಭಕ್ಕೆ ಭೇಟಿ ನೀಡಿದ್ದರು ಅಲ್ಲಿ ಅವರಿಗೆ ಕೆಲವು ಜನರು ವೆಂಕಟನಾಥರಿಗೆ ಅವಮಾನ ಮಾಡಿದರು ಗಂಧ ತೇಯುವವ ಕೆಲ್ಸಕ್ಕೆ ನೇಮಿಸಿದ್ದರು ಅವರು ಬೇಸರ ಪಡದೆ ಅಗ್ನಿ ಸೂಕ್ತವನ್ನು ಪಾರಾಯಣ ಮಾಡಿದರು. ಗಂಧವನ್ನು ಲೇಪ ಮಾಡಿಕೊಂಡ ಕೊಡಲೇ ಎಲ್ಲರಿಗು ಅತೀಯಾದ ಮೈ ಉರಿ ಬರಲು ಪ್ರಾರಂಭವಾಯಿತು ಇದನ್ನು ಮುಂಚೆ ತಿಳಿಯದ ಕೆಲವರು ವೆಂಕಟನಾಥರನ್ನು ಪ್ರಶ್ನೆ ಮಾಡಿದಾಗ ಅವರು ಅಗ್ನಿ ಸೂಕ್ತ ಪಾರಾಯಣ ಮಾಡಿದ್ದು ಹೇಳಿದರು ನಂತರ ಅವರು ವರುಣ ಮಂತ್ರ ಪಾರಾಯಣ ಮಾಡಿದಾಗ ಎಲ್ಲರ ಉರಿ ಸಂಪೂರ್ಣ ಗುಣವಾಯಿತು ಗುರು ವೆಂಕಣ್ಣ ಅವರ ಶಕ್ತಿ ಏನು ಎಂದು ಎಲ್ಲರಿಗು ತಿಳಿಯಿತು.

ವೆಂಕಟನಾಥರು ಮಠಕ್ಕೆ ಉತ್ತಮ ಹೆಸರನ್ನು ತಂದು ಕೊಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಅನೇಕ ರೀತಿ ಸ್ಪರ್ಧೆಗಳಲ್ಲಿ ಜಯಶಾಲಿ ಆಗಿ ಮಹಾ ಭಾಷ್ಯಕಾರ ಎಂಬ ಬಿರುದು ಇವರಿಗೆ ಸಿಕ್ಕಿದೆ. ಪಾಂಡಿತ್ಯದಲ್ಲಿ ಇವರನ್ನು ಸೋಲಿಸಲು ಅನೇಕ ರೀತಿಯ ಜನರು ಕುತಂತ್ರಗಳನ್ನು ಮಾಡಿದರು ಇವರನ್ನು ಸೋಲಿಸಲು ಸಾಧ್ಯವೇ ಆಗಲಿಲ್ಲ. ಕೊನೆಗೆ ಇವರಿಗೆ ಶರಣಾಗಿದ್ದಾರೆ. ವೆಂಕಟನಾಥರ ಪಾಂಡಿತ್ಯ ಮತ್ತು ಅವರ ಬುದ್ದಿ ಶಕ್ತಿಗೆ ಮೆಚ್ಚಿಗೆ ಅಂದಿನ ತಂಜಾವೂರಿನ ಮಠ ಪೀಠಾಧಿಪತಿಗಳಾದ ಸುದೀಂಧ್ರ ತೀರ್ಥರು ೧೬೨೧ ನೇ ಇಸವಿಯಲ್ಲಿ ಸನ್ಯಾಸತ್ವ ದೀಕ್ಷೆ ತೊಡಿಸಿ ಗುರು ರಾಘವೇಂದ್ರ ತೀರ್ಥ ಎಂದು ನಾಮಾಂಕಿತರಾದರು. ನಂತರ ಇವರ ಪವಾಡಗಳು ಮತ್ತಷ್ಟು ಹೆಚ್ಚುತ್ತಲೇ ಹೋಯಿತು. ಅನೇಕ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಕಷ್ಟ ಗಳಿಗೆ ಇವರು ದಾರಿ ದೀಪವಾದರೂ. ಮುಂದಿನ ಗುರುವಾರ ರಾಯರ ಚರಿತ್ರೆ ಮುಂದುವರೆಯಲಿದೆ.

Check Also

ಮಹಾ ಗಣಪತಿಗೆ ನಮಿಸುತ್ತಾ ಭಾನುವಾರದ ನಿಮ್ಮ ರಾಶಿ ಭವಿಷ್ಯ

ಸಮಸ್ಯೆ ಏನೇ ಇರಲಿ ಅದಕ್ಕೆ ಪರಿಹಾರ ನಮ್ಮದು ನಿಮ್ಮ ಜೀವನದಲ್ಲಿ ಕತ್ತಲೆ ಆಗಿದ್ಯೇ ನಿಮ್ಮ ಸಮಸ್ಯೆಗಳಿಗೆ ಮುಕ್ತಿ ಬೇಕೇ ನಿಮ್ಮ …

One comment

  1. ಲಕ್ಷ್ಮಿಕಾಂತ್

    Ella Sri Guru Rayara Krupe

Leave a Reply

Your email address will not be published. Required fields are marked *