ಮೇಷ: ಈ ದಿನ ಹೆಚ್ಚು ಮಂಗಳ ಕಾರ್ಯದಲ್ಲಿ ಭಾಗವಹಿಸುವಿರಿ ನೀವು ಮಾಡುವ ನಿಸ್ವಾರ್ಥ ಸೇವೆಗೆ ಹಲವು ಜನರಿಂದ ಪ್ರಶಂಶೆಗೆ ಪಾತ್ರರಾಗುವಿರಿ. ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಾಣಲಿದೆ. ನಿಮ್ಮ ಮನೆಯಲ್ಲಿ ಮಗಳು ಅಥವ ಮಗ ಇದ್ದರೆ ಅವರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇರುತ್ತದೆ.
ವೃಷಭ: ಈ ದಿನ ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವ ಹೆಚ್ಚು ಪ್ರಯತ್ನ ಮಾಡಿ. ಹೆಚ್ಚಿನ ಜನರ ಮೇಲೆ ನೀವು ಅನುಮಾನ ಪಡುವ ಸಾಧ್ಯತೆ ಇದೆ. ಆದಷ್ಟು ಈ ದಿನ ಪ್ರಯಾಣದ ಕಡೆ ಹೆಚ್ಚಿನ ಜಾಗ್ರತೆವಹಿಸಿಕೊಳ್ಳಿ.

ಮಿಥುನ: ನಿಮ್ಮ ವ್ಯಕ್ತಿತ್ವತಕ್ಕಂತೆ ನಿಮಗೆ ಸಮಾಜದಲ್ಲಿ ಹೆಚ್ಚಿನ ಗೌರವ ಸಿಗಲಿದೆ. ನಿಮ್ಮ ಹಲವು ಯೋಜನೆಗಳು ಮತ್ತು ಕಾರ್ಯಗಳು ಯಾವುದೇ ಅಡೆತಡೆ ಇಲ್ಲದೆ ಸಾಗುವುದು. ನಿಮ್ಮ ಮಗನಿಂದ ನಿಮಗೆ ಹೆಚ್ಚಿನ ಲಾಭ ಸಿಗಲಿದೆ.
ಕಟಕ: ನಿಮಗೆ ಈ ದಿನ ಎದುರಾಗುವ ಸಣ್ಣ ಸಣ್ಣ ಸಮಸ್ಯೆ ಏನೇ ಆಗಲಿ ಅದನ್ನು ಎದುರಿಸಲು ಹೆಚ್ಚಿನ ಮಾನಸಿಕ ಸಿದ್ದತೆ ಮಾಡಿಕೊಳ್ಳಿ. ನಿಮ್ಮ ಸ್ನೇಹಿತರಿಂದ ಈ ದಿನ ನಿಮಗೆ ಹೆಚ್ಚು ಬೆಂಬಲ ದೊರೆಯುತ್ತದೆ ಜೊತೆಗೆ ಗೆಳೆಯರಿಂದ ಸಾಕಷ್ಟು ಉತ್ತಮ ಕೆಲಸಗಳಿಗೆ ಪ್ರಶಂಶೆ ದೊರೆಯಲಿದೆ.

ಸಿಂಹ: ಸರ್ಕಾರಿ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತದೆ. ವ್ಯವಹಾರದಲ್ಲಿ ಅಲ್ಪ ನಷ್ಟ ಉಂಟಾಗಲಿದೆ. ಕುಟುಂಬದ ಜನರ ಜೊತೆಗೆ ಹೆಚ್ಚಿನ ಪ್ರೀತಿ ವಿಶ್ವಾಸ ಮೂಡಲಿದೆ. ಸ್ನೇಹಿತರೊಂದಿಗೆ ನಿಮ್ಮ ವಿಶ್ವಾಸ ಹೆಚ್ಚಾಗಲಿದೆ.
ಕನ್ಯಾ: ವ್ಯಹಾರದಲ್ಲಿ ಹೆಚ್ಚಿನ ಗೊಂದಲ ಮೂಡಲಿದೆ. ಸಣ್ಣ ಸಣ್ಣ ಹೂಡಿಕೆಗಳಿಂದ ಮತ್ತು ವಿವಿಧ ರೀತಿ ಆದಾಯ ಹೆಚ್ಚಾಗಲಿದೆ. ಸ್ನೇಹಿತರ ಸಹಾಯ ಈ ದಿನ ನಿಮಗೆ ನಿಶ್ಚಿತ ಸಮಯದಲ್ಲಿ ಸಿಗಲಿದೆ. ಲಕ್ಷ್ಮಿ ನರಸಿಂಹ ದೇವರ ಪ್ರಾರ್ಥನೆ ಮಾಡಿ ನಿಮಗೆ ಶುಭವಾಗಲಿದೆ.

ತುಲಾ: ಈ ದಿನ ನೀವು ವಾಹನ ಸಂಚಾರ ಮಾಡುವಾಗ ಹೆಚ್ಚಿನ ಸೂಕ್ಷ್ಮತೆ ಇರಲಿ ಮತ್ತು ಹೆಚ್ಚಿನ ಜಾಗ್ರತೆ ಇರಲಿ. ನೀವು ಕೆಲವು ವಿಷಯದಲ್ಲಿ ಅತೀಯಾದ ಅವಸರ ಮಾಡುತ್ತೀರಿ ಅದೆಲ್ಲವೂ ನಿಮಗೆ ಹೆಚ್ಚಿನ ಸಮಸ್ಯೆ ಉಂಟು ಮಾಡಲಿದೆ. ಲಕ್ಷ್ಮಿ ನರಸಿಂಹನ ನೆನೆದು ಈ ದಿನ ಶುರು ಮಾಡಿ ನಿಮಗೆ ಶುಭವಾಗಲಿದೆ.
ವೃಶ್ಚಿಕ: ನಿಮ್ಮ ದುಡುಕು ಸ್ವಭಾವದಿಂದ ಈ ದಿನ ನೀವು ಸಾಕಷ್ಟು ಕಳೆದುಕೊಳ್ಳುವ ಸಾಧ್ಯತೆ ಇದೆ. ಸಾಲ ಮರುಪಾವತಿ ಮಾಡುವ ಬಗ್ಗೆ ನೀವು ಹೆಚ್ಚಿನ ಯೋಚನೆಯಲ್ಲಿ ಇರುತ್ತೀರಿ. ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚಿ ಇಲ್ಲ ಎಂದರೆ ನಿಮ್ಮ ಸಮಸ್ಯೆಗಳಿಗೆ ನೀವೇ ಆಹ್ವಾನ ನೀಡಿದಂತೆ

ಧನಸ್ಸು: ಮನೆಯಲ್ಲಿರುವ ಮಕ್ಕಳ ವಿದ್ಯಾಭ್ಯಾಸ ಹೆಚ್ಚಿನ ಪ್ರಗತಿಯತ್ತ ಹೋಗುವುದು. ಈ ದಿನ ನಿಮ್ಮ ದೈನಂದಿನ ಎಲ್ಲ ಕೆಲಸಗಳನ್ನು ಹೆಚ್ಚು ಉತ್ಸಾಹದಿಂದ ಮಾಡುತ್ತೀರಿ. ದೂರದ ಪ್ರಯಾಣ ಬೆಳೆಸುವ ಸಾಧ್ಯತೆ ಬಂದರೂ ಬರಬಹುದು.
ಮಕರ: ನಿಮ್ಮ ಕೆಲಸದಲ್ಲಿ ಮಾಡುವ ಎಷ್ಟೋ ವಿಷಯಗಳಿಗೆ ನಿಮ್ಮ ಮೇಲಿನ ಅಧಿಕಾರಿಗಳಿಂದ ಹೆಚ್ಚಿನ ಪ್ರಶಂಶೆ ನಿಮಗೆ ದೊರೆಯಲಿದೆ. ಈ ದಿನ ನಿಮಗೆ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವಿರಿ. ನಿಮ್ಮ ಇಷ್ಟ ದೇವರ ಪ್ರಾರ್ಥನೆ ನಿಮಗೆ ಶುಭ ಫಲ ನೀಡಲಿದೆ.

ಕುಂಭ: ಸಾಕಷ್ಟು ದಿನಗಳಿಂದ ಸಮಸ್ಯೆ ಇದ್ದ ಆಸ್ತಿ ವಿವಾದ ಮತ್ತು ಕೋರ್ಟು ಕಛೇರಿ ಸಮಸ್ಯೆಗಳು ದೂರವಾಗುತ್ತಾ ನೆಮ್ಮದಿ ಜೀವನ ನಿಮಗೆ ಸಿಗುವ ಸಮಯ ಬಂದಿದೆ. ಅನ್ಯರ ಮಾತು ಕೇಳಿ ಎಂದು ಹಾಳಾಗಬೇಡಿ. ನಿಮ್ಮ ಸ್ವಂತ ಬುದ್ದಿ ಉಪಯೋಗ ಮಾಡಿದ್ರೆ ಹೆಚ್ಚಿನ ಲಾಭ ನಿಮಗೆ.
ಮೀನ: ವ್ಯವಹಾರದಲ್ಲಿ ಹೆಚ್ಚಿನ ಗೊಂದಲ ಸೃಷ್ಟಿ ಆಗಲಿದೆ. ಯಾವುದಕ್ಕೂ ದೃತಿಗೆಡದೆ ನಿಮ್ಮ ಇಷ್ಟ ದೇವರ ಸಂಕಲ್ಪ ಮಾಡಿಕೊಳ್ಳಿರಿ. ಕುಟುಂಬದಲ್ಲಿ ನೆಮ್ಮದಿ ವಾತಾವರಣ ಮೂಡಲಿದೆ. ಹೆಚ್ಚಿನ ಕೆಲಸ ಕಾರ್ಯಗಳು ಈ ದಿನ ಯಾವುದೇ ಅಡ್ಡಿ ಆಂತಕ ಇಲ್ಲದೆ ನಡೆಯಲಿದೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ
%d bloggers like this: